ನವರಾತ್ರಿಯ ಒಂಬತ್ತು ದಿನಗಳು ದೇವಿಗೆ ನಮನ...
ನವರಾತ್ರಿಯ ಪ್ರಾರಂಭ - ಪಾಡ್ಯದಿಂದ ದೇವಿಗೆ ನಿತ್ಯ ನಮನ...
ನಮೋ ದೇವ್ಯೈ ಮಹಾದೇವ್ಯೈ ಶಿವಾಯೈ ಸತತಂ ನಮಃ |
ನಮಃ ಪ್ರಕೃತ್ಯೈ ಭದ್ರಾಯೈ ನಿಯತಾಃ ಪ್ರಣತಾಃ ಸ್ಮತಾಮ್ ||
ರೌದ್ರಾಯೈ ನಮೋ ನಿತ್ಯಾಯೈ ಗೌರ್ಯೈ ಧಾತ್ರೈ ನಮೋ ನಮಃ |
ಜ್ಯೋತ್ಸ್ನಾಯೈ ಚೇಂದುರರೂಪಿಣ್ಯೈ ಸುಖಾಯೈ ಸತತಂ ನಮಃ ||
ಕಲ್ಯಾಣ್ಯೈ ಪ್ರಣತಾ ವೃದ್ಧ್ಯೈ ಸಿದ್ಧ್ಯೈ ಕುರ್ಮೋ ನಮೋ ನಮಃ |
ನೈಋತ್ಯೈ ಭೂಭೃತಾಂ ಲಕ್ಷ್ಮ್ಯೈ ಶರ್ವಾಣ್ಯೈ ತೇ ನಮೋ ನಮಃ ||
ಮಹಾದೇವಿಯೇ, ಶಿವೆಯೆ, ಪ್ರಕೃತಿಯೇ, ಭದ್ರೆಯೇ ನಿಯತ ಚಿತ್ತರಾಗಿ ನಿನಗೆ ಇದೋ ನಮಿಸುತ್ತೇವೆ.
ರೌದ್ರ ರೂಪಿಯಾದ ದೇವಿಯೇ, ಗೌರಿಯೇ , ನಿತ್ಯಳೇ, ಜಗದ್ಧಾತ್ರಿಯೇ, ಬೆಳದಿಂಗಳ ಹಾಗೂ ಚಂದ್ರನ
ರೂಪಿಯಾದ, ಸುಖರೂಪಳಾದ ದೇವಿಯೇ ನಿನಗಿದೋ ನಮಿಸುತ್ತೇವೆ.
ಕಲ್ಯಾಣಿಯೇ ದೇವಿ, ಐಶ್ವರ್ಯರೂಪಿಯೇ ತಾಯೇ, ಸಿದ್ಧಿರೂಪಳೇ, ಅದೃಷ್ಟವನ್ನು ವೃದ್ಧಿಸುವವಳೇ,
ಶರ್ವಾಣಿಯೇ ನಿನಗೆ ಪುನ: ಪುನ: ನಮಿಸುತ್ತೇವೆ....
ನವರಾತ್ರಿಯ ಎರಡನೆಯ ದಿನದಂದು ಅಮ್ಮನಿಗೆ ನಮಸ್ಕಾರಗಳು...
ದುರ್ಗಾಯೈ ದುರ್ಗಪಾರಾಯೈಸಾರಾಯೈ ಸರ್ವಕಾರಿಣ್ಯೈ |
ಖ್ಯಾತ್ಯೈ ತಥೈವ ಕೃಷ್ಣಾಯೈ ಧೂಮ್ರಾಯೈ ಸತತಂ ನಮಃ ||
ಅತಿಸೌಮ್ಯಾತಿರೌದ್ರಾಯೈ ನತಾಸ್ತಸ್ಯೈ ನಮೋ ನಮಃ|
ನಮೋ ಜಗತ್ಪ್ರತಿಷ್ಠಾಯೈ ದೇವ್ಯೈ ಕೃತ್ಯೈ ನಮೋ ನಮಃ ||
ಯಾ ದೇವೀ ಸರ್ವಭೂತೇಷು, ವಿಷ್ಣುಮಾಯೇತಿ ಶಬ್ದಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಕಷ್ಟಗಳಿಂದ ಪಾರುಮಾಡುವ ದುರ್ಗೇ, ಸಾರರೂಪಳೂ, ಸರ್ವಕಾರಿಣಿಯೂ,
ವಿವೇಕಖ್ಯಾತಿಯೂ, ಕೃಷ್ಣವರ್ಣಳೂ, ಧೂಮ್ರವರ್ಣಳೂ ಆದ ದೇವಿಯೇ... ಅತಿಸೌಮ್ಯಳೂ
ಅತಿರೌದ್ರಳೂ, ಜಗತ್ತಿನ ಆಧಾರಳೂ ಆದ ದೇವಿಯೇ...ಕೃತಿರೂಪಳೇ ತಾಯೇ
ನಿನಗಿದೋ ನಮಸ್ಕಾರಗಳು...
ನವರಾತ್ರಿಯ ಮೂರನೆಯ ದಿನ :
ಯಾ ದೇವಿ ಸರ್ವಭೂತೇಷು, ಚೇತನೇತ್ಯಭಿಧೀಯತೇ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾದೇವೀ ಸರ್ವಭೂತೇಷು, ಬುದ್ಧಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾ ದೇವೀ ಸರ್ವಭೂತೇಷು, ನಿದ್ರಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾವ ದೇವಿಯು ಸರ್ವ ಪ್ರಾಣಿಗಳಲ್ಲೂ ಪ್ರತಿ ಜೀವಿಯಲ್ಲೂ ಬುದ್ಧಿರೂಪಿಣಿಯಾಗಿಯೂ,
ನಿದ್ರಾ ರೂಪಿಣಿಯೂ ಆಗಿದ್ದು, ಚೈತನ್ಯವಾಗಿದ್ದುಕೊಂಡು ಚೇತನಾ ಎಂದು ಕರೆಯಲ್ಪಡುವಳೋ,
ಆ ದೇವಿಗೆ ನಾನು ಪುನ: ಪುನ: ನಮಸ್ಕರಿಸುತ್ತೇನೆ...
Comments
ಉ: ನವರಾತ್ರಿಯ ಒಂಬತ್ತು ದಿನಗಳು ದೇವಿಗೆ ನಮನ...
ಉ: ನವರಾತ್ರಿಯ ಒಂಬತ್ತು ದಿನಗಳು ದೇವಿಗೆ ನಮನ...
ಉ: ನವರಾತ್ರಿಯ ಒಂಬತ್ತು ದಿನಗಳು ದೇವಿಗೆ ನಮನ...