ನಮ್ಮ ಹಳ್ಳಿ ಶೌಚಾಲಯದ ಕರ್ಮಕಾಂಡ

ನಮ್ಮ ಹಳ್ಳಿ ಶೌಚಾಲಯದ ಕರ್ಮಕಾಂಡ

ನಮ್ಮ ಹಳ್ಳಿಿಯಲ್ಲಿ ಒಂದ್ಹತ್ತು ವರ್ಷಗಳ ಹಿಂದೆ ಈಗಿನಂತೆ ಶೌಚಾಲಯ ಇರಲಿಲ್ಲ. ಈಗಲೂ ಅಷ್ಟೇ. ಕೆಲವು ಒಕ್ಕುಲತಂದವರು, ಊರುಗೌಡ್ರು ಶೌಚಾಲಯ ಕಟ್ಟಿಿಸಿಕೊಂಡಿದ್ದು ಬಿಟ್ರೆೆ ಊರುಜನ ಅದರ ಗೋಜಿಗೆ ಹೋಗಲಿಲ್ಲ. ಅದು ಅಲ್ಲದೇ ಊರುಗುಡ್ಡ ಮನಿಮುಂದ ದೆವ್ವ ನಿಂತಂಗ ನಿಂತಿರುವಾಗ  ಮನಿಯೊಳಗ ಪಾಯಿಖಾನೆ ಯಾಕ್ ಬೇಕು, ಗೌಡ್ರು ಕುಂಡಿತುಂಬಿ ಇವೆಲ್ಲ ಮಾಡಿಸಿಕೊಂಡ್ಹಾಾಂಗ ವ್ಯಾಾಕ್ ಅಂತ ಉಬ್ಬರಿಸಿದ್ದರು.
  ಸುಮಾರು ಹದಿನೈದು ವರ್ಷಗಳ ಹಿಂದೆ ಗೌಡ್ರು ಮನೆತನದವರು ತಮ್ಮ ಮನೆಯಲ್ಲಿ ಶೌಚಾಯಲ ಕಟ್ಟಿಿಸಿಬೇಕೂಂತ ತೀರ್ಮಾನ ಮಾಡಿ, ಮನೆಮುಂದೆ ಗುಂಡಿ ತೋಡಿದ್ದರು. ಮಾನವಿ ನಗರದಿಂದ ಐದಾರು ಸಿಮೆಂಟ್‌ನ ರಿಂಗ್ ತಂದು ಮನೆಮುಂದೆ ಹಾಕಿದಾಗ, ಆ ರಿಂಗ್ ನೋಡೋಕೆ ಜನ ಸೇರಿದ್ದರು. ಒಬ್ಬೊೊಬ್ಬರು ಒಂದು ಮಾತು.
‘ಗೌಡ್ರು ಮನಿಯೊಳಗ ಪಾಯಿಖಾನೆ ಮಾಡ್ಸತಾರಂತ ಹ್ಹ ಹ್ಹ!
‘ಏ ಯಂಕ ಗೌಡ್ರುದು ಇದು ಹೊಲಸು ದಗದ ಅನಸ್ಹಂಗಿಲ್ಲೇನಲೇ, ಮನಿಯೊಳಗೆ ಗುಂಡಿ ತೋಡಿಕೊಂಡು ಕುಂತ್ರ ಉಂಬಾಕ ಕುಂತಾಗ ಹೆಂಗಾನ ಹೊಟ್ಟಿಿಗೆ ಕೂಳು ಹೋಗುತ್ತಾಾ? ವಾಸನೆ ಬರಾಂಗಿಲ್ಲೇನು?’
