ನವೀಕರಿಸು ಮನ ಚಾಲನೆ ಪರವಾನಗಿ

ನವೀಕರಿಸು ಮನ ಚಾಲನೆ ಪರವಾನಗಿ

ಕವನ

ನವೀಕರಿಸು ಮತ್ತೆ ಮನಚಾಲನೆ ಪರವಾನಗಿ 
ನಕಾರಾತ್ಮಕ ಚಿಂತನೆ ಛಾಪು  ಅಳಿಸಿ 
ವಿಷಯಾತ್ಮಕ ಅಹಂ ತೃಷ್ಣೆ ದೂರವಿರಸಿ 
ಆತ್ಮ ಪ್ರಜ್ಞೆಯ ಪ್ರಜ್ವಲ ಜ್ಯೋತಿಯಲಿ

ಶೋಧಿಸು ವಿಶಾಲ ಆತ್ಮ ಕ್ಷೇತ್ರದಲಿ
ದಹಿಸು ರಾಗ -ದ್ವೇಷ ಜ್ಞಾನದ ಅರಿವಿನಲಿ
ಸಿಲುಕದೆ ಫಲಾಸಕ್ತಿಯ ಮೋಹ ಸುಳಿಯಲಿ
ಸಂಸ್ಕರಿಸು ಚಿತ್ತ ಅನನ್ಯ  ಭಕ್ತಿಯಲಿ

ಅನಿಯಂತ್ರಿತ ಈ ಜನ್ಮದ ಬವಣೆಯಲಿ
ನಿರಂತರ ಸವೆಯುತ್ತಿರುವ ದೇಹ ಆಯುಷ್ಯದಲಿ
ಭಗವಚ್ಚಿನ್ತನ ಮನ ಮಂದಿರದ ಜಲಚಿಹ್ನೆಯಾಗಲಿ
ಜೀವನ್ಮುಕ್ತಿಯ ವಿರಾಟ ಸಾಧನವಾಗಲಿ 

                                                 ಶ್ರೀ ನಾಗರಾಜ್
                                                  7/4/21