ನಮ್ಮ ಮುಖವನ್ನು ಚೇತೋಹಾರಿಯಾಗಿಸುವ ಉಪಾಯ
ಧಾವಂತದ ಈ ಯುಗದಲ್ಲಿ ಎಲ್ಲದರಲ್ಲೂ ಸ್ಪರ್ದೆಯೇ!
ಓಡುವುದರಲ್ಲಿ, ಹಿಂದೆ ಬೀಳಿಸುವುದರಲ್ಲಿ,
ಅಂತೆಯೇ ಸೌಂದರ್ಯ ವರ್ಧನೆಯಲ್ಲೂ!!!!
ನಾವು ನಿತ್ಯ ಬಳಸುವ ಎಷ್ಟೋ ವಸ್ತುಗಳನ್ನು ಉಪಯೋಗಿಸಿಕೊಂಡೇ ನಾವಿದ್ದುದರಲ್ಲಿಯೇ ಇನ್ನೂ ಸುಂದರವಾಗಿ ಕಾಣಬಹುದು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರಲಾರದು.
ನಾನಿಲ್ಲಿ ಇನ್ನೊಮ್ಮೆ ಅಂತಹದ್ದೇ ವಿಷಯ ( ಉಪಾಯ) ವೊಂದನ್ನು ಸಂಪದಿಗರಿಗಾಗಿ ಪ್ರಸ್ತಾಪಿಸುತ್ತಿದ್ದೇನೆ.
ನಮ್ಮ ಮುಖ ದಿನವೂ ಬಿಸಿಯ, ತಂಪಿನ , ಬಿಸಿಲಿನ, ಮಳೆಯ, ಗಾಳಿಯ , ಕಲುಶಿತ ವಾತಾವರಣದ ಕಾರಣ ಭಗ್ನಗೊಳ್ಳುತ್ತಿರುತ್ತದೆ. ದಿನವೂ ಅಸಂಖ್ಯಾತ ಕಾರಣಗಳಿಂದ ನಮ್ಮ ಮುಖವು ಯುದ್ಧ ಭೂಮಿಯಾಗುತ್ತಿರುತ್ತದೆ.
ಅದಕ್ಕೆ ಅಷ್ಟೇ ಬೇಗದಲ್ಲಿ ನಮ್ಮ ಮುಖದ ಮೇಲಿನ ಮಲೀನತೆಯನ್ನು ಕಳೆದುಕೊಂಡು ಚೇತೋಹಾರಿಯಾಗಿಸುವ ಉಪಾಯವಿದ್ದರೆ...?
ಅದೇ ನಾನು ಹೇಳಹೊರಟಿರುವುದು.
ಶುದ್ಧವಾದ ತೆಂಗಿನೆಣ್ಣೆಯನ್ನು ಎರಡೂ ಕೈಗೆ ಧಾರಾಳವಾಗಿ ಹಚ್ಚಿಕೊಂಡು ಮುಖ ಹಾಗೂ ಕತ್ತಿಗೆ ಧಾರಾಳವಾಗಿ ಹಚ್ಚಿಕೊಂಡು ಎರಡು ನಿಮಿಷ ಉಜ್ಜುತ್ತಿರಿ. ನಂತರ ಮುಖವನ್ನು ಬಿಸಿ ಬಿಸಿ ನೀರಿನ ಹಬೆಗೆ ೧೦-೧೫ ನಿಮಿಷ ಚೆನ್ನಾಗಿ ಬೆವರು ಬರುವಷ್ಟು ಹೊತ್ತು ಒಡ್ಡಿ. ನಂತರ ಹತ್ತಿಯಲ್ಲಿ ಚೆನ್ನಾಗಿ ವರೆಸಿಕೊಳ್ಳಿ , ನಿಮ್ಮ ಮುಖದ ಕೊಳೆ ಎಲ್ಲವೂ ಹತ್ತಿಯಲ್ಲಿ ವರ್ಗಾವಣೆ ಹೊಂದಿರುವುದನ್ನು ಗಮನಿಸಿ. ಹಾಗೂ ನಿಮ್ಮ ಮುಖ ಚೇತೋಹಾರೀಯಾಗಿ ಮಿಂಚುವದನ್ನೂ.
ವಾರಕ್ಕೆ ಎರಡು ಅಥವಾ ಮೂರು ಸಲ ಮಾಡಿಕೊಂಡು , ಪಕ್ಕದವರನ್ನು ಅಸೂಯೆಗೊಳಿಸಿ.