ನವಂಬರ್ ೧- ವಿಶ್ವ ವೇಗನ್ ದಿವಸ

ನವಂಬರ್ ೧- ವಿಶ್ವ ವೇಗನ್ ದಿವಸ

ಬರಹ

ವೇಗನ್ ಅಂದರೆ ಏನು? ಸಸ್ಯಾಹಾರವೆಂದರೆ ಏನು ಎಂಬುದು ಎಲ್ಲರಿಗೂ ಗೊತ್ತು. ಸಸ್ಯಮೂಲಗಳಿಂದ ಬರುವ ಆಹಾರವೇ ಸಸ್ಯಾಹಾರ.ಆದರೆ ಬಹುತೇಕ ಭಾರತೀಯರು ಸಸ್ಯಾಹಾರದಲ್ಲಿ ಪ್ರಾಣಿಗಳಿಂದ ಸಿಗುವ ಉತ್ಪನ್ನಗಳಾದ ಹಾಲು ಮತ್ತು ಅದರ ಉತ್ಪನ್ನಗಳಾದ ಮೊಸರು, ತುಪ್ಪಗಳನ್ನು ಸೇರಿಸುತ್ತಾರೆ. ಜೈನಧರ್ಮದ ಕಟ್ಟಾ ಸಸ್ಯಾಹಾರಿಗಳು ಜೇನುತುಪ್ಪ, ಈರುಳ್ಳಿ, ಬೆಳ್ಳುಳ್ಳಿಗಳನ್ನು ಮುಟ್ಟುವುದಿಲ್ಲಾ. ಆದರೆ ಇನ್ನೊಂದೆಡೆ ಬಂಗಾಳದ ಸಸ್ಯಾಹಾರಿಗಳಿಗೆ ಮೀನು ಮೆಚ್ಚಿನ ಆಹಾರ!
ನಮ್ಮಲ್ಲಿ ಕೆಲವರು ಬಸಳೆಯನ್ನು ಕೂಡಾ ಮಾಂಸಹಾರವೆಂದು ಪರಿಗಣಿಸುತ್ತಾರೆ. ಕುಂಬಳಕಾಯಿಯನ್ನು ಪ್ರಾಣಿಬಲಿಯ ಬದಲಿಗೆ ಉಪಯೋಗಿಸುತ್ತಾರೆ. ಆದರೆ ಅದನ್ನು ಸಸ್ಯಾಹಾರವೆಂದು ಸೇವಿಸುತ್ತಾರೆ.
ಪಾಶ್ಚಾತ ದೇಶಗಳಲ್ಲಿ ಸಸ್ಯಾಹಾರವೆಂದರೆ, ಹಾಲು ಮಾತ್ರವಲ್ಲ ಮೊಟ್ಟೆ ಕೂಡಾ ಸೇರಿರುತ್ತದೆ. ವೇಗನ್ ಎಂಬುದು ವೆಜಿಟೆರಿಯನ್ ಶಬ್ಧದಿಂದ ಬಂದಿರುತ್ತದೆ. ೧೯೪೪ರಂದು ಇಂಗ್ಲೆಂಡ್ ನಲ್ಲಿ ಪ್ರಥಮ ಕಟ್ಟಾ ಸಸ್ಯಾಹಾರಿಗಳ ಸಂಘ ಸ್ಥಾಪನೆಯಾಯಿತು. ಅದೇ ವೇಗನ್ ಸೊಸೈಟಿ. ಅದರ ಸದಸ್ಯರ ಪ್ರಕಾರ ಇವರು ಸಸ್ಯಾಹಾರ ಬಿಟ್ಟು ಬೇರೆನನ್ನು ತಿನ್ನುವುದಿಲ್ಲಾ. ಪ್ರಾಣಿ ಮೂಲಗಳಿಂದ ಬರುವ ಉತ್ಪನ್ನಗಳಾದ ಹಾಲು, ಮೊಟ್ಟೆ, ಜೇನುತುಪ್ಪ ಇವುಗಳನ್ನು ಸೇವಿಸುವುದಿಲ್ಲಾ. ಮಾತ್ರವಲ್ಲ ಚರ್ಮ, ತುಪ್ಪಳ, ಉಣ್ಣೆ, ರೇಶ್ಮೆ ಮುಂತಾದ ವಸ್ತುಗಳಿಂದ ತಯಾರಿಸಿದ ಉಡುಗೆತೊಡುಗೆಗಳನ್ನು ಉಪಯೋಗಿಸುವುದಿಲ್ಲಾ. ಈಗ ವಿಶ್ವದಾದ್ಯಂತ ಹಲವಾರು ವೇಗನ್ ಸಂಸ್ಥೆಗಳಿವೆ. ನಮ್ಮ ದೇಶದಲ್ಲಿ ಮೇನಕಾ ಗಾಂಧಿ ಕೂಡಾ ಈ ಸಂಸ್ಥೆಯ ಸದಸ್ಯೆ.

ಇದು ತರಂಗದಲ್ಲಿ ಬಂದಿರುವ ಸಣ್ಣ ಲೇಖನದ ಸಾರಾಂಶ:- ಲೇಖಕರ ಹೆಸರು ನಮೂದಿಸಿಲ್ಲಾ. ಅದು ಸಂಪಾದಕರದ್ದೇ ಆಗಿರಬಹುದು.