ನಮ್ಮ ಮೆಟ್ರೋ

0

ಚಿತ್ರ :Clickindia

ಬಹಳಾ ವರ್ಷಗಳಾಗಿತ್ತು ಬೆಂಗಳೂರಿನ  ಕಡೆಗೆ ಬಂದು,  ಈ  ನಗರದ ಎಲ್ಲಾತರಹದ ಮಾಲಿನ್ಯದಿಂದ ದೂರ ಇರುವುದು ಒಂದುಥರಹದ ಖುಷಿ.

 

ಮೆಟ್ರೋ ಟ್ರೈನ್ ನಲ್ಲಿ ಪ್ರಯಾಣಿಸಬೇಕೆಂಬ ಆಸೆ ಆಯಿತು, ಸ್ವಲ್ಪ ದುಬಾರಿ ಆದರು ಪರವಾಗಿಲ್ಲ ನೋಡೇಬಿಡೋಣ ಅಂತ ಟಿಕೆಟ್ ಖರೀದಿ ಮಾಡಲು ಕ್ಯೂ ನಲ್ಲಿ ನಿಂತೆ. ವಿತರಕ , 'ಕೊನ್ಸಿ  ಲೈನ್ ಕಾ ಟಿಕೆಟ್ '  ? ಎಂದ, ನಾನು ಕಕ್ಕಾ ಬಿಕ್ಕಿ ಯಾದೆ 'ಲೈನ್' ಅಂದ್ರೆ ? ಅಂದೆ. ನನ್ನ ಹಿಂದೆ ನಿಂತಿದ್ದ  ವ್ಯಕ್ತಿ ಒಬ್ಬರು "ಎಲ್ಲಿಗೆ ಹೋಗ್ಬೇಕು?" ಅಂತ ಕೇಳಿದ್ರು . ನಾನು ಇಟ್ಟ ಮಡು ಅಂದೆ. " ಹಾಗಾದ್ರೆ ಬ್ಲೂ ಲೈನ್ ತೊಗೊಳಿ" ಅಂದ್ರು. 250 ರುಪಾಯಿ ಕೊಟ್ಟು ಟಿಕೆಟ್ ಪಡೆದೆ.


ಟ್ರೈನ್ ಸ್ಟೇಷನ್ಗೆ ಬಂತು, ಸ್ವಯಂ ಚಾಲಿತ ಬಾಗಿಲು ತೆರೆಯಿತು ಒಳಗಿದ್ದ ಪ್ರಯಾಣಿಕರು ಹೊರಗೆ ಬಂದರು , ನಾನು ಒಂದು ಗುಂಪಿನ ಜ್ಯೋತೆ ಒಳಗೆ ಹೋಗಲು ಪ್ರಯತ್ನಿಸಿದೆ, ಒಬ್ಬ ಹುಡುಗ "get in fast man ! only 10 secs it stops" ಅಂತ ನನ್ನ ಒಳಗೆ ದಬ್ಬಿದ. ಪ್ರತಿ ಸ್ಟೇಷನ್ ನಲ್ಲಿ ಕೇವಲ 10 ಸೆಕೆಂಡ್ ನಿಲ್ಲುತ್ತದೆ ಅಂತ ಗೊತ್ತಿರಲ್ಲಿಲ್ಲ. ಕೂರಲು ಸೀಟ್ ಸಿಕ್ಕಿತು. ನಮ್ಮ ಜ್ಯೋತೆ ಕಡಲೇ ಕಾಯಿ ಮಾರುವವನು  ಸಹ ಒಳಗಡೆ ಬಂದ, ಕಳೆಗೆ ಬಿದ್ದಿದ್ದ ಸಿಪ್ಪೆಗಳನ್ನು ನೋಡಿ, ಇನ್ನೊಂದು compartment ಕಡೆಗೆ ನಡೆದ, ಬಹುಶ ಬೇರೆಯವನು ಮುಂಚೆ ಕಡಲೇ ಕಾಯಿ ಮಾರಿರುವುದು ಮತ್ತೆ  ಈ   compartment ನವರು ಕೊಳ್ಳುವುದು ಕಡಿಮೆ ಎಂದು ಅನಿಸಿರಬೇಕು. ಕಡಲೇ ಕಾಯಿ ಮಾರುವವರಿಗೂ ಒಳ್ಳೆ strategy  ಇರೊತ್ತೆ ಅಂತ ಗೊತ್ತಾಯಿತು.

