ನವಿಲುಗರಿ - ಒಂದು ಗಝಲ್

ನವಿಲುಗರಿ - ಒಂದು ಗಝಲ್

ಕವನ

ಎಲೆಯಲ್ಲಿ ಮುಸಿನಗುತ ಒಲವ

ತೋರುತಿದೆ ಗರಿಯು....!!

ನಲ್ಲೆಯ ಸೇರುವ ಕಾತುರದಿ ನಗೆಯ

ಬೀರುತಿದೆ ಗರಿಯು...!!

 

ಪ್ರೇಮಿಗಳ ಪ್ರೀತಿಯ ಗುರುತಿಗೆ

ರಮಣಿಯ ಕಾಣಿಕೆ....!!

ವಿದ್ವಾಂಸರ ಬರೆಯುವ ಸಾಧನ

ಎನ್ನುತಿದೆ ಗರಿಯು..!!

 

ಕೃಷ್ಣನ ವಜ್ರಕಿರಿಟದಲ್ಲಿ ಹೊಳೆಯುತ್ತ

ನಲಿಯುವ ಪುಚ್ಚ..!!

ನಲ್ಲನಲ್ಲೆಯರ ಪ್ರಣಯ ಸಮಾಗಮದಿ

ಸೇರುತಿದೆ ಗರಿಯು..!!

 

ಬಣ್ಣಬಣ್ಣದ ಕಲಾಕುಂಚ ಧರಿಸುತ

ಮಯೂರ ಕುಣಿದಾಡಿದೆ..!!

ಗಾಳಿಯಲಿ ಅನುರಾಗ ಬಂಧದೊಳು

ಬೆರೆತಿದೆ ಗರಿಯು...!!

 

ಮಸಿಕುಡಿಕೆಯಲಿ ಅದ್ದಿ ಪತ್ರವನ್ನು

ಗೀಚಿದನು ಅಭಿನವ..!!

ಹುಸಿಯಲ್ಲ ನುಡಿಯು ಸತ್ಯವನ್ನು

ಹೇಳುತಿದೆ ಗರಿಯು..!!

 

-*ಶಂಕರಾನಂದ ಹೆಬ್ಬಾಳ* 

 

ಚಿತ್ರ್