‘ಹಂಗೆ ಆ ಪಾಯಿಖಾನೆ ಬಗಲಗ ದೇವರಮನಿ ಐತೆಂತಲೇ, ಇದು ಪಾಪದ ಕೆಲಸ’
‘ಅಲ್ಲಿಂದ ನಾಲ್ಕು ಹೆಜ್ಜೆೆ ಇಟ್ಟರೆ ಅಡಿಗಿಮನಿ ಅಂತ’
‘ದೊಡ್ಡ ಗೌಡಗ ಹೊತ್ತಲ್ಲದ ಹೊತ್ತಲ್ಲಿ ದೊಡ್ಡಿಿ ಬರುತ್ತಂತ, ರಾತ್ರಿಿ ಕಣ್ಣೂ ಕಾಣ್ಹಂಗಿಲ್ಲ, ಮಕ್ಕೊೊಂಡ ಮಕ್ಳು ರಾತ್ರಿಿಹೊತ್ತು ಎದ್ದು ಕೈಹಿಡಿದು ಕರಕೊಂಡು ಹೋಗಂಗಿಲ್ಲ. ದೊಡ್ಡಗೌಡಗೂ ಗುಡ್ಡಕ್ಕೆೆ ಹತ್ತಿಿ ಕುಂತುಬರೂಕ ಹಾಗಂಗಿಲ್ಲ, ಅದಕ್ಕೆೆ ಮಾಡಿಸಿರತಾರಾ ಬಿಡು ಪಾಪ’
‘ ಗೌಡ್ರು ತೋಡಿದ ಗುಂಡಿ  ಸೌಕರಮನಿ ಗ್ವಾಾಡಿಗೆ ಅಂಟ್ಯಾಾದ. ಪಾಯಿಖಾನೆ ಒಳಗ ಇಳಿದ ಹೊಲಸ ಅವರ ಮನಿಗೆ ಗ್ವಾಾಡಿಗೆ ಬಸಿ ಬರ್ಹಾಾಂಗಿಲ್ಲೇನು’
ಆ ರಿಂಗ್ ಮುಂದೆ ನಿಂತ ಜನ ಒಂದೇ ರೀತಿ ಮಾತಾಡ್ತಾಾನೇ ಇದ್ರು ಇದನ್ನೇ ಕೇಳಿಸಿಕೊಳ್ಳುತ್ತಿಿದ್ದ ಪಕ್ಕದ ಮನಿ ಸೌಕರ, ‘ಪಾಯಿಖಾನೆ ಅಡಿಗಿಮನ್ಯಾಾಗ ಕಟ್ಟಿಿಸಿಕೋರಿ. ಯಾರಬೇಡಂತಾರಾ. ಆದರ ಮನಿಹೊರಗ ನಮ್ಮ ಮನಿ ಗ್ವಾಾಡಿಗೆ ಅಂಟಿದ್ಹಾಾಂಗ ಕಟ್ಟಿಿಸಿದ್ರಾಾ ನಾನು ಸುಮ್ಮನಿರ‌್ಹಂಗಿಲ್ಲ ಅಂತ ಸಾವಕಾರ ಗೌಡ್ರು ಮನಿಯವರ ಜತೆ ಜಗಳಾಡಿ ದೊಡ್ಡ ರಂಪಾಟವೇ ಆಗೋಯ್ತು. ಕೊನೆಗೆ ಏನೇನೋ ರಾಜಿ ಮಾಡಿಕೊಂಡ ಆ ಗೌಡ್ರು ಮನಿಮುಂದ ಶೌಚಾಲಯ ಕಟ್ಟಿಿಕೊಳ್ಳಬೇಕಾಯಿತು.
ಈಗೀಗ ನಗರದ ಮಂದಿಯಂತೆ ಮನೆಯಲ್ಲಿ ಗ್ಯಾಾಸ್, ಫ್ರಿಿಜ್, ಶೌಚಾಯಲ ಕಟ್ಟಿಿಸಿಕೊಂಡು ನಮ್ಮೂರು ಜನರು ಬದುಕೋಕೆ ಶುರು ಮಾಡಿದಾರೆ. ಕಟ್ಟಿಿಸಿಕೊಂಡರೇನ್ ಬಂತು, ದಿನ ಅದರೊಳಗೆ ಕುಂದ್ರಂಗಿಲ್ಲ, ಕಿಸಿಯಂಗಿಲ್ಲ. ಯಾರಾದ್ರು ಬೀಗ್ರೂ, ಬಿಜ್ರು ಬಂದರೆ ಅವಸರಕ್ಕ ಒಂದಿರಲಿ ಅಂತ ಕಟ್ಟಿಿಸಿಕೊಂಡೋರೆ ಹೆಚ್ಚು.
