ನವ ಜನ್ಮ ಪಡೆದಂತೆ...
ಹೊಸ ಹೊಸತು ಕಾವ್ಯ ಹೊರ ಬರಲಿಯಿಂದು ನವ ಜನ್ಮ ಪಡೆದ ಹಾಗೆ
ಮೌನದಲಿ ನಾನು ಕುಳಿತ್ತಿದ್ದರೇನೆ ನವ್ಯತೆಯ ಬರಹವೆಲ್ಲ
ಲೇಖನಿಯ ಬರೆಯೆ ಹೊಸತೊಂದು ಲೋಕ ಸನಿಹದಲಿ ಬೇಕು ನನಗೆ
ಅದಕಾಗಿ ದೂರ ಹುಡುಕಾಡಬೇಕು ಹೊಸ ಕನಸ ನವ್ಯ ಕೊಡುಗೆ
ಬಳಗಗಳ ಒಳಗೆ ಇಳಿದಾಡಿದಾಗ ಮೊದಲಿದ್ದ ಕನಸು ಇಲ್ಲ
ಒಂದಾಗಿ ನಡೆವ ನನಸೆಲ್ಲ ಅಳಿಸಿ ಬರಿ ಬಣ್ಣ ಸೋರಿತಲ್ಲ
ಹೀಗಾಯ್ತು ಏಕೆ ಸುಮ್ಮನಿರು ಸಾಕೆ ಯಾರಿಗೆ ಯಾರು ಇಲ್ಲ
ನೀ ಬರೆದ ಬರಹ ನನಗಾಯ್ತು ಸಿಡಿಲು ಎನುತ ಹೋದನಲ್ಲ
ಫಲವೆಲ್ಲ ಸೋರಿ ಹಿರಿತನವೆ ಸತ್ತು ಮಸಣವನು ಸೇರಿತಲ್ಲ
ಅತಿ ಆಸೆಯೆಲ್ಲ ಚಿಗುರಲ್ಲೆ ಇರಲು ಹಳತಲ್ಲೆ ಕುಳಿತಿತಲ್ಲ
ಮನ ಮನದ ಪ್ರೀತಿ ಮುಚ್ಚುತಲೆ ಹೋಗಿ ಹೊರೆಯಾದ ಬರಹವೆಲ್ಲ
ಕಣ್ಮುಚ್ಚಿ ಕುಳಿತು ಹೊಗಳುತಲೆ ಹೋಗಿ ಗೋರಿಯನು ಸೇರಿತಲ್ಲ !
***
ಗಝಲ್ ( ಚೋಟಿ )
ಕವಿ ಬರೆದಾಗ ಕವನ
ರವಿ ಬೆಳಗಿದಾಗ ಜೀವನ
ಹೂವು ಅರಳಿದಾಗ ದವನ
ಜೀವ ನಲಿದಾಗ ಚೆಲ್ವನ
ರಸ ಹೀರಿದಾಗ ಕಂಪನ
ಋಷಿ ಕುಳಿತಾಗ ಚಿಂತನ
ಧರೆ ಕುಸಿದಾಗ ಸ್ತಂಭನ
ಬಳೆ ಕುಣಿದಾಗ ಮೋಹನ
ಈಶ ಬಂದಾಗ ಪಾವನ
ದ್ವೇಷ ಹೋದಾಗ ಕಾವನ
-ಹಾ ಮ ಸತೀಶ
ಚಿತ್ರ ಕೃಪೆ: ಇಂಟರ್ನೆಟ್ ತಾಣ