ನವ ವಧುವಿಗೆ ಕಿವಿ ಮಾತು (ಹೀಗೆ ಸುಮ್ಮನೆ)

ನವ ವಧುವಿಗೆ ಕಿವಿ ಮಾತು (ಹೀಗೆ ಸುಮ್ಮನೆ)

ಬರಹ

ನಿನ್ನೊಲವಿನ ಚೆಲುವನಿಗೆ
ಗೆಲುವಾಗುವ ಮುನ್ನ
ಅರಿತು ನಡೆ ಬೆರೆತು ನಡೆ
ಸೊಗಸಿಹುದು ಬಾಳಿನಲಿ

ಮನದೊಳಗಿನ ಪ್ರೇಮಿಗೆ
ಒಲವಾಗುವ ಮುನ್ನ
ಅವನೆಡೆಗೆ ಮಾತಾಗಿಬಿಡು
ಬೆಳಕಿಹುದು ಬದುಕಿನಲಿ

ಕಣ್ಣೊಳಗಿನ ಕನಸುಗಳಿಗೆ
ಮಾತಾಗುವ ಮುನ್ನ
ಅವನಳತೆಗೆ ಕಿವಿಯಾಗಿಬಿಡು
ಸಿಹಿಯಿಹುದು ಬಾಳಿನಲಿ

ಮನೆಯೊಳಗಿನ ದೀವಿಗೆಗೆ
ಬೆಳಕಾಗುವ ಮುನ್ನ
ಮನೆಮನಗಳಿಗೆ ಹೂವಾಗಿಬಿಡು
ಗೆಲುವಿಹುದು ಜೀವದಲಿ

ಇದು ನನ್ನತ್ತಿಗೆಗೆ ಮನೆ ತುಂಬಿಸಿಕೊಳ್ಳುವ ಸಮಯದಲ್ಲಿ ನಾನು ಬರೆದ ಸಾಲುಗಳು
ನಿಜ ನಮ್ಮ ಮನೆಗೆ ಬಂದ ಮೊದಲ ಹೆಣ್ಣುಮಗಳು ಆಕೆ ಸದಾ ಸಂತೋಷದಿಂದ ಇರಬೇಕೆಂಬುದೇ ಇದರ ಆಶಯ