 
ಇನ್ನು ಮನೆಯೊಳಗಿನ ಗಂಡಸರಂತೂ ಎಷ್ಟು ಅವಸರದಲ್ಲಿದ್ರೂ ಗುಡ್ಡ ಹತ್ತಲೇಬೇಕು. ಅಪ್ಪಿಿ ತಪ್ಪಿಿ ಅವಸರಕ್ಕ ಅದರೊಳಗೆ ಗಂಡಸು ಅನ್ನವ ಕುಂತ ಅನ್ನಿಿ, ಮನೆಯೊಳಗಿನಿಂದ ಮಂಗಳಾರತಿ ಶುರು-‘ನಿಮಗೇನ ಬಂದದ ಗಣಮಕ್ಳು ಆಗಿ ತಂಬಿಗೆ  ಇಡ್ಕೊೊಂಡು ಗುಡ್ಡಕ್ಕೆೆ ಹೋಗಾಕ ಬರಂಗಿಲ್ಲೇನ್’ ಅಂತ, ದಾರೀಲಿ ಹೋಗೋರು ಬರೋರು ನಿಂತು ನೋಡೋ ಹಂಗ  ಟಾಯ್ಲೆೆಟ್ ಬಾಗಿಲು ಹೊರಗಡೆ ನಿಂತು ಹೆಂಡ್ತಿಿ ಮಕ್ಕಳು ಬೈದು ಮುಜುಗರ ತಂದಿಟ್ಟುಬಿಡ್ತಾಾರ.
 
ಈಗ ಮಳೆಗಾಲ ಶುರು ಆಗಿದೆ. ಇಂತಹ ಮಳೆಗಾಲದಲ್ಲಿ ಮುಂಜಾನೆ ನಮ್ಮ ಹಳ್ಳಿಿ ಜಾನೇಕಲ್ ಗುಡ್ಡ ನೋಡಬೇಕು ಅವನೌನ ಗುಡ್ಡದ ತುಂಬಾ ಬರಿ ಛತ್ರಿಿಗಳು ಸಾರ್ ಛತ್ರಿಿಗಳು. ಎಲ್ಲಿ ನೋಡಿದರೆ ಛತ್ರಿಿಗಳಾ ಕಾಣ್ತವಾ. ನಮ ರಾಯಚೂರು ಕಡೆಗಿನ ಹಳ್ಳಿಿಗಳೇ ಹಂಗೆ, ಇಲ್ಲಿನ ಮಂದಿ ಮನಸ್ಥಿಿತಿ ಇನ್ನು ಬದಲಾದ್ಹಂಗ ಕಾಣ್ತಿಿಲ್ಲ. ಶೌಚಲಯ ಅಂದ್ರೆೆ ಮನೆಯ ಹೆಂಗಸರು, ಮಕ್ಕಳು, ಊರಿನಿಂದ ಬಂದವರು ಮಾತ್ರ ಕೂಡೋದಕ್ಕೆೆ.  ದೊಡ್ಡ ಗಂಡಸರೆಲ್ಲ ಗುಡ್ಡಕ್ಕೋೋ , ಪಕ್ಕದ ಹೊಲಕ್ಕೋೋ ಹೋಗಬೇಕು. ಮಳೆಗಾಲದಲ್ಲಂತೂ ನಮ್ಮೂರು ಮಂದಿ  ಬೆಟ್ಟದ ಇಳಿಜಾರು ಬಂಡೆಯ ಮೇಲೆ ಬ್ಯಾಾಲೆನ್‌ಸ್‌ ಹಿಡ್ಕೊೊಂಡು ಕಾಲು ಸವುರಿಕೊಂಡು ಹೋಗೋದು ನೋಡಿದರೆ ಹಗ್ಗದ ಮೇಲೆ ನಡಿಯೋದು ಸುಲಭ ಅನ್ನಿಿಸತದ. ಅದೆಷ್ಟೊೊ ಸಲ ಕಾಲುಜಾರಿ ಬಿದ್ದು ತಂಬಿಗೆ ನೀರು ಚೆಲ್ಲಿ, ಮತ್ತೆೆ ಮನೆಕಡೆ ದಾರಿ ಹಿಡಿತಾರ, ನೀರು ತುಂಬಿಕೊಂಡು ಮತ್ತೆೆ ಗುಡ್ಡದ ಕಡೆ ನಡೆ!