 

ಅಲ್ಲಲ್ಲಿ ಪಾನ್ , ಮಾವ ಮತ್ತು ಎಲೆ ಅಡಿಕೆಯಿಂದ ಬಿಡಿಸಿದ ರೇಖಾ ಚಿತ್ರಗಳು ನನ್ನ ಗಮನ ಸೆಳೆಯಿತು , ಎಲ್ಲಾ ಚಿತ್ರಗಳು ನಮ್ಮ ನಾಡಿನ ಜಲಪಾತಗಳನ್ನು ನೆನಪು ಮಾಡಿಕೊಡುತ್ತಿತ್ತು. ಜೋಗ , ಹೆಬ್ಬೆ  , ಶಿಂಷ ಎಲ್ಲಾ ಜಲಪಾತಗಳು ಕಣ್ಣು ಮುಂದೆ ಮೂಡಿತು. ಆಗಷ್ಟೇ  ಸುಂದರವಾದ ಹೊಗೆನಕಲ್ ಜಲಪಾತದ ಚಿತ್ರ ರಚನೆ ಆಯಿತು.FM  ರೇಡಿಯೋ ಜೋರಾಗಿತ್ತು , ವಿಷ್ಣು ಸಹಸ್ರ ನಾಮ ಕೇಳಿಬರುತ್ತಿತು. ರೇಡಿಯೋ ಜ್ಯಾಕಿ ವಿಷ್ಣು , "you are with vishnu "  ಅಂತ ಅರ್ದ ಘಂಟೆ ಯಲ್ಲಿ ಸಾವಿರ ಬಾರಿ ಹೇಳಿದ್ದುಂಟು.

 

ಒಬ್ಬ ಹುಡುಗ ಜೋರಾಗಿ " ದಿನ ಸುಡರ್, ದಿನ ತಂತಿ , ಈ ನಾಡು , ತಾಜ ಖಬರ್ " ಅಂತ ಹೇಳುತ್ತಾ ನ್ಯೂಸ್ ಪೇಪರ್ ಹಿಡಿದು ವಾಯುವೇಗ ದಂತೆ ಬಂದ , ಆವಿಯಂತೆ ಪೇಪರ್ಗಳು  ಮಾಯವಾಯಿತು. ಕೆಲವೇ ನಿಮಿಷದಲ್ಲಿ  'ಸಂಜೆ ವಾಣಿ , ಈ ಸಂಜೆ ' ಅಂತ ಕೂಗುತ್ತ ಇನ್ನೊಬ ಹುಡುಗ ಬಂದ. ಕನ್ನಡ ಮಾತನಾಡುತ್ತಿದ್ದ  ತರುಣ ತರುಣಿಯರ ಗುಂಪು ಅ ಹುಡುಗನನ್ನು ಕರೆದರು " ಏ ... ಮರಿ .... ಬಾಯಿಲ್ಲಿ .. Evening Herald ' ಇದ್ಯಾ ಎಂದು ಕೇಳಿದರು. ನಿರಾಸೆ ಗೊಂಡ ಹುಡುಗ ಇಲ್ಲ ಎಂದ. ಅವನು ನನ್ನ ಮುಂದೆ ಬಂದು 'ಸರ್ ಸಂಜೆ ವಾಣಿ' ಎಂದ . ನಾನು ನನ್ನ ಬಳಿಯಿದ್ದ ಇಪ್ಪತ್ತರ  ಚಿಲ್ಲರೆ ನೋಟ್ ತಗೆದು ಕೊಟ್ಟೆ , ' ಸರ್ ಇನ್ನು ಒಂದು ರುಪಾಯಿ ಕೊಡಿ' ಅಂತ . ಚೇಂಜ್ ಇಲ್ಲ ಎಂದೆ, ಒಂದು ರುಪಾಯಿ ರಿಯಾಯಿತಿ ಕೊಟ್ಟು ಸಂಜೆವಾಣಿ ಕೈಗಿಟ್ಟ.

