ನವರಾತ್ರಿಯ ಎಳು, ಎಂಟು ಹಾಗೂ ಒಂಬತ್ತನೆಯ ದಿನಗಳಲ್ಲಿ ದೇವಿಗೆ ನಮನ...

ನವರಾತ್ರಿಯ ಎಳು, ಎಂಟು ಹಾಗೂ ಒಂಬತ್ತನೆಯ ದಿನಗಳಲ್ಲಿ ದೇವಿಗೆ ನಮನ...

ನವರಾತ್ರಿಯ ಎಳು, ಎಂಟು ಹಾಗೂ ಒಂಬತ್ತನೆಯ ದಿನಗಳಲ್ಲಿ ದೇವಿಗೆ ನಮನ...

ಯಾ ದೇವೀ ಸರ್ವಭೂತೇಷು, ಕಾಂತಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು, ಲಕ್ಷ್ಮೀರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು, ವೃತ್ತಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾವ ದೇವಿಯು ಸರ್ವ ಜೀವಿಗಳಲ್ಲೂ ಕಾಂತಿ ರೂಪದಿಂದಲೂ, ಲಕ್ಷ್ಮೀ ರೂಪದಿಂದಲೂ, ಸಕಲ ಭೂತಗಳಲ್ಲಿ ವೃತ್ತಿ ರೂಪದಿಂದಲೂ ನೆಲೆಸಿರುವಳೋ, ಆ ದೇವಿಗೆ ಪುನಃ ಪುನಃ ನಮಸ್ಕರಿಸುತ್ತೇನೆ.

ಯಾ ದೇವೀ ಸರ್ವಭೂತೇಷು, ಸ್ಮೃತಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು, ದಯಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು, ತುಷ್ಟಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿಯು ಸರ್ವ ಜೀವಿಗಳಲ್ಲಿ ನೆನಪಿನ ರೂಪದಿಂದಲೂ, ಸಕಲ ಪ್ರಾಣಿಗಳಲ್ಲಿ ದಯಾರೂಪದಿಂದಲೂ, ಸರ್ವ ಜಂತುಗಳಲ್ಲಿ ತೃಪ್ತಿಯ ರೂಪದಿಂದಲೂ ನೆಲೆಸಿರುವಳೋ ಆ ದೇವಿಗೆ ನಾನು ಪುನಃ ಪುನಃ ನಮಸ್ಕರಿಸುತ್ತೇನೆ.

ಯಾ ದೇವೀ ಸರ್ವಭೂತೇಷು, ಮಾತೃರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು, ಭ್ರಾಂತಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಇಂದ್ರಿಯಾಣಾಮಧಿಷ್ಠಾತ್ರೀ, ಭೂತಾನಾಂ ಚಾಖಿಲೇಷು ಯಾ |
ಭೂತೇಷು ಸತತಂ ತಸ್ಯೈ, ವ್ಯಾಪ್ತಿದೇವ್ಯೈ ನಮೋ ನಮಃ ||

ಚಿತಿರೂಪೇಣ ಯಾ ಕೃತ್ಸ್ನಮೇತಾದ್ವ್ಯಾಪ್ಯ ಸ್ಥಿತಾ ಜಗತ್ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿಯು ಸರ್ವ ಭೂತಗಳಲ್ಲಿಯೂ ಮಾತೃ ರೂಪದಿಂದ ನೆಲೆಸಿರುವಳೋ, ಯಾವ ದೇವಿಯು ಸರ್ವ ಪ್ರಾಣಿಗಳಲ್ಲಿಯೂ ಭ್ರಾಂತಿಯ ರೂಪದಿಂದ ನೆಲೆಸಿರುವಳೋ, ಯಾವ ದೇವಿಯು ಇಂದ್ರಿಯಗಳ ಮತ್ತು ಪಂಚ ಭೂತಗಳ ಅಧಿಷ್ಠಾತ್ರಿಯೊ, ಅಂತಹ ಸರ್ವವ್ಯಾಪಿಯಾದ ದೇವಿಗೆ ಪುನಃ ಪುನಃ ನಮಸ್ಕರಿಸುತ್ತೇನೆ.

ಯಾವ ದೇವಿಯು ಚಿದ್ರೂಪದಿಂದ ಈ ಜಗತ್ತನ್ನು ವ್ಯಾಪಿಸಿರುವಳೋ, ಆ ದೇವಿಗೆ, ಆ ಮಾತೃರೂಪಿಣಿಗೆ, ಮಾತೃದೇವಿಗೆ ಮತ್ತೆ ಮತ್ತೆ ನಮಸ್ಕರಿಸುತ್ತಲೇ ಇರುತ್ತೇನೆ. ಸರ್ವವ್ಯಾಪಿ ಜಗನ್ಮಾತೆಗೆ ಅನಂತಾನಂತ ವಂದನೆಗಳನ್ನು ಸಲ್ಲಿಸುತ್ತಲೇ ಇರುತ್ತೇನೆ....

ಸರ್ವರಿಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು....

Comments