ಬಾಲ್ಯದಲ್ಲಿ ಗುಡ್ಡದ ಗುಂಡುಗಳ ಮೇಲೆಯೇ ಪ್ರಪಂಚ ನೋಡ್ಕೊೊಂತ ಕೂಡುತ್ತಿಿದ್ದ ನನಗೂ ನನ್ನ ಚಡ್ಡಿಿದೊಸ್ತರಿಗೂ ಕಾಲೇಜು ಮುಗಿಸೋತಂಕ ಶೌಚಲಯ ಬಳಸೋದು ಗೊತ್ತಿಿರಲಿಲ್ಲ. ಎಂಟ್ಹತ್ತು  ವರ್ಷಗಳ ಹಿಂದೆ ಯಾವುದಾದರೂ  ಕೆಲಸಕ್ಕೆೆ ಸೇರಬೇಕು ಅಂತ ಬೆಂಗಳೂರಿಗೆ ಮೊದಲಸಲ ನಿರುದ್ಯೋೋಗಿ ಗೆಳೆಯರೊಂದಿಗೆ ರೈಲು ಹತ್ತಿಿದ್ದೆೆ. ರೈಲು ಪ್ರಯಾಣವೂ ಹೊಸತು.
 ಚಿಕ್ಕಬಳ್ಳಾಾಪುರದಲ್ಲಿ ಒಂದು ಫೈನಾನ್‌ಸ್‌ ಕಂಪನಿಯಲ್ಲಿನ ಕೆಲಸಕ್ಕಾಾಗಿ ಸಣ್ಣ ಅರ್ಹತೆ ಪರೀಕ್ಷೆೆಯೊಂದು ಬರೆದು, ಬೆಂಗಳೂರು, ವಿಧಾನಸೌಧ ನೋಡಬೇಕು ಅಂತ  ಬೆಂಗಳೂರು ತಲುಪಿದ್ದೇವು. ರಾತ್ರಿಿ 8ಗಂಟೆಯಾಗಿತ್ತು. ‘ಓಹ್ ಮೆಜೆಸ್ಟಿಿಕ್ ಅಂದ್ರೆೆ ಇದೆನಾ! ಇಲ್ಲೇ ಅಲ್ವಾಾ ದರ್ಶನ್ ಫೈಟ್ ಮಾಡಿದ್ದು, ಮಾಲಾಶ್ರೀ ಮೇಲಿನಿಂದ ಜಿಗಿದು ರೌಡಿಗಳನ್ನು ಅಟ್ಟಾಾಡಿಸಿಕೊಂಡು ಹೊಡೆದಿದ್ದು ಅಂತ ಸಿನಿಮಾದ ದೃಶ್ಯಗಳನ್ನು ನೆನಪು ಮಾಡ್ಕೋೋಂತ, ಮಾತಾಡ್ಕೊೊಂತ ಮೆಜೆಸ್ಟಿಿಕ್ ತಿರುಗಾಡಿದ್ವಿಿ.
ನನ್ನ ಗೆಳೆಯನೊಬ್ಬನ ಅಣ್ಣ ಬೆಂಗಳೂರಿನಲ್ಲಿ ಶಾಸಕರೊಬ್ಬರ ಹತ್ತಿಿರ  ಅಸಿಸ್ಟೆೆಂಟ್ ಆಗಿ ಕೆಲಸ ಮಾಡುತ್ತಿಿದ್ದರು. ಆ ಶಾಸಕರು ತಮ್ಮ ಕ್ಷೇತ್ರದಲ್ಲೇ ಇದ್ದು, ತಿಂಗಳಿಗೊಮ್ಮೆೆ ಬೆಂಗಳೂರಿಗೆ ಬರುತ್ತಿಿದ್ದರಿಂದ ಅವರ ಕೊಠಡಿಯಲ್ಲಿ ಸ್ನೇಹಿತನ ಅಣ್ಣನವರು ಒಬ್ಬರೇ ಇರುತ್ತಿಿದ್ದರಂತೆ. ಅವರ ತಮ್ಮನೂ ನಮ್ಮ ಜೊತೆ ಬೆಂಗಳೂರಿಗೆ ಬಂದಿದ್ದರಿಂದ  ರಾತ್ರಿಿ ವಾಸ್ತವ್ಯಕ್ಕೆೆ ಆತನಿಗೆ ಫೋನ್ ಮಾಡಿ ತಿಳಿಸಿದೆವು.  ಹತ್ತ ಹದಿನೈದು ನಿಮಿಷದಲ್ಲಿ ಮೆಜೆಸ್ಟಿಿಕ್‌ಗೆ ಕಾರು ಬಂತು. ನಮ್ಮನ್ನೆೆಲ್ಲ ಅದರಲ್ಲಿ ಕೂಡಿಸಿಕೊಂಡು ಮನೆಯತ್ತ ಹೊತ್ತೊೊಯ್ದು ಇಳಿಸಿತು. ಪಕ್ಕದಲ್ಲೇ ವಿದಾನ ಸೌಧ!
