ನಮ್ಮ "ಸಂಪದ" ಎತ್ತರಎತ್ತರಕ್ಕೆ ಏರುತ್ತಿದೆ !

ನಮ್ಮ "ಸಂಪದ" ಎತ್ತರಎತ್ತರಕ್ಕೆ ಏರುತ್ತಿದೆ !

ಬರಹ

ನಾನು, ಮೊದಲು ೨೦೦೫ ರ ಅಕ್ಟೋಬರ್ ನಲ್ಲಿ, ಸಂಪದ ತಾಣಕ್ಕೆ ಪಾದಾರ್‍ಪಣೆ ಮಾಡಿದಾಗ, ಅದರಲ್ಲಿ ಕೆಲವೇ ಲೇಖನಗಳು ಪ್ರಕಟವಾಗುತ್ತಿದ್ದವು. ಕನ್ನಡ ಭಾಷೆಯ ಬೆಳವಣಿಗೆ ಮತ್ತು ಕನ್ನಡದಲ್ಲಿ ಏಕೆ ಬರೆಯಬಾರದು ಎನ್ನುವುದರ ಬಗ್ಗೆಯೇ, ಸುಮಾರು ಲೇಖನಗಳು ಬರುತ್ತಿದ್ದವು. ಕನ್ನದಪದಗಳ ಸರಿಯಾದ ಬಳಕೆ, ಎಲ್ಲರನ್ನೂ ತೀವ್ರವಾಗಿ ಕಾಡಿದ ವಿಷಯವಾಗಿತ್ತು. ಸಂಪದದ ಹೊರಮೈ, ಒಳಮೈ (ವಿನ್ಯಾಸ) ಇನ್ನೂ ಸರಿಯಾಗಿ ಕುದುರಿಕೊಂಡಿರಲಿಲ್ಲ. ಫೋಟೋಗಳು ಬೆರಳೆಣಿಕೆಯಷ್ಟು ಮಾತ್ರ ದೊರೆಯುತ್ತಿದ್ದವು.

ಕಾಲಕಳೆದಂತೆ, ದಿಡೀರನೆ ಸದಸ್ಯರ ಸಂಖ್ಯೆ ಏರಿತು. ಅನಿಸಿಕೆಗಳು ಎಷ್ಟಾದುವೆಂದರೆ, ಪುಟಗಳತುಂಬಾ ಅವೇ ಇರುತ್ತಿದ್ದವು. ಅದು ತಪ್ಪಿ, ಮತ್ತೆ ಸಂಪದದ ವಿನ್ಯಾಸ ಅತ್ಯಾಕರ್ಷಕವಾಗಲು ಪ್ರಾರಂಭವಾಯಿತು.

ಡಾ. ಅನಂತ ಮೂರ್ತಿಗಳು, ಡಾ. ರಾಘವೇಂದ್ರರಾಯರು, ಗಳ ಹೆಸರುಗಳು ಸ್ವಲ್ಪ ಮೋಡಿ ಮಾಡಿರಲಿಕ್ಕೂ ಸಾಕು. ನಂತರ ಅನಿವಾಸಿಗಳು, ಜಪಾನ್ ನಿಂದ, ಫಿನ್ಲೆಂಡ್ ನಿಂದ ಒಳ್ಳೊಳ್ಳೆ ಲೇಖನಗಳು ಮತ್ತು ಸೊಗಸಾದ ವರ್ಣ ಚಿತ್ರಗಳ ಕೊಡುಗೆಗಳು ರಂಜಿಸಲಾರಂಭಿಸಿದವು.

ಡಾ. ಓ. ಎನ್. ಎಲ್ ಸ್ವಾಮಿಯವರು, ಮುಂತಾದವುರುಗಳು ತಮ್ಮ ರೆಗ್ಯುಲರ್ ಕಾಣಿಕೆಗಳನ್ನು ಕೊಡುತ್ತಲೇ ಬಂದರು. ಮತ್ತೆ, ಚಿತ್ರಲೇಖನ ಬಂದಾಗ, ನಾನು ಹೆಚ್ಚು ಹೆಚ್ಚು ಸ್ಪಂದಿಸಲಾರಂಭಿಸಿದೆ. ಇದು ಬಹಳ ಸುಲಭ ಮಾಧ್ಯಮ. ಹೇಗೂ ನನ್ನಬಳಿ ನನ್ನ ಮಕ್ಕಳ "ಫೋಟೋ ಆಲ್ಬಮ್" ಗಳು ಹಾಗೆಯೇ ಧೂಳು ಕಾಣುವ ಹಾದಿಯಲ್ಲಿದ್ದವು. ನಾನು ಅವುಗಳಲ್ಲಾ ಸುಜ್ಜು ಗೊಳಿಸಿ, ಒಂದೊಂದಾಗಿ ಹಾಕಲು ಶುರುಮಾಡಿದೆ. ಅದರಂತೆ, ಹಲವರು, ತಮ್ಮ ಅದ್ಭುತ ಚಿತ್ರಗಳನ್ನು ಸೇರಿಸಲು ಆರಂಭಮಾಡಿದರು. ಈಗ ಕೆಲವು ಲೇಖಕರು, ಕನ್ನಡದಲ್ಲಿ ಸೊಗಸಾದ ಕ್ಯಾರಿಕೇಚರ್, ಒಳ್ಳೆಯ ಭಾಷಾಪ್ರಯೋಗದ ಪರಿಚಯವನ್ನು ಮಾಡಿಕೊಡುತ್ತಿದ್ದಾರೆ.

