ನಾಗರಾಜನ ದ್ವೇಷ - ಅಂತ್ಯ -೨ ಸ್ನೇಹ ಅದು ಅಮರ

ನಾಗರಾಜನ ದ್ವೇಷ - ಅಂತ್ಯ -೨ ಸ್ನೇಹ ಅದು ಅಮರ

ಅಂತ್ಯ -೨ ಸ್ನೇಹ ಅದು ಅಮರ



ಚಲಿಸುತ್ತದ್ದ ಬಸ್ಸಿಗೆ ತುರ್ತು ಬ್ರೇಕ್ ಹಾಕಿದಾಗ ಇನ್ನೇನು ತನ್ನ ಮುಖ ಮುಂದಿನ ಸೀಟಿಗೆ ಹೊಡೆಯಿತೆಂನ್ನುವಸ್ಟರಲ್ಲಿ ಸಾವರಿಸಿಕೊಂಡ ನಾಗರಾಜ ಮುಂದಿದ್ದ ಕಂಬಿ ಹಿಡಿದು ಕಣ್ಣು ಬಿಟ್ಟು ಸುತ್ತಲೂ ನೋಡಿದ. ಬಸ್ಸು ಆಗಲೆ ಹಳೆ ಶಿವಾಜಿ ಚಿತ್ರಮಂದಿರದ ಬಳಿ ನಿಂತಿದೆ. ಡ್ರೈವರ್ ಆಟೊ ರಿಕ್ಷ ಡ್ರೈವರ್ ಜೊತೆ ಜಗಳ ಕಾಯುತ್ತಿದ್ದನೆ ‘ ಏನಯ್ಯ ರಸ್ತೆ ಮದ್ಯೆ ತಕ್ಷಣ ನಿಲ್ಲಿಸಿದ್ರೆ ಹ್ಯಾಗಯ್ಯ. ಏನೊ ನಂಗೂ ಗಾಡಿ ಕಂಟ್ರೋಲ್ ಸಿಕ್ಕಿದ್ದಕ್ಕೆ ಆಯ್ತು ಇಲ್ಲದಿದ್ದರೆ ನೀನು ನಿನ್ನ ಆಟೊ ಎರಡೂ ಹರೊ ಹರ ಅಷ್ಟೆ ‘ ಅಂತಿದ್ದ ಈ ಜಗಳದ ಕಡೆಗೆ ಅಷ್ಟು ಗಮನ ಕೊಡದ ನಾಗರಾಜ ನೆನಸಿಕೊಂಡಿದ್ದು---, ನಂದ ಚಿತ್ರಮಂದಿರದ ಬಳಿ ಬಂದಾಗ ಜೋಂಪು ಹತ್ತಿದಂತೆ ಅನ್ನಿಸಿತು, ಆ ಸಮಯದಲ್ಲಿ ಆ ಶಿವಶಂಕರನ ಮತ್ತು ನನ್ನ ದೃಷ್ಟಿ ನೆಟ್ಟಿತ್ತು. ಆಮೇಲೆ ಏನೇನೋ ಭ್ರಮೆ, ಇದೇಕೆ ಹೀಗೆಲ್ಲ ಅನ್ನಿಸಿತು ? ಛೆ ಛೆ.. ಎಂಥಹ ದೃಷ್ಟ ಕಲ್ಪನೆ, ಅನ್ನಿಸಿ ಹೌದು ಅಂದಹಾಗೆ ಅವನೆಲ್ಲಿ ಕಾಣಿಸುತ್ತಿಲ್ಲವಲ್ಲ ಎಂದೆನಿಸಿ, ಸುತ್ತಲೂ ಒಮ್ಮೆ ಕಣ್ಣಾಹಿಸಿದ ನಾಗರಾಜ.