ದಾರಿಯುದ್ದಕ್ಕೂ ಕಾಣುತ ಕಟ್ಟಡ, ಮಾಲ್, ಜನಗಳನ್ನು, ಚೆಂದವಾಗಿರುವ ರಸ್ತೆೆಗಳನ್ನು ಕಾಡುಮನುಷ್ಯರಂತೆ ಕಣ್ಣಿಿಗೆ ಕಂಡಿದೆಲ್ಲಾಾ ಕಣ್ಣರಳಿಸಿ ನೋಡುತ್ತಿಿದ್ದೆೆವು. ನಾವು ಮಾಡುತ್ತಿಿದ್ದ ತಿಕ್ಕುಲುತನದಿಂದ ನಮ್ಮನ್ನ ಆತ ‘ಹಾಫ್ ನನ್ಮಕ್ಳು’ ಅಂತಾನೆ ರೆಯುತಿದ್ದ .
ಮನೆಯೊಳಗೆ ಹೋಗಿ ಶಾಸಕರು ಇರುತ್ತಿಿದ್ದ ಕೊಠಡಿಯೊಳಗೆ ಹೋದಾಗ, ಬಹಳ ಆಶ್ಚರ್ಯವಾಗಿತು.್ತ ಅದು ರೂಮು, ಕೊಠಡಿ ಅನ್ನಬಾರದು ಆರಮನೆ. ತಲೆಯಿಂದ ಕಾಲಿನತನಕ ಕಾಣುವ ದೊಡ್ಡ ಕನ್ನಡಿ, ನಾಲ್ಕೂ ಜನ ಒಟ್ಟಿಿಗೆ ಮಲಕ್ಕೊೊಬಹುದಾದಂತ ಬೆಡ್‌ರೂಂ,  ಸುಂದರವಾದ ಕುಸುರಿಯಿಂದ ಮಾಡಿದ ಕಾರ್ಟನ್ ಪಾರದರ್ಶಕ ಪರದಿ ಗಾಳಿಗೆ ತೇಲಾಡುತ್ತಿಿತ್ತು. ಮುರುಕಲು ಮನೆಯೊಳಗೆ,ಅಜ್ಜಿಿ ಹೊಲಿದ ಕೌದಿಯೊಳಗೆ ನುಸುಳಿಮಲಗಿ ಬೆಳೆದಿದ್ದ ನಮಗೆಲ್ಲ ಆ ಮನೆಯನ್ನು ನೋಡಿದಾಗ ಅದು ಅರಮನೆಯಂತೆ ಕಂಡಿದ್ದು ಸಹಜವಾಗಿತ್ತು.
ನಾವು ಒಟ್ಟು ಏಳೆಂಟು ಗೆಳೆಯರು ಇದ್ದೆೆವು. ಎಲ್ಲಾಾರಿಗೂ ಗೆಳೆಯನ ಅಣ್ಣ ವ್ಯವಸ್ಥೆೆ ಮಾಡಿದ್ದ. ಆತ ನಮಗೆಲ್ಲ ಪರಿಚಿತವೇ ಆಗಿದ್ದ. ಊರಿನಲ್ಲಿದ್ದಾಾಗ, ಆತ ನಮಗೆಲ್ಲ ಗಣಿತ ಹೇಳಿಕೊಡುತ್ತಿಿದ್ದ.  ನಾವು ಹಳ್ಳಿಿಯಿಂದ ಮೊದಲಸಲ ಬಂದವರೆಂಬ ಕಾರಣಕ್ಕೆೆ ಸ್ವಲ್ಪ ಹೆಚ್ಚಾಾಗೇ ಕಕ್ಕುಲಾತಿ ತೋರಿಸಿದ. ಊಟ ಮಾಡಿದ ನಂತರ ನಾವು ಬೆಂಗಳೂರಿಗೆ ಬಂದು ಮಾಡಿದ ತಿಕ್ಕುಲುತನಗಳ ಬಗ್ಗೆೆ ಅಣ್ಣನತ್ರ ಹೇಳಿಕೊಂಡ್ವಿಿ, ಆತ ಹೊಟ್ಟೆೆ ಹುಣ್ಣಾಾಗುವಂತೆ ಬಿದ್ದು ಬಿದ್ದು ನಕ್ಕಿಿದ್ದೇ ನಕ್ಕಿಿದ್ದು.