ಅನಿಸಿಕೆಗಳು ಕಡಿಮೆಯಾಗಿ ಎಲ್ಲರೂ ತಮ್ಮದಾದ ಏನಾದರು ಕೊಡುಗೆ ಸಂಪದದಲ್ಲಿ, ಇರಬೇಕು ಎಂದು ಮನಸ್ಸುಮಾಡಿದಂತಿದೆ. ಪುಸ್ತಕ ವಿಮರ್ಶೆಗಳು ಹೆಚ್ಚಾಗಿ ಬರುತ್ತಿವೆ.

ಈಗಿನ ಪರಿಸ್ಥಿತಿ ಏನೂಅಂತೀರಾ ? ಒಬ್ಬರು ಕೂತು ಓದರಾದಷ್ಟು ಬರಹಗಳು ಸಂಪದದ ಪಟದಲ್ಲಿ ವಿಷಯಸೂಚಿಯಲ್ಲಿ ಕಂಗೊಳಿಸುತ್ತಿವೆ. ಹೊಸಬರು ಬಹಳ ಸಂಭ್ರಮದಿಂದ ತಮ್ಮ ತಮ್ಮ ಭಾವನೆಗಳನ್ನು ಚೆನ್ನಾಗಿ ಹೊರತರಲು ಪ್ರಯತ್ನಿಸುತ್ತಿದ್ದಾರೆ. ಹರಿಯವರ, ನಾಡಿಗರ, ಆರ್. ಕೆ . ಲಕ್ಷ್ಮಣರ, ಪಾಂಡುರಂಗರಾಯರ, ಮತ್ತೂ ಅನೇಕ ಹೊಸಹೊಸ ಪ್ರತಿಭೆಗಳ ವ್ಯಂಗ್ಯಚಿತ್ರಗಳು. ಎಲ್ಲರಮನಸ್ಸನ್ನೂ, ಸೂರೆಗೊಳ್ಳುತ್ತಿವೆ.

ಆದರೆ, ಲೇಖಕಿಯರ ಸಂಖ್ಯೆ ಹೆಚ್ಚಿದಂತೆ ತೋರುತ್ತಿಲ್ಲ. ಇದ್ದರೂ ಅವೆಲ್ಲಾ ಅವರ "ಅಂಬೋಣದಲ್ಲೇ". ಕೊನೆಗೊಳ್ಳುತ್ತಿರುವಂತೆ, ಕಾಣಿಸುತ್ತಿದೆ. ಹರಿಯವರು ಸ್ವಲ್ಪ ತಮ್ಮ "ವಿಕಿಪೀಡಿಯ," ಕೆಲಸದಿಂದ ವಿರಾಮವನ್ನು ಆಶಿಸಿರುವಂತಿದೆ. ಏನಾದರೂ, ಅವರು, ವಿಕಿಪೀಡಿಯದಲ್ಲಿ, ಕೆಲಸ ಮಾಡುತ್ತಿದ್ದ ರೀತಿ, ಈಗಿನ ಸಿಬ್ಬಂದಿ ವರ್ಗದ ಕಾರ್ಯಾಚರಣೆಗಳಲ್ಲಿ ತುಸು ನಿಧಾನವನ್ನು ನಾನು ಮನಗಾಣುತ್ತಿದ್ದೇನೆ. ಬಹುಶಃ ನನ್ನ ಭಾವನೆಗಳು ತಪ್ಪೂ ಇರಬಹುದು.

ನನಗೆ ಮಾತ್ರ, ಸಂಪದ ಹೃದಯ ತುಂಬಿದೆ. ನಾನು ಬರೆಯಬೇಕಾಗಿದ್ದ ಸರ್ವರ ವಿಚಾರಗಳನ್ನು ನನ್ನದೇ ರೀತಿಯಲ್ಲಿ ಅಭಿವ್ಯಕ್ತಿಸಲು, ಆ ಮಾಧ್ಯಮ ಬಹಳ ಸಹಾಯಮಾಡಿದೆ. ನನಗೆ ಪ್ರೀತಿಪಾತ್ರವಾದ ಹಾಸ್ಯಚಿತ್ರ ಲೇಖಕರ ವ್ಯಂಗ್ಯ ಚಿತ್ರಗಳನ್ನು ಪ್ರಕಟಿಸಿ, ಸಂಪದಿಗರೊಂದಿಗೆ ಹಂಚಿಕೊಂಡು ಹರ್ಷಿಸಿದ್ದೇನೆ.

ಅದಕ್ಕಾಗಿ ಹರಿಯವರಿಗೆ ನನ್ನ ಮನತುಂಬಿದ ಕೃತಜ್ಞತೆಗಳು. ನಿಜವಾಗಿಯೂ ಸಂಪದ ಒಂದು ಸರ್ವಾಂಗೀಣ ಸಂಮೃದ್ಧ ಕನ್ನಡ ತಾಣ ಎನ್ನುವಹಾಗೆ, ಸೊಗಸಾಗಿ ಬೆಳದಿದೆ, ಎಂದರೆ ಉತ್ಪ್ರೇಕ್ಷೆಯಲ್ಲ !

ನನ್ನ ಗೆಳೆಯರೆಲ್ಲರಿಗೂ ವಂದನೆಗಳು. ನಮ್ಮೆಲ್ಲರ ಸಹಕಾರವೇ ಹರಿಯವರನ್ನು, ಇನ್ನೂ ಇದರ ವೈವಿಧ್ಯತೆ, ವ್ಯಾಪ್ತಿ, ಮತ್ತು, ಗುಣಮಟ್ಟವನ್ನೂ ಸೌಂದರ್ಯವನ್ನೂ, ಬೆಳಗಿಸಲು ಸಹಾಯಮಾಡುತ್ತದೆ.