ನವ ವರ್ಷ - ನವ ಸಂಕಲ್ಪ

ನವ ವರ್ಷ - ನವ ಸಂಕಲ್ಪ

ಕವನ

 ಮುದಡಿದಿರು ಮನ ಭೂತ ಕಾಲದ ಚಕ್ರದಲಿ

ಚಿಂತಿಸದಿರು ಮನ ಭವಿಷ್ಯದ ಆತಂಕದಲಿ

ಭೂತ ಭವಿಷ್ಯ ಕಾಲಚಕ್ರದ ಸಂಧಿಕಾಲದಲಿ

ಜೀವಿಸು ಪರಿಪೂರ್ಣತೆಯ ವರ್ತಮಾನದಲಿ

 

ವಿಷಯಾಸಕ್ತಿಗಳ ದಬ್ಬಾಳಿಕೆಗೆ ಆಗಲಿ ಕೊನೆ

ಅರಿಷಡ್ವರ್ಗಗಳ ಹತೋಟಿಯಲಿಡಲು ಪಡು ಬವಣೆ

 ನಡೆಸಲಿ ಅಂತಃಕರಣ ಸತ್ಯಾನ್ವೇಷಣೆ

ಅನುಭವಿಸಿಲ್ಲೇ  ನಾಕ ನರಕದ ಸಿಹಿ ಕಹಿ ನಿರೂಪಣೆ

 

ಹೊಸ ವರ್ಷಕೆ ಮಾಡು ಮನ ನವ ಸಂಕಲ್ಪ

ಅಳಿಸಲಿ ಅಸಹನೆ ಅಸಹಿಷ್ಣುತೆಯ ಪರಿತಾಪ

ಹೊರದೂಡಲಿ ಅಜ್ಞಾನ ಅವಿದ್ಯಾ ತಿಮಿರ ಕೂಪ

ಆಗಲಿ ಬುದ್ಧಿ ಮನ ಪ್ರಶಾಂತತೆಯ ಪ್ರತಿರೂಪ

ಸಚ್ಚಿದಾನಂದ ಚೈತನ್ಯ ಜ್ಯೋತಿ ಸ್ವರೂಪ .

 

ಶ್ರೀ  ನಾಗರಾಜ್