ನಲ್ಲೆಯ ಗುಂಗು
ಕವನ
ನನ್ನ ನಲ್ಲೆಯ ಗುಂಗು
ನನ್ನನ್ನು ಸದಾ ಮತ್ತಿನಲ್ಲಿರುವಂತೆ
ಮಾಡುತ್ತದೆ
ನನ್ನವಳನ್ನು ಪರಿತಪಿಸುವ ಮನಸ್ಸು
ಸದಾ ನೆನಪಲ್ಲೆ ಕಾಲ ಕಳೆಯುವುದು
ಆಕೆ ದೂರವಿದ್ದರು ನನ್ನ
ಹ್ರುದಯದ ಮಿಡಿತ ಜಾಸ್ತಿಯಗುತ್ತದೆ
ಆಸೆಗಳ ಸಾಲಿನಲ್ಲಿ ಸದಾ ನನ್ನನ್ನು
ಮುಂದೆ ಇರಿಸಿ
ನನ್ನ ಆಸೆಗಳನ್ನೆಲ್ಲಾ ಅವಳ
ಅಧೀನದಲ್ಲಿಟ್ಟುಕೊಂಡು
ನನ್ನನ್ನು ನೀರಿನಿಂದ ತೆಗೆದ
ಮೀನಿನಂತೆ ಮಾಡಿದ್ದಾಳೆ
ಏನಾದರು ಆಗು
ಏನಾದರು ಮಾಡು
ಎಂದೆಂದಿಗೂ ನೀನು
ನನ್ನವಳಾಗಿರು