ನಾಚಿಕೆ ಇಲ್ಲದ ಸಾಲುಗಳು - ೬
ಮನುಷ್ಯನ ಮಾಂಸವನು
ಕಾಡಿನ ಪ್ರಾಣಿಗಳಿಗೆ ನಿಷೇದಿಸಿದವರಾರು ?
ಆದರೂ
ಅವುಗಳ ಸಂಖ್ಯೆ ಪಾತಳಕ್ಕಿಳಿದು
ಜನಸಂಖ್ಯೆ ಸ್ಪೋಟಿಸಿಲ್ಲವೇ ?
ನಾವೆಷ್ಟು ನಂಬಿಕಸ್ಥರು !!!!!!!!
***************************************
ಪ್ಲಾಸ್ಟಿಕನಂತೆ, ಪ್ರಕೃತಿಗೆ
ಬೇಡವಾಗಿ ಸಾವಿರಾರು
ವರ್ಷಗಳ ಕಾಲ ಜೀವಿಸುವ
ಕೆಲವು ತತ್ವಗಳನ್ನು
ಸುಡುವುದೇ ಒಳ್ಳೆಯದು,
(ಉದಾಹರಣೆ : ಜಾತೀಯತೆ)
***************************************
ಸಾಕಾರಗೊಳಿಸದೆ ಇರುವ
ಕನಸುಗಳೇ ತಿರುಗಿ ಬಿದ್ದು
ಸೇಡು ತೀರಿಸಿಕೊಳ್ಳುತ್ತವೆ,
ವೃದ್ದಾಪ್ಯದ ಹಾಸಿಗೆಯ ಮೇಲೆ,
***************************************
ಕಳೆದ
ಹಿಂದಿನ ಇಪ್ಪತ್ತು ವರ್ಷಗಳನ್ನು
ಹಾಗು
ಕಳೆಯಬೇಕಾದ
ಮುಂದಿನ ಇಪ್ಪತ್ತು ವರ್ಷಗಳನ್ನು
ಕೊಂದರೆ,,,,,,,
ನಮ್ಮ ಇಂದಿನ
ಬದುಕು ನಮಗೆ ಸಿಗಬಹುದು
***************************************
ಮೋಕ್ಷಕ್ಕಾಗಿ ಸದಾ
ಹಾತೊರೆದವನೂ
ಹುಟ್ಟಿದ್ದಾನೆ ಇಲ್ಲಿ,,,,,,,, ಮತ್ತೊಮ್ಮೆ,
ಅನೇಕ ಕಾರಣಗಳಿಗಾಗಿ,
ಬದುಕು, ಅವಕಾಶಗಳನ್ನು ನಿಲ್ಲಿಸುವುದಿಲ್ಲ.
-ಜೀ ಕೇ ನ
Comments
ಉ: ನಾಚಿಕೆ ಇಲ್ಲದ ಸಾಲುಗಳು - ೬
1. ಮನುಷ್ಯನೇ! ಪ್ರಾಣಿಗಳಿಗೆ ಅದರ ಅರಿವಿಲ್ಲ ಅಷ್ಟೇ!
2. ಮನುಷ್ಯ ನಿರ್ಮಿತ ಹುಟ್ಟಿನ ಜಾತಿ ತೊಲಗಬೇಕು. ಮನುಷ್ಯ ಜಾತಿ ಉಳಿಯಬೇಕು. ಯಾವುದೇ ನಾಯಿಯನ್ನು ನೋಡಿದರೂ ಅದು ನಾಯಿ ಎಂದು ಗುರುತಿಸುತ್ತೇವಲ್ಲವೇ, ಹಾಗೆ! ಮನುಷ್ಯನನ್ನು ನೋಡಿದರೆ ಮನುಷ್ಯ ಎಂದು ಗುರುತಿಸುವ ಪ್ರವೃತ್ತಿ ಬರಬೇಕು. ನಿಮ್ಮ ಕಳಕಳಿ ಚೆನ್ನಾಗಿದೆ. ಜಾತಿ ಆಧಾರಿತ ಆಡಳಿತ ವ್ಯವಸ್ಥೆ ಇರುವವರೆಗೂ ಇದು ಕಷ್ಟವೇ.
3. :)
4. ವರ್ತಮಾನಕ್ಕೆ ಬೆಲೆ ಕೊಡಬೇಕೆಂಬ ಕರೆ ಚೆನ್ನಾಗಿದೆ.
5. :)