ನವನವೀನ

ನವನವೀನ

ಕವನ

ಕಾಲ ಚಕ್ರವು ಉರುಳುತಲಿದೆ

ಬೆಳಕ ಪ್ರಭೆ ಬೀರುತಲಿದೆ

ನವನವೀನತೆ ಕಾಣುತಲಿದೆ

ಹೊಸ ಹರುಷ ಪಸರಿಸುತಿದೆ

 

ಎದ್ದೇಳು ನರನೇ ಆಲಸ್ಯ ತೊರೆದು

ಮುಂಜಾವಿನ ಕೋಳಿ ಕೂಗನು ನೆನೆದು

ದಿನಕರನ ಹಾದಿಯನು ಎಂದೆಂದು ತುಳಿದು

ನರಸತ್ತ ಸತ್ವ ಹೀನತೆಯ ತೊರೆದು

 

ಪ್ರಕೃತಿ ಮಾತೆಯ ಒಡಲ ಸಿರಿಯಾಗು

ದೀನರಿಗೆ ಚಂದ್ರಮನ ಬೆಳಕಾಗು

ಮನೆಯ ಬೆಳಗುವ ದೀಪವಾಗು

ಕಷ್ಟಗಳ ಮೆಟ್ಟಿ ನಿಲ್ಲುವವನಾಗು

 

ಜಗದೇಕ ವೀರ ಭರತಮಾತೆಯ ಕುವರ

ನೆಲ ಜಲ ಸಂಪತ್ತು ಯಾವತ್ತು ಅಮರ

ಕಳೆದುದ ನೆನೆಯದೆ ಮುನ್ನುಗ್ಗು ಜೀವನದಿ

ಕಾಯಕದ ನಿಷ್ಠೆ ಪ್ರಜ್ವಲಿಸಲಿ ನವೋಲ್ಲಾಸದಿ

 

-ರತ್ನಾ ಕೆ ಭಟ್,ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್