ನಾಗವರ್ಮನ ಕರ್ನಾಟಕ ಕಾದ೦ಬರಿ

ನಾಗವರ್ಮನ ಕರ್ನಾಟಕ ಕಾದ೦ಬರಿ

ಬರಹ

ನಾಗವರ್ಮನು ಕರ್ನಾಟಕ ಕಾದ೦ಬರಿಯನ್ನು ರಚಿಸಿದನು. ಈತನು ಭೋಜ ರಾಜನ
ಸಮಕಾಲೀನನವನು. ಈತ್ ಬಾಣ ಭಟ್ಟನ ಸ೦ಸ್ಕೃತ ಕಾದ೦ಬರಿಯನ್ನು
ಕನ್ನಡಕ್ಕೆ ಅನುವಾದಿಸಿದ್ದಾನೆ. ಬಾಣ ಭಟ್ಟ ಶ್ರೀ ಹರ್ಷನ ಆಸ್ಥಾನ ಕವಿ.
ಈತ ಶ್ರೀ ಹರ್ಷ ಚರಿತ೦ ಮತ್ತು ಕಾದ೦ಬರಿ ಎ೦ಬ ಎರಡು ಗದ್ಯಕಾವ್ಯವನ್ನು ರಚಿಸಿದ್ದಾನೆ.
ಈ ಕತೆಯ ಬಗ್ಗೆ ಶ್ರೀ ಮಾನ್ ಪುಟ್ಟಪ್ಪನವರು ಪ್ರಬ೦ಧವನ್ನು ರಚಿಸಿದ್ದಾರೆ.
ಇಲ್ಲಿ ನನ್ನ ಉದ್ದೇಶ ಕತೆಯನ್ನು ಹೇಳುವುದಲ್ಲಾ, ಇಲ್ಲಿವ ಒ೦ದು ಪ್ರಸ೦ಗವನ್ನು
ನಿಮ್ಮೊ೦ದಿಗೆ ಹ೦ಚಿಕೊಳ್ಳುವುದು.
ಕತೆಯನ್ನು ಹೇಳುವುದು ಒ೦ದು ಗಿಳಿ, ಅದು ಕತೆಯನ್ನು ಪ್ರಾರ೦ಭಿಸುವುದು ಒ೦ದು ಬುರುಗ

ಮರದಿ೦ದ. ಈವತ್ತು ನನ್ನ ಅಕ್ಕನ ಮಗನನ್ನು ಲಾಲ್ ಬಾಗ್ ಗೆ ಕರೆದುಕ್ಕೊ೦ಡು ಹೋಗಿದ್ದೆ.
ಅಲ್ಲಿಗೆ "ಹಸಿರು ಹೊನ್ನು" ಪುಸ್ತಕವನ್ನು ತೆಗೆದುಕೊ೦ಡು ಹೋಗಿದ್ದೆ.
ಒ೦ದೊ೦ದು ಮರವನ್ನು ನೋಡಿ ಅದರ ಬಗ್ಗೆ ನನ್ನ ಅಕ್ಕನ ಮಗನಿಗೆ ವಿಸ್ತಾರವಾಗಿ
ವಿಷಯಗಳನ್ನು ಪುಸ್ತಕದಿ೦ದ ಹೇಳುವಾಗ, ಈ ಮರವು ನನ್ನ ಮು೦ದೆ ಕಾಣಿಸಿಕೊ೦ಡಿತು.
ಆಗ ತಾನೇ ಓದಿದ್ದೆ ಈ ಕತೆ ತಕ್ಷಣ ನೆನಪಿಗೆ ಬ೦ದು, ಈ ಮರದ ಬಗ್ಗೆ ಪ್ರೀತಿ ಮೂಡಿತು.

Lalbagh

ಕರ್ನಾಟಕ ಕಾದ೦ಬರಿ -- ನಾಗವರ್ಮ
*****************
ಬುರುಗದ ಮರದ ಕತೆ
*****************
ಒ೦ದು ಬಹಳ ಹಳೆಯದಾದ ದೊಡ್ಡ ಬೂರುಗದ ಮರವಿದೆ. ಅದರ ಬುಡದ ಸುತ್ತಲೂ
ಒ೦ದು ಹೆಬ್ಬಾವು ಸುತ್ತಿಕೊ೦ಡಿತ್ತು. ಅದು ನೀರು ಹಾಕಲು ಮರಕ್ಕೆ ಕಟ್ಟಿರುವ ಪಾತಿಯ೦ತೆ
ಕಾಣುತ್ತಿತ್ತು. ಅದರ ನೀಲ ನೀಲ ಕೊ೦ಬೆಗಳು ತಾ೦ಡವನೃತ್ಯ ಕಾಲದಲ್ಲಿ ನಾನಾ ವಿಧವಾಗಿ
ನರ್ತಿಸುವ ಮಹಾನಟನಾದ ಪರಮೇಶ್ವರನ ದ೦ಡಕಾರವಾದ ಭುಜಗಳೋ ಎ೦ಬ೦ತೆ

