ನಲವತ್ತು ಸಾವಿರ ಕೋಟಿಗೆ ಎಷ್ಟು ಸೊನ್ನೆ...
ಬರಹ
ನಾನು ದಿನಪತ್ರಿಕೆಯಲ್ಲಿ ಕೇವಲ ಓದುವುದು ಸಿನೆಮಾ ಹಾಗು ಆಟೋಟ ಹಾಗೂ ಕೆಲವೊಮ್ಮೆ ವಿಶೇಷ ಅಂಕಣಗಳು ಅಷ್ಟೇ...ಈ ದಿನ ಬೆಳಿಗ್ಗೆ ಉದಯವಾಣಿ (ಶುಕ್ರವಾರ ಮಾತ್ರ, ಪ್ರತಿದಿನ ವಿ.ಕ) ಓದುತ್ತಿದ್ದಾಗ ಹಾಗೆ ಮಡಚುತ್ತಿದ್ದಾಗ ಮುಖಪುಟದಲ್ಲಿ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭ್ರಷ್ಟಾಚಾರ ಎಂಬ ಸುದ್ದಿ ಕಣ್ಣಿಗೆ ಬಿತ್ತು. ಕುತೂಹಲದಿಂದ ಅದೇನು ಎಂದು ಓದಿ ಕ್ಷಣ ಕಾಲ ಬೆಚ್ಚಿ ಬಿದ್ದೆ..ಇಡೀ ಕಾಮನ್ವೆಲ್ತ್ ಗೇಮ್ಸ್ ಗೆ ತಗುಲಿರುವ ವೆಚ್ಚ ೭೭ ಸಾವಿರ ಕೋಟಿ ಎಂದು ಆಯೋಜಕರು ಹೇಳಿದ್ದಾರೆ...ಅದರ ಬಗ್ಗೆ ತನಿಖೆ ನಡೆಸಿದ ನಂತರ ಕೇಂದ್ರ ಸರ್ಕಾರ ಕೇವಲ ೩೪ ಸಾವಿರ ಕೋಟಿ ಖರ್ಚಾಗಿದೆ ಎಂದು ಒಪ್ಪಿಕೊಂಡಿದೆ...ಹಾಗಿದ್ದಲ್ಲಿ ಉಳಿದ ೪೦ ಸಾವಿರ ಕೋಟಿ ಏನಾಯಿತು???
ಅಸಲಿಗೆ ೪೦ ಸಾವಿರ ಕೋಟಿಗೆ ಎಷ್ಟು ಸೊನ್ನೆ ಎಂದು ಲೆಕ್ಕ ಹಾಕಲು ತಲೆ ಕೆಡಿಸಿಕೊಳ್ಳುತ್ತಿದ್ದೇನೆ...ಭಾರತದ ಜನಸಂಖ್ಯೆ ೧೧೦ ಕೋಟಿ...ತಲೆಗೊಂದರಂತೆ ಒಂದು ಕೋಟಿ ಕೊಟ್ಟರು ಭಾರತ ಬಡತನ ರಹಿತ ರಾಷ್ಟ್ರವಾಗುತ್ತದೆ...ಒಟ್ಟಿಗೆ ತೀರಿಸಿದರೆ ಪ್ರಪಂಚ ಬ್ಯಾಂಕಿನ ಸಾಲ ತೀರಿಸಬಹುದು (ಅದು ಎಷ್ಟಿದೆ ಎಂದು ಗೊತ್ತಿಲ್ಲ )....
ಯಾಕೆ ಭಾರತದಲ್ಲಿ ಮಾತ್ರ ಹೀಗೆ????