ನಮ್ಮ ರಾಜಕೀಯ (ಅ)ವ್ಯವಸ್ಥೆ
ನಮ್ಮ ರಾಜಕೀಯ (ಅ)ವ್ಯವಸ್ಥೆ
ಕರ್ನಾಟಕದ ಇತ್ತೀಚಿನ ರಾಜಕೀಯ ನಾಟಕಗಳು ನಾಗರೀಕ ಜನರ ನಿದ್ದೆ ಕೆಡೆಸಿದೆ. ಹಿಂದಿನಂತೆ 5-ವರ್ಷಕೊಮ್ಮೆ ನಮ್ಮ ಮತ ಚಲಾಯಿಸಿ ನೆಮ್ಮದಿಯಿಂದಿರುವ ದಿನಗಳು ಈಗಿಲ್ಲ. ನಿಮ್ಮ ಮತವನ್ನು ನಿಮ್ಮ ಆದೇಶವನ್ನು ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಲ್ಲವರು ಅವರು. ಯಾರಿಗೂ ಬಹುಮತ ಕೊಟ್ಟಿಲ್ಲ ಅಂತ ಮತದಾರರನ್ನು ಕುರಿತು ಟೀಕೆ ಮಾಡುವ ಈ ರಾಜಕೀಯ ಮಂದಿ , ಒಂದು ವೇಳೆ ನೀವು ಸ್ವಷ್ಟ ಬಹುಮತ ಕೊಟ್ಟರು ಮರುದಿನವೆ ಅದಿಕಾರಕ್ಕಾಗಿ 2 ಅಥವ 3 ಬಾಗವಾಗಿ ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಸೇರುತ್ತಾರೆ. ಕರ್ನಾಟಕದಲ್ಲಿ ನೀವು ಬಿ.ಜೆ.ಪಿ ಗೆ ಬಹುಮತ ಕೊಟ್ಟಲ್ಲಿ ಅದನ್ನು ಪುನಃ ಪಕ್ಷಗಳು ಮತ್ತು ಪತ್ರಿಕೆಗಳು ಅ ಬಹುಮತವನ್ನು ಯಡಿಯೂರಪ್ಪನವರಿಗೆ ಎಷ್ಟು ಸೀಟು ಅನಂತಕುಮಾರಗೆ ಇಷ್ಟು ಸೀಟು ಅಂತ ಬಾಗ ಮಾಡಿ ಅದರ ಬಗ್ಗೆ ತಮ್ಮ ಪಂಡಿತ ವಿಮರ್ಷೆ ಪ್ರಾರಂಬ ಮಾಡುತ್ತಾರೆ !. ಹಾಗಿದ್ದಲ್ಲಿ ಬಹುಮತದ ಅರ್ಥವೇನು ? ತಿಳಿಯುವದಿಲ್ಲ. ಒಂದು ಸಾರಿ ಮತ ಹಾಕಿ ಬಂದ ನಂತರ ಮತದಾರ ಅಸಹಾಯಕ ಅವನೇನು ಮಾಡುವಂತಿಲ್ಲ. ಮತದಾರರ , ನಾಗರೀಕರ ಅಭಿಪ್ರಾಯವೇನು ಯಾರಿಗು ತಿಳಿಯುವುದಿಲ್ಲ. ಪ್ರತಿ ಮತದಾರನಿಗು ತಿಳಿದಿದೆ ತನ್ನನ್ನ ಮತ ಯಾಚಿಸಲು , ಆಳ್ವಿಕೆ ಮಾಡಲು ಬರುತ್ತಿರುವ ರಾಜಕೀಯ ಮಂದಿ ಎಂತಹ ಅಷಾಡಭೂತಿಗಳು ಎಂದು. ಇಂತಹ ರಾಜಕೀಯ ಮಂದಿ ಶಿಸ್ತಿನ ,ಪ್ರಾಮಣಿಕತೆಯ ಕಟ್ಟುಪಾಡಿಗೆ ಒಳಗಾಗುತಾರೆ ಅಂತ ನಿರೀಕ್ಷಿಸುವುದು ನಮ್ಮ ಮೂರ್ಖತನವೆನಿಸುತ್ತದೆ. ಇಂತಹ ಶಿಸ್ತಿನ ಕಟ್ಟುಪಾಡನ್ನು ವಿದಿಸಲು ನಮ್ಮ ಸಂವಿದಾನ ಅಂದರೆ ಕಾನೂನಿಗೆ ಮಾತ್ರ ಸಾದ್ಯ.ಆದರೆ ಪುನಃ ಅದೇ ಸಮಸ್ಯೆ , ಇಂತಹ ಕಾನೂನುಗಳನ್ನು ರೂಪಿಸಬೇಕಾದವರು ಪುನಃ ಅವರೇ !!. ಅಂದರೆ ಬೆಕ್ಕಿನಕೊರಳಿನ ಗಂಟೆ ಕೈಯಲ್ಲೆ ಉಳಿಯಿತು. ತಮ್ಮ ರಾಜಕೀಯ ಯಕ್ಷಗಾನವನ್ನು ಕಂಸ ನೃತ್ಯವನ್ನು ನಿಯಂತ್ರಿಸುವ ಕಾನೂನನ್ನು ಖಂಡೀತ ಅವರು ರೂಪಿಸಲಾರರು . ವಿಕೃತ ಪಕ್ಷಾಂತರ ಪಕ್ಷಿಗಳ ಪಕ್ಷಗಳ ಹಾರಾಟವನ್ನು ತಪ್ಪಿಸಲು ಪಕ್ಷಾಂತರ ನಿಷೇದ ಕಾನೂನನ್ನು ರೂಪಿಸಿದ ದಿ| ಶ್ರೀ ರಾಜೀವಗಾಂದಿಯವರ ಕಾಲದಲ್ಲಿ ಪುನಃ ಅವರ ಪಕ್ಷದ ಅನುಕೂಲಕ್ಕಾಗಿ ಅದೇ ಕಾನೂನಿನ ರೆಕ್ಕೆ ಪುಕ್ಕ ಗಳನ್ನು ಕತ್ತರಿಸಲಾಯಿತು.