ಅರ್ದಕರ್ದ ಬಸ್ಸು ಖಾಲಿಯಾಗಿತ್ತು. ಹಾಗೆ ಗಮನಿಸಿದಾಗ ತನ್ನ ಮುಂದಿನ ನಾಲ್ಕನೆ ಸೀಟಿನಲ್ಲಿ ಕಿಟಕಿಯ ಪಕ್ಕ ಕುಳಿತಿರುವವನು ಅವನೆ ಶಿವಶಂಕರ. ದೃಡ ಪಡಿಸಿಕೊಂಡ ನಾಗರಾಜ ಇನ್ನು ತಡಮಾಡಬಾರದು ಇದಕ್ಕೆ ಇತಿಶ್ರೀ ಹಾಡಲೇ ಬೇಕು ಎಂದೆನಿಸಿ, ತಕ್ಷಣ ಮೇಲೆದ್ದು ಮುಂದೆ ಹೋಗಿ ಶಿವಶಂಕರನ ಪಕ್ಕದಲ್ಲಿ ಖಾಲಿ ಇದ್ದ ಆಸನದಲ್ಲಿ ಆಸೀನನಾದ.


ಕಿಟಕಿಯಿಂದ ಹೊರಗೆ ನೋಡುತ್ತದ್ದ ಶಿವಶಂಕರ ಪಕ್ಕ ಕುಳಿತವರಾರೆಂದು ತಿರುಗಿ ನೋಡಿ ಅವ್ವಾಕ್ಕಾಗಿ ಹೋದ. ಇದು ಸಾದ್ಯವೆ..? ಎಷ್ಟೋ ವರ್ಷಗಳಿಂದ ಮಾತು ಬಿಟ್ಟಿದ್ದ ನಾಗರಾಜ ತನ್ನ ಪಕ್ಕವೆ ಬಂದು ಕುಳಿತ್ತಿದ್ದಾನೆ. ನಾಗರಾಜನೆ ಮೊದಲು ಮಾತಿಗೆ ಮುಂದಾದ.


ಅಲ್ಲಯ್ಯ ಎಷ್ಟು ವರ್ಷವಾಯ್ತು ನಿನ್ನ ನೋಡಿ ಎದುರಿಗೆ ಬಂದ್ರೆ ಮಾತಾಡ್ಸೊಲ್ವೇನಯ್ಯ ಅಂದ.


 ಒದ್ದೆಯಾಗಿದ್ದ ಕಣ್ಣುಗಳಿಂದ ಇನ್ನೇನು ನೀರು ಹೊರ ಬರಬಹುದೆಂದು ಅರಿತ  ಶಿವಶಂಕರ ತಲೆ ತಗ್ಗಿಸಿ, ನಾಗರಾಜನ ಕೈ ಹಿಡಿದು, ‘ ನನ್ನನ್ನು ಕ್ಷಮಿಸಿಬಿಡು ನಾಗರಾಜ ನಿನಗೆ ಬಾಕಿ ಕೊಡಬೇಕಾಗಿರುವ ಹಣಕ್ಕೆ ಆ ದಿನ ಏನೇನೋ ಮಾತನಾಡಿಬಿಟ್ಟೆ, ನನ್ನದು ತಪ್ಪಯಿತು. ಸ್ವಲ್ಪ ಕಾಲಾವಕಾಶ ಕೊಡು ಹ್ಯಾಗದರು ಮಾಡಿ ಹಣ ಹಿಂದಿರುಗಿಸುತ್ತೇನೆ ‘ ಎಂದ. ಅದಕ್ಕೆ ಉತ್ತರಿಸುತ್ತ ನಾಗರಾಜನೆಂದ.


‘ ಹೊಗಲಿ ಬಿಡಯ್ಯ ಅದಕ್ಕೇಕೆ ಬೇಸರ ಮಾಡ್ಕೋತೀಯ. ಕಷ್ಟ ಎಲ್ಲರಿಗೂ ಬಂದೆ ಬರುತ್ತೆ. ಹಾಳು ಹಣಕ್ಕೋಸ್ಕರ ನಮ್ಮ ಸ್ನೇಹ ಯಾಕೆ ಬಲಿಯಾಗ ಬೇಕು ‘ ಅಂತ ಹೇಳಿ ಸ್ನೇಹಿತನು ಹಿಡಿದ ಕೈ ಅದುಮುವಾಗ ನಾಗರಾಜನ ಕಣ್ಣುಗಳು ಒದ್ದೆಯಾಗಿದ್ದನ್ನ ಶಿವಶಂಕರನೂ ಗಮನಿಸಿದ್ದ...............


 


ಇದಕ್ಕೆ ಅಲ್ಲವೆ ಹೇಳೋದು ‘ ಸ್ನೇಹ - ಅದು ಅಮರ, ಸ್ನೇಹ ಅತಿ ಮದುರ. ‘