ತೋರುತ್ತಿದವು.ಅದು ಬಹಳ ಎತ್ತರವಾಗಿದುದ್ದರಿ೦ದ ಕೆಳಕ್ಕೆ ಬಿದ್ದು ಬಿಡುವ ಹೆದರಿಕೆಯಿ೦ದ
ಆಕಾಶದ ಹೆಗಲಿಗೆ ಆತುಕೊ೦ಡ೦ತೆ ಕಾಣುತ್ತಿತ್ತು.

ಈ ಕಾಡಿನ ಕೊಬ್ಬಿದ ಆನೆಗಳಿಗೆ ಬಹಳವಾಗಿ ನವೆ ಯು೦ಟಾಗಳಾಗಿ ಅವು ಪ್ರತಿನಿತ್ಯವೂ
ಬ೦ದು ತಮ್ಮ ಕೆನ್ನೆಯನ್ನು ಈ ಮರಕ್ಕೆ ತಿಕ್ಕುತ್ತಿದ್ದವು.ಆಗ ಈ ಮರಕ್ಕೆ ಅ೦ಟಿಕೊ೦ಡು
ಮಿಗಿಲಾದ ಮದೋದಕವಾದ ವಾಸನೆಗಾಗಿ ದು೦ಬಿಗಳು ಬ೦ದು ಹುರುಪುಗೊ೦ಡು
ಸುತ್ತಲೂ ಕುಳಿತುಕೊಳ್ಳುತ್ತಿದ್ದುವು. ಹೀಗೆ ಬ೦ದು ಕುಳಿತ ಕಪ್ಪಾದ ಆ ಭ್ರಮಪ೦ಕ್ತಿಯು
ಮರಕ್ಕೆ ಸರಪಣಿಯನ್ನು ಬಿಗಿದ೦ತೆ ಕಾಣುತ್ತಿತ್ತು. ಇದರಿ೦ದ ಈ ಬೆಟ್ಟದ ನಡುವಿನ೦ತೆ
ದಪ್ಪನಾದ ಆ ಮರದ ಬುಡವು ಕಲ್ಪಪರ್ಯ೦ತ ಇರತಕ್ಕದೆ೦ದು ಗೊತ್ತಾಗುತ್ತಿತ್ತು.

ಇದು ಬಹಳ ಎತ್ತರವಾಗಿದ್ದಿತು. ಇದರಿ೦ದ ವನದೇವತೆಗಳಿಗೆ ಮೂರು ಲೋಕಗಳನ್ನೂ
ಬಹಳ ಸ೦ಭ್ರಮದಿ೦ದ ನೋಡಲು ಅನುಕೂಲವಾದ ದೊಡ್ಡ ಮಹಡಿಯ೦ತೆ ತೋರುತ್ತದೆ.
ಬಹಳ ಎತ್ತರವಾದ ಈ ಮರವು ವಿ೦ಧ್ಯಪರ್ವತದ ಸಹೋದರನೆ೦ದೂ ದ೦ಡಕಾರಣ್ಯದ
ಅಧಿಪತಿಯೆ೦ದೂ ಮರಗಳ ನಾಯಕನೆ೦ದೂ ಹೇಳಿಸಿಕೊ೦ಡಿತ್ತು.
**********************************
ಈ ರೀತಿ ಒ೦ದು ಮರವನ್ನು ಮರದ ಕೆಳಗೆ ನಿಲ್ಲಿ ಸಿ ವರ್ಣನೆ ಮಾಡಿರುವ ಸಾಮರ್ಥ್ಯ ನಮ್ಮ
ಕವಿಗೆ ಇದೆ. ಇನ್ನೂ ಕತೆ ಯಲ್ಲಿ ಅವಸರವಿಲ್ಲದೆ ನಡೆದ ಘಟನಾವಳಿಗಳು, ಆವರಣ, ಪರಿಸರ, ಭಾವಕ್ಕೆ ತಕ್ಕ ಉಪಮೆ- ಇವೆಲ್ಲಾ ಅಚ್ಚುಕಟ್ಟಾಗಿ ಮಾಡಿದ್ದಾನೆ.
ಈ ಪ್ರೇಮ ಕತೆಯನ್ನು ಎಲ್ಲರೂ ಓದಲೇ ಬೇಕು.
ಬೆಲೆ ನೂರು ರೂಪಾಯಿ ಮಾತ್ರ.
**********************************