ನರಿಯ ಪ್ರಲಾಪ
ಕವನ
( ಜಲ ಷಟ್ಪದಿ)
ಠಕ್ಕಗೊಳಿಸಿದ
ಪಕ್ಕ ನರಿಯದು
ಸೊಕ್ಕು ತೋರಿದ ದುಷ್ಟಗೆ|
ತಕ್ಕ ಶಾಸ್ತಿಯ
ಲಕ್ಕ ಮಾಡಿದ
ಕೊಕ್ಕೆ ಹಾಕಿದ ಬಾಯಿಗೆ||
ಅಡುಗೆ ಮನೆಯಲಿ
ಗಡಿಗೆಯೊಡೆಯಿತು
ಜಡಿಯ ಹೋದರೆ ನೆಗೆಯಿತು|
ಕಡೆಗೆ ಕೋಲಲಿ
ಹೊಡೆಯ ಹೋದರೆ
ತಡೆಯಲಾರದೆ ದಣಿಯಿತು||
ಕೋಪದಿಂದಲಿ
ಶಾಪ ಹಾಕಲು
ದಾಪುಗಾಲನು ಹಾಕಿತು|
ಚೂಪು ಬೆರಳಲಿ
ಸಾಪ ನೆಳೆಯುತ
ತಾಪಗೊಳ್ಳುತ ಹೋಯಿತು||
ಹುಚ್ಚು ನರಿಯಿದು
ಬೆಚ್ಚಿ ಬಿಳಿಸಿತು
ಹುಚ್ಚನಂತೆಯೆ ಮಾಡಿತು||
ಕಚ್ಚಿ ಕಾಲಿಗೆ
ರೊಚ್ಚಿಗೇಳುತ
ಮುಚ್ಚಿ ಕಣ್ಣನು ನೆಗೆಯಿತು||
ರೋಷದಿಂದಲಿ
ಪಾಶ ಹಾಕಿದೆ
ರೋಸಿ ಹೋಯಿತು ಮನವದು||
ಫಾಶಿ ಕೊಟ್ಟೆನು
ಮೀಸೆತಿರುವುತ
ಘಾಸಿ ಗೊಂಡಿತು ನರಿಯದು||
-ಶಂಕರಾನಂದ ಹೆಬ್ಬಾಳ
ಚಿತ್ರ್