 
‘ಅಣ್ಣ ಸಂಡಾಸ ಎಲ್ಲಿ ಕೂಡಬೇಕು ?’ ಗೆಳೆಯ ಕೇಳಿದ.
ಆ ಅಣ್ಣ ನಸುನಗುತ್ತ, ‘ನೀವು ಅದರಾಗ ಯಂಗ್ ಕೂಡ್ತಿಿರೋ ಏನೋ ಮಾರಯಾ, ಊರಲ್ಲಿ ಮಾಡಿದಂಗ ಜಾತ್ರಿಿ ಮಾಡಿಬಿಟ್ಟೀರಿ ಮತ್ತೆೆ ಹ್ಹಹ್ಹ . ಸರೀ ಬಾ, ರೂಮ ತೋರಿಸ್ತಿಿನಿ.’ ಅಂತ ಕರಕೊಂಡ ಹೋದ ಪಕ್ಕದ ರೂಮಿಗೆ.
 ಅವನಿಗೆ ಅದು ಹೊಸತು. ಯಾವತ್ತು ಶೌಚಾಲಯದೊಳಗೆ ಕುಳಿತ ಅನುಭವ ಇಲ್ಲ. ಒಳಗೆ ಹೋದವನು ಅರ್ದತಾಸು ಆದರೂ ಹೊರಗೆೆ ಬರಲೇ ಇಲ್ಲ. ಕೊನೆಗೆ ಆ ಅಣ್ಣಾಾ ನೇ ಬಾಗಿಲು ಬಡಿದ. ‘ಲೇ ನಿಮ್ಮೌೌನ ಎಷ್ಟೊೊತ್ತು ಆತ್ಲೆೆ ಅಲ್ಲೇ ಕುಂತಿದಿ. ನೀನ್ ಏನ್ ಹೊರಗ ಬರಬೇಕು ಅಂತ ಮಾಡಿದ್ಯಾಾ ಇಲ್ಲ ಅಲ್ಲೇ ಕುಂದ್ರುಬೇಕು ಅಂತ ಮಾಡಿದ್ಯಾಾ? ಏನ್ ಮಾಡಕತ್ತಿಿ ?’ ಅಂತ ನಗ್ತಾಾ ಬೈದಿದ್ದ.
ಇದ್ಯಾಾವುದಕ್ಕೂ ಒಳಗ ಕುಂತವನಿಂದ ಪ್ರತಿಕ್ರಿಿಯೆ ಬರಲಿಲ್ಲ. ಮತ್ತಷ್ಟು ಅಣ್ಣಂಗೆ ಆತಂಕ ಶುರುವಾಯುತ.  ಚಾದರ ಮೇಲೆ ಸುಮ್ಮನೆ ಕುಳಿತಿದ್ದ ನಾವೆಲ್ಲ ಮುಸಿ ಮುಸಿ ನಗೋಕೆ ಶುರು ಹಚ್ಚಿಿದ್ವಿಿ. ಸ್ವಲ್ಪ ಸಮಯದ ನಂತರ ಒಳಗಿದ್ದವನು ಸುಸ್ತಾಾದವನಂತೆ, ನಿಶ್ಶಕ್ತನಾಗಿ ಹೊರಗೆ ಬಂದ.
