ನಮ್ಮ ಹೆಮ್ಮೆಯ ಭಾರತ (ಭಾಗ 79 - 80)

ನಮ್ಮ ಹೆಮ್ಮೆಯ ಭಾರತ (ಭಾಗ 79 - 80)

೭೯.ಜಗತ್ತಿನಲ್ಲಿ ಸ್ಟುಡಿಯೋದಲ್ಲಿ ಅತ್ಯಧಿಕ ಹಾಡುಗಳನ್ನು ರೆಕಾರ್ಡ್ ಮಾಡಿದ ಹೆಗ್ಗಳಿಕೆ ಆಶಾ ಭೋಸ್ಲೆ ಅವರದು
ಗಿನ್ನೆಸ್ ಬುಕ್ ಆಫ್ ವಲ್ಡ್ ರೆಕಾರ್ಡಿನಲ್ಲಿ ಈ ದಾಖಲೆ ಆಶಾ ಭೋಸ್ಲೆ ಅವರ ಹೆಸರಿನಲ್ಲಿ ದಾಖಲಾಗಿದೆ. ೧೯೪೭ರಿಂದ ೨೦೧೧ರ ವರೆಗೆ ವಿವಿಧ ಭಾರತೀಯ ಭಾಷೆಗಳಲ್ಲಿ ೧೧,೦೦೦ ಹಾಡುಗಳನ್ನು ಅವರು ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಿದ್ದರು.  

೮೦.ಜಗತ್ತಿನ ಅತ್ಯಧಿಕ “ಪ್ರಯಾಣಿಕರ ಸಾಂದ್ರತೆ” ನಗರ ಭಾರತದಲ್ಲಿದೆ.
ಮುಂಬೈ ನಗರದ ಬಹುಪಾಲು ವಾಸಿಗಳು ಪ್ರಯಾಣಕ್ಕಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ - ಮುಖ್ಯವಾಗಿ ನಗರ ರೈಲು-ಜಾಲದ ರೈಲುಗಳನ್ನು. ಅಲ್ಲಿನ ನಗರ ರೈಲು ಜಾಲದ ಉದ್ದ ೩೧೯ ಕಿಮೀ. ಇದರಲ್ಲಿ ಪ್ರತಿ ದಿನ ೬.೩ ದಶಲಕ್ಷ ಜನರು ೨,೩೪೨ ರೈಲುಗಳಲ್ಲಿ ಪ್ರಯಾಣಿಸುವ ಕಾರಣ, ಮುಂಬೈಯ “ಪ್ರಯಾಣಿಕರ ಸಾಂದ್ರತೆ" ಜಗತ್ತಿನಲ್ಲೇ ಅತ್ಯಧಿಕ.

ಫೋಟೋ ೧: ಆಶಾ ಭೋಸ್ಲೆ  ... ಕೃಪೆ: ವಿಕಿಪಿಡಿಯಾ

ಫೋಟೋ ೨: ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವ ಮುಂಬೈಯ ನಗರ (ಲೋಕಲ್) ರೈಲು ... ಕೃಪೆ: ಮನಿಕಂಟ್ರೋಲ್.ಕಾಮ್