ನಲ್ಲೆ, ನೀನಿಂತು ಸಾಗುವಾ ಅಂಬಾರಿ
ಬರಹ
ನಲ್ಲೆ,
ಕೇಳಲು ನೀ ಬಳಿ ಬರುತ್ತಿರುವ ಸಪ್ಪಳ
ಎನ್ನ ಮೊಗ ಎಣ್ಣೆಯಲಿ ತೇಲಿಬಿಟ್ಟ ಹಪ್ಪಳ
ಎನ್ನ ಮೊಗ ಎಣ್ಣೆಯಲಿ ತೇಲಿಬಿಟ್ಟ ಹಪ್ಪಳ
ನೀ ಕುಡಿನೋಟ ಬೀರುತ್ತ ಹಾಗೆ ಸಾಗಲು
ನೋಡುತ ಹಾಗೆ ನಿಂತೆ, ಧೈರ್ಯವಿಲ್ಲದೆ ನಿನ್ನಪ್ಪಲು
ನೋಡುತ ಹಾಗೆ ನಿಂತೆ, ಧೈರ್ಯವಿಲ್ಲದೆ ನಿನ್ನಪ್ಪಲು
ನಸುಗೋಪ ತೋರುತ ನೀ ಹಾಗೆ ಸಾಗಲು ಅಂದು
ಹೆರಳ ಹಿಡಿದೆ ನಿನ್ನ ಹಿಂದೆಯೇ ಓಡುತ ಬಂದು
ಹೆರಳ ಹಿಡಿದೆ ನಿನ್ನ ಹಿಂದೆಯೇ ಓಡುತ ಬಂದು
ಗಕ್ಕನೆ ನಿಂತೆ ನೀನು ಬೆಚ್ಚುತ ಗರಬಡಿದವಳಂತೆ
ಕೂಗಾಡಿದ ಅವನು ಮೈಮೇಲೆ ದೆವ್ವ ಬಂದವನಂತೆ
ಕೂಗಾಡಿದ ಅವನು ಮೈಮೇಲೆ ದೆವ್ವ ಬಂದವನಂತೆ
ಹಲವಾರು ಬಾರಿ ನಿನಗಾಗಿ ನಾ ಕಾದಿದ್ದೆ
ಒಂದೆರಡು ಬಾರಿ ನನಗಾಗಿ ನೀ ಅಲ್ಲಿದ್ದೆ
ಒಂದೆರಡು ಬಾರಿ ನನಗಾಗಿ ನೀ ಅಲ್ಲಿದ್ದೆ
ನೀ ಕೆಂಪು ಉಟ್ಟರೂ ಚೆನ್ನ ನೀಲಿ ತೊಟ್ಟರೂ ಅಂದ
ಚಿತ್ತಾರದ ಉಡುಗೆ ತೊಟ್ಟರೆ ನೀನಿನ್ನೂ ಚೆಂದ
ಚಿತ್ತಾರದ ಉಡುಗೆ ತೊಟ್ಟರೆ ನೀನಿನ್ನೂ ಚೆಂದ
ನಲ್ಲೆ, ನೀನು ನಿಂತು ಸಾಗುವಾ ಅಂಬಾರಿ
ನಿನ್ ತಂಗಿ ಪುಷ್ಪ ನಿಲ್ಲದೆ ಓಡೋ ವಯ್ಯಾರಿ
ನಿನ್ ತಂಗಿ ಪುಷ್ಪ ನಿಲ್ಲದೆ ಓಡೋ ವಯ್ಯಾರಿ
ನಾನಿಂದು ಓಡಿಸುತ್ತಿರಬಹುದು ಕಾರು
ಆ ದಿನಗಳಲ್ಲಿ ನಿನ್ನದೇ ದರ್ಬಾರು
ಆ ದಿನಗಳಲ್ಲಿ ನಿನ್ನದೇ ದರ್ಬಾರು
ಹೇ ನಲ್ಲೆ,
ಬಿ.ಟಿ.ಎಸ್. ಬಸ್ಸು ನೀನು
ಪ್ರಯಾಣಿಕನು ನಾನು
ಬಿ.ಟಿ.ಎಸ್. ಬಸ್ಸು ನೀನು
ಪ್ರಯಾಣಿಕನು ನಾನು