ಅವನು ಬಂದ ನಂತರ ಅಣ್ಣ ರೂಮ್ ಒಳಗೆ ಹೋಗಿ ನೋಡಿ ಬಿದ್ದು ಬಿದ್ದು ನಕ್ಕಿಿದ್ದ. ಎರಡು ಕಾಲು ನೆಲದ ಕಡೆ ಇಳಿಬಿಟ್ಟು ಚೇರ್ ಮೇಲೆ ಕೂಡುವಂತೆ ಕೂಡುವ ವಿನ್ಯಾಾಸದಲ್ಲಿದ್ದ ಆ ಟಾಯ್ಲೆೆಟ್‌ನಲ್ಲಿ ಅವನಿಗೆ ತಿಳಿಯದೇ  ಅಲ್ಲಿ ಹೇಗೆ ಕೂಡಬೇಕು ಎಂಬ ಗೊಂದಲ್ಲಕ್ಕೆೆ ಬಿದ್ದಿದ್ದ. ಕೊನೆಗೆ ಅದರಮೇಲೆ ಕಾಲಿಟ್ಟೇ ಕುಂತಿದ್ದ. ಪುಣ್ಯಕ್ಕೆೆ ಅದು ಮುರಿದಿರಲಿಲ್ಲ, ಬಟನ್ ಪ್ರೆೆಸ್ ಮಾಡಿದರೆ ನೀರು ಬರುತ್ತೆೆ ಅಂತ ಗೊತ್ತಿಿಲ್ಲದೇ ಅವನು ಕಾಮೋಡ್ ಒಳಗೆ ನೀರು ಸುರಿಯಲು ಪ್ರಯತ್ನಿಿಸಿದ್ದ. ಅಲ್ಲಿ ಬಕೆಟ್, ಚೆಂಬು ಯಾವುದೂ ಇರಲಿಲ್ಲ.
ಈಗೀಗ ನಿರ್ಮಲ ಗ್ರಾಾಮದ ಬಗ್ಗೆೆ ಸರ್ಕಾರಗಳು ಜಾಗೃತಿ ಮೂಡಿಸುತ್ತಿಿವೆ. ಶೌಚಾಲಯ ಬಳಕೆ ಜಾಗೃತಿಗಾಗಿಯೇ ಸಿನಿಮಾಗಳು ಬಂದಿವೆ. ಉತ್ತರ ಕರ್ನಾಟಕದ ತೀರ ಹಿಂದೂಳಿದ ತಾಲೂಕಾದ  ಮಾನವಿ ತಾಲೂಕಿನ ಜಾನೇಕಲ್ ಹಾಗೂ ಸುತ್ತಮುತ್ತಲಿನ  ಕೆಲವು ಹಳ್ಳಿಿಗಳಲ್ಲಿ ಏನೇನೂ ಪರಿಣಾಮ ಬೀರಿಲ್ಲ. ಪಂಚಾಯ್ತಿಿಗಳು ಶೌಚಾಲಯ ನಿರ್ಮಿಸಿಲು ಸಹಾಯ ಧನ ಕೊಡುತ್ತದೆಯಾದರೂ ಪಂಚಾಯ್ತಿಿ ಅಧ್ಯಕ್ಷರು, ಸದಸ್ಯರುಗಳ ಪಂಚತಂತ್ರಗಳು ಬೇರೆಯದೆ ಕೆಲಸ ಮಾಡುತ್ತವೆ.
 
ಇತ್ತೀಚೆಗೆ ನಮ್ಮ ಹಳ್ಳಿಿ ಜಾನೇಕಲ್‌ಗೆ ಹೋಗಿದ್ದಾಾಗ, ಬಡ ಮಹಿಳೆಯೊಬ್ಬಳರನ್ನು ಮಾತಾಡಿಸಿದ್ದೆೆ. ಆ ಮಹಿಳೆ ಕೂಲಿನಾಲಿ ಮಾಡಿ ಸಂಗ್ರಹಿಸಿದ್ದ ದುಡ್ಡಿಿನಿಂದ ಶೌಚಾಲಯ ಕಟ್ಟಿಿಸಿಕೊಂಡಿದ್ದಳು ಹೇಗೋ ಕಟ್ಟಿಿದ ನಂತರ ಪಂಚಾಯಿತಿಯವರು ಧನ ಸಹಾಯ ಮಾಡುತ್ತಾಾರಲ್ಲ ಎಂಬ  ಭರವಸೆಯಿಂದ.  ಅದರೆ  ಆಗಿದ್ದೆೆ ಬೇರೆ.
