ನವ ಸಾಲು

ನವ ಸಾಲು

ಕವನ

ಹೊಸ ವರುಷ ಬಂದಿತು‌...

ನವ ಹರುಷವ ತಂದಿತು...

ಸಕಲ ಜೀವರಾಶಿಗೆಲ್ಲಾ...

ನವ ಚೇತನ ಹರಡಿತಲ್ಲಿ.

 

ಉರುಳಿ, ಉರುಳಿ ಸಾಗಿತು

ತನ್ನ ಕಾಯಕವನು ಮಾಡಿತು...

ರಭಸದಿಂದ ಕಾಲ ಚಕ್ರದಾಟದಲ್ಲಿ

ಮೇಲೆ, ಕೆಳಗೆ ಸಾಗಿ ಸರಿಯಿತಲ್ಲಿ.

 

ಕಪ್ಪು- ಬಿಳುಪು ಆಗದಿರದೆ ?

ಹಸಿರು- ಹಳದಿ ತೋರದಿರದೆ ?

ನಿಸರ್ಗದ ನವ್ಯ ಸೊಬಗಿನಲ್ಲಿ

ಒಲವು- ಚೆಲುವು ಬೆಳಕಿನಲ್ಲಿ.

 

ಹಿಂದೆ- ಮುಂದೆ ಆಗದಿರದೇ?

ಮುಂದೆ- ಹಿಂದೆ ಆಗಲಿಹುದು !

ನಾವಿನ್ಯತೆಯ ಹೊಂಗಿರಣದಲ್ಲಿ

ಜಗಮಗಿಸುವ ಜಗವು ಇಲ್ಲಿ.....

 

ಹೊಸತು,ಹೊಸತು ಭಾವದಲ್ಲಿ

ವಿಶ್ವ ಶಾಂತಿ ಕನಸು- ನನಸಿನಲ್ಲಿ

ಕಟ್ಟೋಣ ಸಮೃದ್ಧಿಯ ಮನಸ್ಸನ್ನು

ಬೆಸೆಯೋಣ ಭಾವೈಕ್ಯತೆಯ ನಾಡನ್ನು.

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್