ನಾಗರಿಕ ಸಮಾಜದ ನಿರೀಕ್ಷೆಯಲ್ಲಿ...

ನಾಗರಿಕ ಸಮಾಜದ ನಿರೀಕ್ಷೆಯಲ್ಲಿ...

ನನಗೆ, 

ಬಿಪಿ ಚೆಕ್ ಮಾಡಿದರು - 80/120 ಪಕ್ಕಾ,

ಶುಗರ್ ಚೆಕ್ ಮಾಡಿದರು -  ನಾರ್ಮಲ್,

ಕೊಲೆಸ್ಟ್ರಾಲ್  - very good,

ಥೈರಾಯ್ಡ್  -  Excellent,

pulse -  Perfect,

ಹಿಮೋಗ್ಲೋಬಿನ್  -  Super,

Heart -  First class,

Total body - No problem,

Next...

ಪ್ರೀತಿ ಚೆಕ್ ಮಾಡಿದರು - ಸ್ವಲ್ಪ ಜಾಸ್ತಿ,

ತ್ಯಾಗ ಚೆಕ್ ಮಾಡಿದರು - ಸ್ವಲ್ಪ ಕಡಿಮೆ,

ಕೋಪ - ತುಂಬಾ ಜಾಸ್ತಿ,

ತಾಳ್ಮೆ - Abnormal,

ಅಹಂಕಾರ - Detected,

ಸಹಕಾರ - ಸಾಧಾರಣ,

ಬುದ್ದಿ - ಸ್ವಲ್ಪ ಕಡಿಮೆ,

Next,..

ನೋವು?

ಅದು ಯಾವುದಕ್ಕೂ ಲೆಕ್ಕಕ್ಕೇ ಸಿಗಲಿಲ್ಲ,

ಅದು ಯಾವ ಅಳತೆಗೂ ನಿಲುಕಲಿಲ್ಲ,

ಅದು ಯಾರಿಗೂ ಅರ್ಥವಾಗಲೇ ಇಲ್ಲ,

ಅದನ್ನು ಅಳೆಯುವ ಮಾಪನವೂ ಇಲ್ಲ,

ಬದುಕೇ ನೋವಾಗಿರುವಾಗ ಅಳೆಯುವುದೇನನ್ನು ,

ಆದರೂ ಬದುಕುತ್ತಿದ್ದೇನೆ,

ನೋವುಗಳನ್ನು ನುಂಗಿ,

ಬದುಕುತ್ತಲೇ ಇರುತ್ತೇನೆ,

ಉಸಿರು ನಿಲ್ಲುವವರೆಗೂ,

ನಾಗರಿಕ ಸಮಾಜದ ನಿರೀಕ್ಷೆಯಲ್ಲಿ...

-ವಿವೇಕಾನಂದ. ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