 

Headlines ನೋಡಿದೆ , "ಸಮ್ಮಿಶ್ರ ಸರಕಾರದ ಪತನ ಸಂಭವ" ಎಂದಿತ್ತು. ಅಲ್ಲೇ ಕೂತಿದ್ದ ಕೂಲಿ ಕೆಲಸ ಮಾಡುವವನ ಕೈ ಬೆರಳು ಗಳನ್ನೂ ಗಮನಿಸಿದೆ. 10 ಬೆರಳು ಗಳ ಪೈಕಿ 9 ಬೆರಳು ಗಳಿಗೆ ಕಪ್ಪು ಬಣ್ಣದ ಗುರುತಿತ್ತು  ಅದು ಉಗರು ಮತ್ತು ಚರ್ಮಕ್ಕೆ ತಾಕಿತ್ತು. ಇನ್ನೊಂದು ಬೆರಳು ಈಗಿರುವ ಸಮ್ಮಿಶ್ರ ಸರಕಾರ ಬೀಳುವುದೆಂಬ ನಿರೀಕ್ಷೆ ಯಲ್ಲಿತ್ತು. ನಿಷ್ಟಾವಂತ ಮತದಾತ ನನ್ನನು ನೋಡಿ ನಗುತ್ತಾ ' ಏನ್ ಸಾಮಿ Govt  ಬಿತ್ತಾ !'  ಅಂದ. ಬಹುಶ ಈ ಬಾರಿ ಪಕ್ಷದವರು washing machine ಕೊಡಿಸ ಬಹುದು ಎಂಬ ಆಲೋಚನೆಯಲ್ಲಿಇದ್ದಂತಿತ್ತು.

 

ಕೆಲವು ಪ್ರಯಾಣಿಕರು sliding door ರಿನ rubber beading ಗನ್ನು (ಎರಡು ಬಾಗಿಲುಗಳು ಸೇರುವ ಗ್ಯಾಪ್ ) ಕೀಳುತ್ತಿದ್ದರು , ಅದು ಕಷ್ಟ ವಾಗಿರಲು, ಕೆಲುವರು ಸಹಾಯ ಮಾಡುತ್ತಿದ್ದರು.ನಾನು ಏಕೆ ಹೀಗೆ ಯಂದು ಪ್ರಶ್ನಿ ಸಿದೆ. 'AC  ತಿಂಗಳಿಂದ ಕೆಲಸ ಮಾಡುತ್ತಿಲ್ಲ, ಒಳಗೆ ಗಾಳಿ ಬರಲು ಅನುಕೂಲ ವಾಗಲಿ'  ಎಂದರು. ಅವರ ಮಾತಿಗೆ ಎಲ್ಲರೂ ಸಮ್ಮತಿಸಿದರು. ವೇಗವಾಗಿ ಸಾಗುತ್ತಿದ್ದ ಟ್ರೈನ್ ಸ್ವಲ್ಪ ಮಂದ ಗತಿಯಲ್ಲಿ ಸಾಗತೊಡಗಿತು.ಅಷ್ಟರಲ್ಲಿ ಒಂದು announcement , ಅರೆಬೆರಿಕೆ ಇಂಗ್ಲಿಷ್ ಮಿಶ್ರಿತ ಹಿಂದಿಯಲ್ಲಿ , "ಯಾರೋ ಚಳುವಳಿ ನಾಗರಾಜ್  ರೈಲು ತಡೆಯುವುದಾಗಿ  ಕಂಬಿಯ ಮಧ್ಯ  ನಿಂತಿದ್ದಾರಂತೆ, ಅದು ಮುಂಬರುವ ಸ್ಟೇಷನ್ ನಲ್ಲಿ , ಇನ್ನು ಕೆಲವೇ ನಿಮಿಷ ದಲ್ಲಿ ಪೋಲಿಸ್ clear ಮಾಡ್ತಾರಂತೆ" ಎಂದ ಟ್ರೈನ್ ಚಾಲಕ.  ಈ ಇಳೀವಯಸಿನಲ್ಲೂ ನಾಗರಾಜ ಕನ್ನಡ ಪ್ರೇಮ ಕಂಡು ಅವರ ಮೇಲಿದ್ದ ಗೌರವ ಇಮ್ಮಡಿ ಆಯಿತು.


