ನಾಚಿಕೆ ಇಲ್ಲದ ಸಾಲುಗಳು - 5

ನಾಚಿಕೆ ಇಲ್ಲದ ಸಾಲುಗಳು - 5

ಖದೀಮರೆಲ್ಲರೂ ಹುಟ್ಟಿದ್ದು 
ತಾಯಿಯ ಹೊಟ್ಟೆಯಲ್ಲೇ 
ಎನ್ನುವುದು, 
ಜಗಕ್ಕಿರುವ ಏಕೈಕ ಸಾಂತ್ವನ

*****************************************

ಜಗದ ತುಂಬೆಲ್ಲ
ಕತ್ತಲೆ ಇರುವುದರಿಂದಲೇ,
ಬೆಳಕಿಗೆ ಅಷ್ಟೊಂದು 
ಹಾಹಾಕಾರ,

*****************************************

ದಂಪತಿಗಳ
ದೇಹವೆಲ್ಲ ಬಾಗಿ ಬೆಂಡಾಗಿ 
ಚರ್ಮವೆಲ್ಲ ಸುಕ್ಕುಗಟ್ಟಿದ ಮೇಲೂ 
ಜೊತೆಗಿರುವರು ಎಂದರೆ 
ಶುದ್ಧ ಪ್ರೇಮದಿಂದಲೇ ಅಲ್ಲವೇ. 
*****************************************

ನಾಶ ಎನ್ನುವ ಅಂತ್ಯ
ಇನ್ನೊಂದು ಮಹೋನ್ನತ ಹುಟ್ಟಿನ 
ಆದಿಯಾಗಿಯೇ ಇರುತ್ತದೆ. 

*****************************************

ಕನಸು ಕಾಣುವುದ 
ಕಲಿಯಬೇಕೆ,,,,,,,,,
ಮಗುವನ್ನೋ ,,,,, ಅಥವಾ ಪ್ರೇಮಿಯನ್ನೊ ,,,,,,
ಬಿಡದೆ ಹಿಂಬಾಲಿಸಿ 

-ಜೀ ಕೇ ನ 
 

Comments

Submitted by kavinagaraj Tue, 03/31/2015 - 08:57

ಕುಟುಕುವ ಚುಟುಕುಗಳು ಚೆನ್ನಾಗಿವೆ.
ಹೀಗೂ ಒಮ್ಮೆ ನೋಡಿ: ಕತ್ತಲೆ ಎಂದರೆ ಅತ್ಯಂತ ಅತ್ಯಂತ ಕಡಿಮೆ ಬೆಳಕು! ಬೆಳಕು ಎಂದರೆ ಅತ್ಯಂತ ಅತ್ಯಂತ ಕಡಿಮೆ ಕತ್ತಲೆ!!