ಸರಿ ಈಗ ಸಂವಿದಾನ ನಮ್ಮ ಆಶಯ ನೆರವೇರಿಸಲು ಸಾದ್ಯವಿಲ್ಲ ಅಂತಾದರೆ ಮತ್ತೊಂದು ವಿಭಾಗ ನ್ಯಾಯಾಲಯ ನಮ್ಮ ಆಶಯ ಅಂದರೆ ಈ ರಾಜಕೀಯ ಮಂದಿಯನ್ನು ಶಿಸ್ತಿಗೆ ಒಳಪಡಿಸುವ ಕಾನೂನು ರೂಪಿಸಲು ಸಹಾಯ ಮಾಡಬಲ್ಲದ?. ಈಗಿರುವ ವ್ಯವಸ್ಠೆಯಲ್ಲಿ ಸಾದ್ಯವಿಲ್ಲ ಎಂದೆ ಉತ್ತರಸಿಗುತ್ತದೆ. ಸಂಸತ್ತು ರೂಪಿಸುವ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಾಲಯಗಳು ತಮ್ಮ ನಿರ್ದಾರ ತೆಗೆದುಕೊಳ್ಳಬಲ್ಲದೆ ಹೊರತು , ಸ್ವಯಂ ತಾನೆ ಕಾನೂನನ್ನು ರೂಪಿಸುವ ವ್ಯಾಪ್ತಿ ಅವುಗಳಿಗಿಲ್ಲ. ಕಡೆಯಪಕ್ಷ ಇಂತಹ ಕಾನೂನುಗಳನು ರೂಪಿಸುವಂತೆ ನ್ಯಾಯಾಲಯ ಸಂಸತ್ತಿಗೆ ಹಾಗು ಸರ್ಕಾರಗಳಿಗೆ ನಿರ್ದೇಶನ ನೀಡುವಂತ ವ್ಯವಸ್ಥೆ ರೂಪಗೊಳ್ಳಲು ಸಾದ್ಯವಾದರೆ ನಾಗರೀಕ ಜನರು ತಮಗೆ ಅಗತ್ಯವೆನಿಸುವ ಕಾನೂನುಗಳನ್ನು ರೂಪಿಸುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯಗಳ ಮೊರೆಹೋಗಬಹುದು. ಹಾಗಾದಾಗ ಭಾರತೀಯ ನಾಗರೀಕರು ತಮಗೆ ಅಗತ್ಯಕ್ಕೆ ಬೇಕಾದ ಕಾನೂನನ್ನು ತಾವೇ ರೂಪಿಸಿಕೊಳ್ಳಬಲ್ಲರು. ಅದು ಪ್ರಜಾಪ್ರಬುತ್ವದಲ್ಲಿ ಒಂದು ಮಹತ್ವದ ಹೆಜ್ಜೆಯಾಗುತ್ತದೆ ಎನಿಸುತ್ತದೆ. ಮತ್ತು ಈಗ ಈ ರೀತಿಯ ಬದಲಾವಣೆಗಳನ್ನು ಈಗಿರುವ ಸಂಸದರೆ ಮಾಡುತ್ತಾರೆ ಅಂತ ನಿರೀಕ್ಷೆ ಮಾಡುತ್ತ ಅಸಹಾಯಕರಂತೆ ನಾವೆಲ್ಲ ಕುಳಿತುಕೊಳ್ಳುವ ಕಾಲ ಮುಗಿಯುತ್ತ ಬಂದಿದೆ ಅನ್ನಿಸುತ್ತೆ. ರಾಜಕೀಯ ನಾಯಕರಿಗೆ ತಾವೇನು ಮಾಡಿದರು ನಡೆಯುತ್ತೆ ತಾವೆ ಸರ್ವಙ ಸರ್ವಾದಿಕಾರಿ ಎಂಬ ಭಾವ ಹೋಗಿ ತಮ್ಮನ್ನು ಆರಿಸಿದ ಜನಸಾಮನ್ಯರು ತಮ್ಮನ್ನು ಮಗನಿಸುತ್ತಿದ್ದಾರೆ , ಅಗತ್ಯಬಿದ್ದರೆ ಅವರು ಸಹ ಸಕ್ರಿಯರಾಗಬಲ್ಲರು ಎಂಬ ವಾತವರಣ ಮೂಡಿಸಬೇಕಾಗಿದೆ. ಹಾಗಾದಾಗ ಮಾತ್ರ ನಮ್ಮ ಪ್ರಜಾಪ್ರಬುತ್ವ ಉಳಿಯಬಲ್ಲದು. ಇಲ್ಲದಿದ್ದಲ್ಲಿ ನಮ್ಮ ಗುಂಡಾ ಪ್ರಜಾನಾಯಕರು ನಮ್ಮ ಪವಿತ್ರ ಪ್ರಜಾಪ್ರಬುತ್ವವ ಆಶಯವನ್ನು ಮಣ್ಣುಗೂಡಿಸುತ್ತಾರೆ
======================================================================
ಎಂಥಾ ವಿಡಂಭನೆ:
ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಗಳೇ ನಡೆಸುವ ವ್ಯವಸ್ಥೆ ಈ ಪ್ರಜಾಪ್ರಭುತ್ವ
=======================================================================
ಮುಂದಿನ ಬಾಗ : ಎಂಥಾ ಕಾನೂನುಗಳು ಬೇಕು ನಮಗೆ