ನಾಚಿಕೆ ಇಲ್ಲದ ಸಾಲುಗಳು - 4

ನಾಚಿಕೆ ಇಲ್ಲದ ಸಾಲುಗಳು - 4

ಗೆಲುವು
ಪ್ರಪಂಚವನ್ನು ನಮಗೆ ಪರಿಚಯಿಸುತ್ತದೆ.
ಹಾಗು 
ನಮ್ಮನ್ನು ಪ್ರಪಂಚಕ್ಕೆ ಪರಿಚಯಿಸುತ್ತದೆ.

ಸೋಲು
ನಮ್ಮನ್ನೇ ನಮಗೆ ಪರಿಚಯಿಸುತ್ತದೆ 

***********************************
ಪ್ರೇಮ
ಹುಟ್ಟುವುದೂ ಇಲ್ಲ,
ಸಾಯುವುದೂ ಇಲ್ಲ,

ನಾವೇ ಹುಟ್ಟುಹಾಕಿ 
ಕೊನೆಗೆ ಕೊಲ್ಲುತ್ತೇವೆ

***********************************
ಕೈಗಡಿಯಾರ ನಿಂತರೂ
ಸಮಯ ನಿಲ್ಲಲಾರದು 
ಎನ್ನುವುದೇ 

ಜಗತ್ತಿನ ಅತೀ ದೊಡ್ಡ ಸತ್ಯ

***********************************
ಉಸಿರಾಟಕ್ಕೂ- ಬದುಕಿರುವುದಕ್ಕೂ 
ಯಾವುದೇ ಸಂಬಂದ ಇಲ್ಲ,

ಕೆಲವರೂ ಉಸಿರಾಡದೆಯೇ 
ಬದುಕಿರುತ್ತಾರೆ.
ಇನ್ನು ಕೆಲವರು, ಜೀವಂತವಾಗಿದ್ದು
ಉಸಿರಾಟ ನಿಲ್ಲಿಸಿರುತ್ತಾರೆ.

***********************************
ದ್ವೇಷವನ್ನು ಪ್ರೇಮವನ್ನಾಗಿ 
ಪರಿವರ್ತಿಸಬೇಕಾದರೆ,

ಶತ್ರುವಿನ ಜಾಗದಲ್ಲಿ ನಮ್ಮನ್ನೂ
ನಮ್ಮ ಜಾಗದಲ್ಲಿ ಶತ್ರುವನ್ನೂ
ಕಲ್ಪಿಸಿಕೊಳ್ಳಬೇಕು.

***********************************
ಹುಣಸೇ ಬೀಜವನ್ನು ನೆಟ್ಟು
ಪೋಷಿಸಿ, ಬೆಳೆಸಿ, ಮರವಾಗಿಸಿ

ಕೊನೆಗೆ,

ಮರ ಮಾವಿನ ಹಣ್ಣು ನೀಡಲಿಲ್ಲ 
ಎಂದು ಗೋಗರೆಯುವುದು ಮೂರ್ಖತನ,

ಹುಣಸೆಯನ್ನೇ ಸವಿಯಲು ತಯಾರಾಗಬೇಕು.

***********************************
ನಮ್ಮೆಲ್ಲ ದುಃಖಗಳಿಗೆ,
ಒಂದಲ್ಲ ಒಂದು ರೀತಿಯಲ್ಲಿ
ನಾವೇ ಕಾರಣಕರ್ತರು ಎನ್ನುವುದು

ಕೊನೆಯಲ್ಲಿ ಎಲ್ಲರೂ ಕಂಡುಕೊಳ್ಳುವ 
ಕಹಿ ಸತ್ಯ 

- ಜೀ ಕೇ ನ 

ಮುಗ್ಧಸಿಂಚನ‌