ಆಕೆ ಅನಕ್ಷರಸ್ಥೆೆ ಅಗಿರುವುದುರಿಂದ ಕೆಲವು ದಾಖಲಾತಿಗಳು ಹೇಗೆ ಪಡೆಯಬೇಕು, ಎಲ್ಲಿ ಪಡೆಯಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲದೆ.  ಪಂಚಾಯ್ತಿಿಗೆ ಅರ್ಜಿ ಸಲ್ಲಿಸುವುದರ ಸಾಮಾನ್ಯ ತಿಳಿವಳಿಕೆಯೂ ಇಲ್ಲದೇ  ಬೇರೆಯವರ, ಪುಡಾರಿ ದಲ್ಲಾಾಳಿಗಳ ಸಹಾಯದಿಂದ ಅರ್ಜಿ ಹಾಕಿದ್ದಳು. ಹದಿನೈದು ದಿನಗಳಳೊಗೆ ಆಗಬೇಕಿದ್ದ ಕೆಲಸ ತಿಂಗಳುಗಟ್ಟಲೇ ಅಲೆದಾಡಿ ಪಂಚಾಯ್ತಿಿಯಿಂದ ಬರಬೇಕಿದ್ದ ದುಡ್ಡಿಿಗಾಗಿ ಅರ್ದದಷ್ಟು ದುಡ್ಡನ್ನು ದಲ್ಲಾಾಳಿಗಳ ಖರ್ಚಿಗೆ ಕೊಟ್ಟು ದುಡಿದ ದುಡ್ಡೆೆಲ್ಲ  ಖಾಲಿಮಾಡಿಕೊಂಡಿದ್ದಳು. ನಾನು ಭೇಟಿಯಾದ ದಿನ  ನನ್ನ ಬಳಿ ಅಳಲು ತೊಡಿಕೊಂಡಳು.
 ಇದು ಒಬ್ಬ ಮಹಿಳೆಯ ಸಮಸ್ಯೆೆಯಲ್ಲ ಬಹುತೇಕ ಎಲ್ಲಾಾ ಅನಕ್ಷರಸ್ಥ ಬಡಜನಗಳ ಪರಿಸ್ಥಿಿಯೂ. ಇದೆ ಕಾರಣಕ್ಕೆೆ ಇವತ್ತಿಿಗೂ ಬಯಲು ಶೌಚಲಯ. ಸರಕಾರವೇ ಮುಂದೆ ನಿಂತು ಪ್ರತಿ ಮನೆಗೂ ಶೌಚಲಯ ಕಟ್ಟಿಿಸಿಕೊಡುವ ವ್ಯವಸ್ಥೆೆ ಮಾಡಲಿ. ಮುಂಚಿತವಾಗಿಯೇ ಸಹಾಯಧನ ಬಿಡುಗಡೆ ಮಾಡಲಿ. ಹಣ ದುರುಪಯೋಗಪಡಿಸಿಕೊಳ್ಳುವ ವ್ಯಕ್ತಿಿಗಳ ವಿರುದ್ದ ಕಠಿಣವಾಗಿ ಕಾನೂನು ಕ್ರಮ ಕೈಗೊಳ್ಳಲಿ. ಆಗಾದಾಗ ಹಳ್ಳಿಿಗಳು ‘ಬಯಲು ಮುಕ್ತ ಶೌಚಾಲಯ’ ಗ್ರಾಾಮಗಳಾಗಿ, ನಿರ್ಮಲಗ್ರಾಾಮಗಳಾಗಿ, ತಾವಾಗೇ ಕಂಗೊಳಿಸುತ್ತವೆ.
ರವಿಜಾನೇಕಲ್

Comments

Submitted by kavinagaraj Sat, 07/07/2018 - 21:05

1976ರಲ್ಲಿ ಗುಲ್ಬರ್ಗ ಜಿಲ್ಲೆ ಸೇಢಮ್ ಗೆ ಹಾಸನದಿಂದ ವರ್ಗವಾಗಿ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಶೌಚಾಲಯ ಇದ್ದ ಮನೆ/ಖೋಲಿ ಬಾಡಿಗೆಗೆ ಸಿಗುವುದು ದುಸ್ತರವಾಗಿತ್ತು. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ರೈಲಿನ ಹಳಿಗಳ ಪಕ್ಕದಲ್ಲಿ ತಲೆಗೆ ಮುಸುಕು ಹಾಕಿಕೊಂಡು ಮುಂದೆ ಚೊಂಬು ಇಟ್ಟುಕೊಂಡು ಕೂರುತ್ತಿದ್ದವರಿಗೇನೂ ಕೊರತೆಯಿರಲಿಲ್ಲ. ನೋಡುವವರೇ ಮುಖ ಬೇರೆಡೆಗೆ ತಿರುಗಿಸಿಕೊಳ್ಳಬೇಕಿತ್ತು!