"ನವ್ಯ ಸಂಪದ”ದ ಮೊದಲ ಪ್ರಕಟಣೆ: "ನಮ್ಮ ಹೆಮ್ಮೆಯ ಭಾರತ”

"ನವ್ಯ ಸಂಪದ”ದ ಮೊದಲ ಪ್ರಕಟಣೆ: "ನಮ್ಮ ಹೆಮ್ಮೆಯ ಭಾರತ”

“ಸಂಪದ"ದಲ್ಲಿ ಪ್ರಕಟವಾಗುವ ಬರಹಗಳನ್ನು ನಿರ್ವಹಿಸುತ್ತಿರುವ "ನವ್ಯ ಸಂಪದ” ಪುಸ್ತಕ ಪ್ರಕಟಣೆ ಶುರು ಮಾಡಿದೆ ಎಂದು ಸಂಪದಿಗರಿಗೆಲ್ಲರಿಗೂ ತಿಳಿಸಲು ಸಂತೋಷವಾಗುತ್ತಿದೆ.

ಮೊದಲ ಪುಸ್ತಕ
"ನವ್ಯ ಸಂಪದ”ದ ಮೊದಲ ಪುಸ್ತಕ "ನಮ್ಮ ಹೆಮ್ಮೆಯ ಭಾರತ” 23 ಜುಲಾಯಿ 2022ರಂದು ಮಂಗಳೂರಿನಲ್ಲಿ ಲೋಕಾರ್ಪಣೆಯಾಗಿದೆ. (ಇದರ ವರದಿ 26-7-2022ರಂದು "ಸಂಪದ"ದಲ್ಲಿ ಪ್ರಕಟವಾಗಿದೆ.)

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರಕಟವಾಗಿರುವ ಈ ಪುಸ್ತಕದ ಲೇಖಕರು ಅಡ್ಡೂರು ಕೃಷ್ಣ ರಾವ್. ಪುಸ್ತಕಕ್ಕೆ ಮುನ್ನುಡಿ ಬರೆದವರು ಮಹಾಬಲೇಶ್ವರ ಎಂ. ಎಸ್., ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿ.ಇ.ಓ.,ಕರ್ನಾಟಕ ಬ್ಯಾಂಕ್ ಅವರು. ಪುಸ್ತಕದಲ್ಲಿ ನಮ್ಮ ಭಾರತದ ಬಗ್ಗೆ ಅಭಿಮಾನ ಚಿಮ್ಮಿಸುವ 100 ಸಂಗತಿಗಳ ವಿವರಗಳಿವೆ. (128 ಪುಟಗಳು)

ಆದ್ದರಿಂದ, ಈ ಸಂದರ್ಭದಲ್ಲಿ ಸರಕಾರದ ಆದೇಶದಂತೆ ಶಾಲಾಕಾಲೇಜುಗಳಲ್ಲಿ ಜರಗಿಸಬೇಕಾಗಿರುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಇದು ಉತ್ತಮ ರೆಫರೆನ್ಸ್  ಪುಸ್ತಕ. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಕೊಡಲಿಕ್ಕೂ ಇದು ಸೂಕ್ತ.

ಪುಸ್ತಕದ ಪ್ರತಿಗಳು ಎಲ್ಲಿ ಲಭ್ಯ?
ಈ ಪುಸ್ತಕದ ಪ್ರತಿಗಳು ಇಲ್ಲಿ ಲಭ್ಯವಿವೆ:
-ಮಂಗಳೂರಿನ ನವಕರ್ನಾಟಕ ಪ್ರಕಾಶನದ ಎರಡು ಮಳಿಗೆಗಳು
(ಶರವು ಶ್ರೀ ಮಹಾಗಣಪತಿ ರಸ್ತೆ ಮಳಿಗೆ ಮತ್ತು ಜ್ಯೋತಿ ಟಾಕೀಸಿನ ಹತ್ತಿರದ ಮಳಿಗೆ)
-ಮಂಗಳೂರಿನ ಪಂಜೆ ಮಂಗೇಶ ರಾವ್ ರಸ್ತೆಯ ಸಾಹಿತ್ಯ ಕೇಂದ್ರ
-ಮಂಗಳೂರಿನ ಕೆ.ಎಸ್.ಆರ್.ಟಿ.ಸಿ. ನಿಲ್ದಾಣದ ವಾರ್ತಾ ಮಳಿಗೆ
-ಉಡುಪಿಯ ಪಂಡಿತ್ ದೀನದಯಾಳ್ ವೃತ್ತದ ಸೀತಾ ಬುಕ್ ಹೌಸ್

ಪುಸ್ತಕ ಕಳಿಸುವ ವ್ಯವಸ್ಥೆ
ಆಸಕ್ತರ ವಿಳಾಸಕ್ಕೆ ಈ ಪುಸ್ತಕ ಕಳಿಸಲು ವ್ಯವಸ್ಥೆ ಮಾಡಲಾಗಿದೆ:
ಪುಸ್ತಕದ ಬೆಲೆ: ರೂ. 100/- ಮತ್ತು ರಿಜಿಸ್ಟರ್ಡ್ ಪಾರ್ಸೆಲ್ ಶುಲ್ಕ: ರೂ.36/- ಒಟ್ಟು ವೆಚ್ಚ: ರೂ.136/-
1)"ನವ್ಯ ಸಂಪದ”ದ ಬ್ಯಾಂಕ್ ಅಕೌಂಟಿಗೆ ರೂ.136/- ಎನ್.ಇ.ಎಫ್.ಟಿ. (NEFT) ಪಾವತಿ ಮಾಡಬಹುದು.
ಬ್ಯಾಂಕಿನ ಹೆಸರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India)
ಬ್ಯಾಂಕಿನ ಬ್ರಾಂಚ್: ಬಿಜೈ - ಮಂಗಳೂರು (Bejai - Mangalore)
ಐ.ಎ.ಎಸ್.ಸಿ. ಕೋಡ್ (IFSC code) UBIN0930881
ಅಕೌಂಟ್ ನಂಬರ್: 510101000090777
2)ಅಥವಾ, ಗೂಗಲ್ ಪೇ ಮೂಲಕ ಮೊಬೈಲ್ 9480654663 ಇದಕ್ಕೆ ರೂ.136/- ಪಾವತಿಸಬಹುದು.
3)ಹಣ ಪಾವತಿಸಿದವರ ಹೆಸರು ಮತ್ತು ವಿಳಾಸ ಎಸ್.ಎಮ್.ಎಸ್. ಅಥವಾ ವಾಟ್ಸಾಪ್ ಮೂಲಕ ಈ ಮೊಬೈಲಿಗೆ ತಿಳಿಸಿದರೆ ಪುಸ್ತಕ ಕಳಿಸಲಾಗುವುದು: 9448152620