ನಮ್ಮ ಹೆಮ್ಮೆಯ ಭಾರತ (ಭಾಗ 57 - 58)
೫೭.ಜಗತ್ತಿನಲ್ಲಿ ಅತ್ಯಧಿಕ ವಿಶ್ವವಿದ್ಯಾಲಯಗಳಿರುವ ದೇಶ ಭಾರತ
ಭಾರತದಲ್ಲಿರುವ ವಿಶ್ವವಿದ್ಯಾಲಯಗಳ ಸಂಖ್ಯೆ (೮೭೫) ಅಭಿವೃದ್ಧಿ ಹೊಂದಿದ ದೇಶವಾದ ಯುಎಸ್ಎಯಲ್ಲಿ ಇರುವುದರ ಇಮ್ಮಡಿ ಎಂದಾಗ ನಾವು ಹೆಮ್ಮೆ ಪಡಲೇ ಬೇಕು.
ಭಾರತದಲ್ಲಿ ನಾಲ್ಕು ವಿಧದ ವಿಶ್ವವಿದ್ಯಾಲಯಗಳಿವೆ: ಕೇಂದ್ರ ವಿವಿಗಳು (೫೪), ರಾಜ್ಯ ವಿವಿಗಳು (೪೧೧), ಡೀಮ್ಡ್ ವಿವಿಗಳು (೧೨೩) ಮತ್ತು ಖಾಸಗಿ ವಿವಿಗಳು (೨೮೮).
ಸರಕಾರಿ ವಿಶ್ವವಿದ್ಯಾಲಯಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರ್ಥಿಕ ನೆರವು ನೀಡುತ್ತವೆ. ಖಾಸಗಿ ವಿಶ್ವವಿದ್ಯಾಲಯಗಳನ್ನು ಖಾಸರಿ ಸಂಸ್ಥೆಗಳು ಅಥವಾ ಖಾಸಗಿ ಸೊಸೈಟಿಗಳು ನಡೆಸುತ್ತವೆ.
ಅತ್ಯುತ್ತಮ ದಕ್ಷತೆಯಿಂದ ಕೆಲಸ ಮಾಡುವ ವಿಶ್ವವಿದ್ಯಾಲಯಗಳನ್ನು "ಡೀಮ್ಡ್ ವಿಶ್ವವಿದ್ಯಾಲಯಗಳು” ಎಂದು ಗುರುತಿಸಲಾಗುತ್ತದೆ.
೫೮.ವಿಶ್ವಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳು ಭಾರತದ ಐಐಟಿಗಳು
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) - ನಮ್ಮ ದೇಶದ ಈ ವಿದ್ಯಾಸಂಸ್ಥೆಗಳು ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ವಿಶ್ವಮಾನ್ಯತೆ ಗಳಿಸಿವೆ.
ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲ ಪ್ರತಿಭಾವಂತ ಮತ್ತು ತರಬೇತಾದ ವಿಜ್ನಾನಿಗಳು ಮತ್ತು ಇಂಜಿನಿಯರುಗಳ ದೊಡ್ಡ ತಂಡವನ್ನು ಹೊಂದಬೇಕೆಂಬ ಉದ್ದೇಶದಿಂದ ಐಐಟಿಗಳನ್ನು ಸ್ಥಾಪಿಸಲಾಯಿತು.
ಈಗ ಮುಂಬೈ, ಢೆಲ್ಲಿ, ಕಾನ್ಪುರ, ರೂರ್ಕಿ ಇತ್ಯಾದಿ ಹದಿನಾರು ಸ್ಥಳಗಳಲ್ಲಿ ಐಐಟಿಗಳಿವೆ. ಯಾವುದೇ ಐಐಟಿಗೆ ಪ್ರವೇಶ ಪಡೆಯಬೇಕು ಎಂಬುದೇ ಇಂಜಿನಿಯರ್ ಅಥವಾ ವಿಜ್ನಾನಿ ಆಗಬೇಕೆಂದು ಕನಸು ಕಾಣುವ ಬಹುಪಾಲು ವಿದ್ಯಾರ್ಥಿಗಳ ಬಯಕೆ. ಅದಕ್ಕಾಗಿ ಅವರು ಐಐಟಿ-ಜೀ ಅಂದರೆ ಐಐಟಿ - ಜಾಯಿಂಟ್ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕು.
ಫೋಟೋ ೧: ಢೆಲ್ಲಿ ವಿಶ್ವವಿದ್ಯಾಲಯ
ಫೋಟೋ ೨: ಐಐಟಿ, ಢೆಲ್ಲಿ