ನಾಕೇ ನಾಕು - ಅಷ್ಟೇ ಸಾಕು

ನಾಕೇ ನಾಕು - ಅಷ್ಟೇ ಸಾಕು

ಕವನ

ಅವನು
ಅವಳಲ್ಲಿ
ನಲ್ಮೆಯಿಂದ
ತನ್ನೆಲ್ಲಾ
ಒಲವು, ಕಾಳಜಿ
ಕನಸು, ಕಾಮನೆ
ಬಯಕೆ,
ಸುಖ-ಸಂತೋಷಗಳನ್ನೆಲ್ಲಾ
ತುಂಬಿದ
ಬಳಿಕವೂ
ಹೊಟ್ಟೆ
ಉಬ್ಬದಿದ್ದುದಕೆ
ಮೊದಲ ಬಾರಿ
ಅನುಮಾನಿಸಿದ್ದ
ಯಾರನ್ನ
ಎನ್ನುವುದು
ಮುಖ್ಯವಲ್ಲ........
+++++++++++++
ಅಕ್ಕಿ
ಆರಿಸುವಾಗ
ಬರುವ
ಬಿಕ್ಕಳಿಕೆ
ಅವನ
ನೆನಪಂತೆ
ಹೆಕ್ಕಿ-ಹೆಕ್ಕಿ
ಕಸ
ಎಸೆಯುತ್ತಾಳೆ...........
++++++++++++++
ಚಿಟ್ಟೆ-ಹೂವು
ಬೆಂಕಿ-ಹಾವು
ಈಗ
ವಾಕರಿಕೆ.........
++++++++++++++
ಹಾಗೆಯೇ
ಅರಳಿಬಿಡಬೇಕು
ಮೊಗ್ಗಂತೆ,
ಸಂಜೆ
ಸಾಯುವ
ಭಯವಿಲ್ಲದೆ........