ಟ್ರೈನ್ ಕೊನೆ ಸ್ಟಾಪ್ ದೇವೇಗೌಡ ಪೆಟ್ರೋಲ್ bunk ಹತ್ತಿರ ನಿಂತಿತು , ಅರೆರೆ !  ನಾನು ಹೋಗಬೇಕ್ಕಿದು ಇಟ್ಟಮಡುಗೆ , ಟ್ರೈನ್ ಲಾಸ್ಟ್ ಸ್ಟಾಪ್ ಇಲ್ಲಿ ಏಕೆ ಎಂದು ಒಬ್ಬರನ್ನು ಪ್ರಶ್ನಿಸಿದೆ. ಅವರು 'ಸರ್ bridge  ಇಲ್ಲಿಗೆ ಕೊನೆ , ನೀವು  PVR ಕಾಮಾಕ್ಯ ಹತ್ತಿರ ಇನ್ನೊಂದು bridge ಹತ್ತಿ ಟ್ರೈನ್ ಹಿಡೀರಿ' ಅಂದ. ಇಷ್ಟು ದೂರ track ಮಾಡಿದವರು ಮಧ್ಯ ಏಕೆ ಮಾಡ್ಲಿಲ್ಲ ಎಂದೆ. ಅದಿಕ್ಕೆ ಅವರು 'ಸರ್ ಈ bunk ನಿಂದ ಹಿಡಿದು PVR ಕಾಮಾಕ್ಯ ತನಕ ಕೃಷಿ ಭೂಮಿ ಸರ್ ಇಲ್ಲಿ ಲ್ಯಾಂಡ್ acquire ಮಾಡೋಹಾಗಿಲ್ಲ" ಎಂದ. ಏನ್ರೀ ಇಲ್ಲಿ ಮನೆ ಎಲ್ಲಾ ಆಗಿದ್ಯಲ್ರಿ  ಅಂದೆ  "ಸರ್ document ಪ್ರಕಾರ ಈ ಎಲ್ಲಾ ಜಾಗ ರೈತ್ರುದು , ಬೇಕಾದ್ರೆ ರೈತರ ಮುಖಂಡರ ಮನೆ ಇಲ್ಲೇ ಇದೆ ಹೋಗಿ ಕೇಳಿ ' ಅಂದ್ರು . ನಾನು ಟ್ರೈನ್ನಿಂದ ರೋಡ್ ಗೆ ಇಳಿದೆ , ರಸ್ತೇ ಬದೀಲಿ ನಡಿಬೇಕಾದ್ರೆ  ನಿಂತಿದ್ದ ನೀರಿನಮೇಲೆ  ಆಟೋ ಹರಿದು ನನ್ನ ಮುಖಕ್ಕೆಲ್ಲ ನೀರು ಸಿಡಿಸಿತು, ಕೋಪಗೊಂಡು ಕಿರುಚ ತೊಡಗಿದೆ , ಅಷ್ಟರಲ್ಲಿ  ನನ್ನಾಕೆಯ ಕೈಯಲ್ಲಿ ನೀರಿನ ಚೊಂಬು ಕಾಣಿಸಿತು. ಅಭ !! ಸಧ್ಯ ಇವೆಲ್ಲಾ ಕನಸು ಎಂದು ಅನಿಸಿತು , mmmmmmm  " ನಮ್ಮ ಮೆಟ್ರೋ " ಯಾರು ಈ ಹೆಸರು ಇಟ್ರೋ ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ಭಾಷಾಪ್ರಿಯ ಅವರೇ ಚೆನ್ನಾಗಿದೆ ನಿಮ್ಮ ಕನಸು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಗು ಮೂಡಿಸಿದ ಲೇಖನ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನನಸು ಇನ್ನೂ ಭಯಂಕರವಾಗಬಹುದೇ..!!! ನಿಮ್ಮೊಲವಿನ, ಸತ್ಯ.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಮೆಟ್ರೋ ರೈಲು ಬಗ್ಗೆ ಲೇಖನ ಎಂದು ಮಿಸ್ ಮಾಡುತ್ತಿದ್ದೆ. ಇದು ನಿಮ್ಮ ಕನಸಲ್ಲಾ. ಏನೆಲ್ಲಾ ಯೋಚಿಸಿದ್ದೀರೋ ಅದೆಲ್ಲಾ ನಿಜವಾಗಬಹುದು. ಅದರಲ್ಲೂ ನನಗೆ ಖುಷಿಯಾದದ್ದು- ...ಅಲ್ಲೇ ಕೂತಿದ್ದ ಕೂಲಿ ಕೆಲಸ ಮಾಡುವವನ ಕೈ ಬೆರಳು ಗಳನ್ನೂ ಗಮನಿಸಿದೆ. 10 ಬೆರಳು ಗಳ ಪೈಕಿ 9 ... ಸೂಪರ್. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಎಲ್ಲರಿಗೂ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

super ;-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

:-):-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.