ನವರಾತ್ರಿ ಸಂಭ್ರಮ

ನವರಾತ್ರಿ ಸಂಭ್ರಮ

ಕವನ

ನವರಾತ್ರಿ ತಂತು ನಾಡಿಗೆ ಶುಭರಾತ್ರಿ.......

ಸಂಭ್ರಮಕೆ ಸಗ್ಗವಾಯ್ತು ಮಹಿಷಾಪುರಿ

ನವದುರ್ಗೆಯರು ಇಳಿದು ಪಾವನ ಧರಿತ್ರಿ...

ನವನವ ರೂಪತಾಳಿದ ಶುಭರಾತ್ರಿ...

......ನವರಾತ್ರಿ... ಬಂತು....ನವರಾತ್ರಿ

......ನವರಾತ್ರಿ... ತುಂತು...ಶುಭರಾತ್ರಿ..

 

ಶೈಲದಿಂದಿಳಿದಳು ಶೈಲಪುತ್ರಿಯು

ಶೂಲಧಾರಿಣಿಯಾದಳು ಆ ಸತಿಯು..

.....ನವರಾತ್ರಿ.... ಬಂತು...ನವರಾತ್ರಿ

.....ನವರಾತ್ರಿ.... ತಂತು...ಶುಭರಾತ್ರಿ

 

ತ್ಯಾಗ ವೈರಾಗ್ಯ ಮೂರ್ತಿಯಾದಳು

ಬೋಗವಿಲ್ಲದ ಬ್ರಹ್ಮಚಾರಿಣಿ ದೇವಿಯು

....ನವರಾತ್ರಿ.... ಬಂತು...ನವರಾತ್ರಿ

....ನವರಾತ್ರಿ.... ತಂತು...ಶುಭರಾತ್ರಿ

 

ಮಸ್ತಕದಲಿ ಚಂದ್ರಘಂಟೆ ಧರಿಸಿ ಬಂದಳು

ಹಸ್ತದಲ್ಲಿ ಶಸ್ತ್ರವನಿಡಿದು ಚಂದ್ರಘಂಟೆಯು

....ನವರಾತ್ರಿ.... ಬಂತು... ನವರಾತ್ರಿ

....ನವರಾತ್ರಿ... .ತಂತು...ಶುಭರಾತ್ರಿ

 

ರೋಗರುಜಿನ ಸರಿಸಿ, ಕುಂಬಳ ಬಲಿ ಕೇಳಿ

ಭೋಗ ನೀಡಲು ಕೂಷ್ಮಾಂಡಿನಿಯಾದಳು

....ನವರಾತ್ರಿ.... ಬಂತು....ನವರಾತ್ರಿ

....ನವರಾತ್ರಿ.... ತಂತು....ಶುಭರಾತ್ರಿ

 

ಮಮತೆ ವಾತ್ಸಲ್ಯತುಂಬಿ ಲಾಲಿಹಾಡಿ ದೇವಿ

ಸಂಭ್ರಮದಿಂದ ಸ್ಕಂದಮಾತೆ ಇಳಿವಳು

....ನವರಾತ್ರಿ.... ಬಂತು....ನವರಾತ್ರಿ

....ನವರಾತ್ರಿ.... ತಂತು....ಶುಭರಾತ್ರಿ

 

ಅಸುರ ಸಂಹಾರಕೆ ,ಕಾತ್ಯರ ತಪ ಮೆಚ್ಚಿ

ಹೊಸರೂಪದಿ ಕಾತ್ಯಾಯಿನಿಯಾದಳು

.....ನವರಾತ್ರಿ.... ಬಂತು....ನವರಾತ್ರಿ

.....ನವರಾತ್ರಿ.... ತಂತು....ಶುಭರಾತ್ರಿ

 

ಜ್ಞಾನಿಯಾಗುತ ಘೋರರೂಪದಿ ದೇವಿಯು

ಅಜ್ಞಾನ ನೀಗುವ ಕಾಲರಾತ್ರಿಯಾದಳು

.....ನವರಾತ್ರಿ.... ಬಂತು....ನವರಾತ್ರಿ

.....ನವರಾತ್ರಿ ....ತಂತು....ಶುಭರಾತ್ರಿ

 

ಶ್ವೇತಾಂಬರಿ ಆದಿಶಕ್ತಿ ಮಹಾಗೌರಿಯಾಗುತ

ದುಷ್ಟದಮನಮಾಡಲೆಂದೇ ದುರ್ಗಿಯಾದಳು

....ನವರಾತ್ರಿ.... ಬಂತು....ನವರಾತ್ರಿ

....ನವರಾತ್ರಿ... ತಂತು...ಶುಭರಾತ್ರಿ

 

ಅಷ್ಟಸಿದ್ಧಿಗೈವಳು ದೇವಿ ಸಿದ್ಧಿದಾತ್ರೀ ಲಕ್ಷ್ಮೀ

ಇಷ್ಟಾರ್ಥಗಳನೀವ ಲಕ್ಷ್ಮೀ ಸರಸ್ವತಿ ಪಾರ್ವತಿ

ನವರಾತ್ರಿಯಲಿ ಪೂಜಿಸಿ  ಫಲವನ್ನು ಸ್ವೀಕರಿಸಿ

ದೇವಿಯ ಪದಕಮಲದಲಿ ಶರಣಾಗೋ ರಾತ್ರಿ

.....ನವರಾತ್ರಿ.... ಬಂತು...ನವರಾತ್ರಿ

....ನವರಾತ್ರಿ... ತಂತು....ಶುಭರಾತ್ರಿ.

-ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್