ನಾಗರ ಪಂಚಮಿ
ಕವನ
ಶ್ರಾವಣ ಮಾಸದ ಆರಂಭದಲ್ಲಿ
ನಾಗರ ಪಂಚಮಿ ಬಂದಿಹುದು
ನಾಡಿನ ಜನತೆಗೆ ಸಾಲು ಸಾಲು
ಹಬ್ಬವ ಹೊತ್ತು ತಂದಿಹುದು..!!
ಚಿಣ್ಣರೆಲ್ಲರೂ ತೋಟಕ್ಕೆ ಹೋಗಿ
ಹದವಾದ ಮಣ್ಣನ್ನು ತಂದಿಹರು
ಬುಸುಗುಡುವ ಹಾವಿನಂತೆಯೇ
ಚಂದದ ಮೂರ್ತಿ ಮಾಡಿಹರು..!!
ಮನೆಯ ಸದಸ್ಯರೆಲ್ಲರೂ ಸೇರಿ
ಹುತ್ತಕ್ಕೆ ಹಾಲನ್ನು ಎರೆಯುವರು
ಎಳ್ಳುಂಡೆಯನ್ನು ನೈವೇದ್ಯ ಅರ್ಪಿಸಿ
ನಾಗಪ್ಪನಿಗೆ ಕೈ ಮುಗಿಯುವರು..!!
ಅಣ್ಣ ತಂಗಿ ಮನೆಯಂಗಳದಲ್ಲಿ
ದೊಡ್ಡ ಜೋಕಾಲಿ ಕಟ್ಟಿರುವರು
ಸಂಭ್ರಮದಿಂದ ಆಟವ ಆಡುತ್ತಾ
ಸಿಹಿಯಾದ ಉಂಡಿ ಸವೆಯುವರು..!!
ವರ್ಷಕ್ಕೊಮ್ಮೆ ಬರುವ ಹಬ್ಬವಿದು
ಎಲ್ಲರಿಗೂ ಹರುಷ ಮೂಡಿಸಿಹುದು
ಅಕ್ಕರೆಯಿಂದ ಪ್ರೀತಿಯ ಹಂಚುತಲಿ
ಒಂದೊಳ್ಳೆ ಭಾಂದವ್ಯ ಬೆಸೆದಿಹುದು..!!
ಆತ್ಮೀಯರೆಲ್ಲರಿಗೂ ನಾಗರ ಪಂಚಮಿ
ಹಬ್ಬದ ಶುಭಾಶಯಗಳು..
-‘ಪುಷ್ಪಕವಿ’ ಉಮೇಶ ಹೂಗಾರ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
