ನಾಗನ ಪಹರೆ

ನಾಗನ ಪಹರೆ

ಕವನ

ಹಸಿರಿನ ಗಿಡವಿದು ಬಸಿರನು ಹೊತ್ತಿದೆ

ಕಸಿಯುವ ಬಯಕೆ ಬೇಡಪ್ಪ

 

ಸಸಿಗಳ ಫಲಗಳ ಕಸಿಯಲು ಬಂದರೆ

ಬುಸು ಬುಸು ಎಂಬ ನಾಗಪ್ಪ

 

ಕಾವಲು ಕಾಯಲು ಹಾವಿದು ನಿಂತಿದೆ

ಕೋವಿಯ ಬಳಕೆ ಬೇಕಿಲ್ಲ

 

ಗೊಂಚಲು ಸೇಬಿಗೆ ಹೊಂಚನು ಹಾಕುವ

ಸಂಚದು ಮುಂದೆ ನಡೆಯಲ್ಲ

 

ಫಲಗಳ ನಡುವಲಿ ಮಲಗಿದೆ ನಾಗರ

ಚೆಲುವಿನ ನೋಟ ಕಣ್ಗಳಿಗೆ

 

ತಾಪಕೆ ಬೆಚ್ಚಿತೆ,ಲೋಪವ ಕಂಡಿತೆ

ಕೋಪಕೆ ಸಿಲಕಿ ಬಂದಿಹುದೆ?

 

ಗರಳವನುಗುಳುವ ನರರಿಗೆ ಹೋಲಿಸೆ

ಬರದದು ಸಮಕೆ ಮನುಜರಿಗೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್