ನಾಚಿಕೆ ಇಲ್ಲದ ಸಾಲುಗಳು - 7
ಮಗುವೊಂದು
ನಕ್ಷತ್ರಗಳನು ಎಣಿಸಬಲ್ಲದು, ಗುಣಿಸಬಲ್ಲದು,
ಆದರೆ
ಅದರ ಲೆಕ್ಕವನ್ನು ನಾವೇ ಅರ್ಥಿಸಿಕೊಳ್ಳಲಾರೆವು,
***************************************************
ನೇರವಾಗಿ ಯಾವ ಹೆದ್ದಾರಿಯೂ
ಗುರಿಸೇರಲಾರದು,
ತಿರುವೊಂದು ಇರಲೇ ಬೇಕು,,,
ಬದುಕಿಗೆ ಕೂಡ
***************************************************
ರೈತನೊಬ್ಬನ ನೇಗಿಲ ತೂಕವನು
ಹತ್ತು ಇಂಜಿನಿಯರುಗಳು ಒಟ್ಟಾಗಿ ಸೇರಿದರೂ
ಎತ್ತಲಾರರು ಎಂಬುದು ಇತ್ತೀಚಿಗೆ ಬಂದ ಸುದ್ದಿ,
***************************************************
ಅವ್ವನ ಮಡಿಲಿನ ಪರಿಮಳವನ್ನು
ಪ್ರತೀ ಗಂಡೂ,
ಒಂದಿಲ್ಲೊಂದು ಹೆಣ್ಣಿನಲಿ ಹುಡುಕುತ್ತಲೇ ಇರುತ್ತಾನೆ,
***************************************************
ಬೆಳಕಿನ ಕಿರಣಗಳನು,
ಅಭ್ಯಾಸ ಮಾಡಲು ಹೊರಟ ವಿಜ್ಞಾನಿಗೆ
ಕೊನೆಗೆ ಸಿಕ್ಕಿದ್ದು,
ಅರ್ಥಮಾಡಿಕೊಳ್ಳಲಾಗದ ಹೆಣ್ಣಿನ ಮನಸ್ಸು.
***************************************************
ಪ್ರಾಮುಖ್ಯತೆ ಕೊಡುವ ಮೊದಲು
ಚಂದನವೂ, ಬರಿಯ ಮರವಷ್ಟೇ,
ಸಂಬಂದಗಳೂ ಹಾಗೆ,
***************************************************
ಬಿಸಿಲ ಪ್ರಖರದಲ್ಲಿಯೇ
ನೆರಳ ತಂಪಿಗೆ ಬೆಲೆ ಬರುವುದು,
***************************************************
ದೇವರು ಇಲ್ಲ,,,,,,,,,, ದೇವರು ಇದ್ದಾನೆ,,,,,,,,
ಎಂದು ವಾದಿಸುತ್ತಲೇ,,,,,,,,,,
ಇಬ್ಬರೂ ಮುದುಕರಾಗಿದ್ದಾರೆ,
ಈಗ ಗೆಳೆಯರಾಗಿದ್ದಾರೆ
-ಜೀ ಕೇ ನ
Comments
ಉ: ನಾಚಿಕೆ ಇಲ್ಲದ ಸಾಲುಗಳು - 7
ನೀವು ಹೇಳಿದ 7 ಸಾಲಗಳು ಸತ್ಯ ಸರ್.ಮನುಷ್ಯನಿಗೆ ಈ ಭೂಮಿ ಮೇಲೆ ಅಥ೯ ಆಗದೆ ಇರುವುದೆಂದರೆ ಹೆಣ್ಣಿನ ಮನಸ್ಸು ಸರ್.ಸಂಬಂಧಗಳು ಪ್ರಾಮುಖ್ಯತೆ ಮೇಲೆ ನಿಂತಿವೆ.
In reply to ಉ: ನಾಚಿಕೆ ಇಲ್ಲದ ಸಾಲುಗಳು - 7 by Nagaraj Bhadra
ಉ: ನಾಚಿಕೆ ಇಲ್ಲದ ಸಾಲುಗಳು - 7
ಪ್ರತಿಕಿಯೆಗೆ ಧನ್ಯವಾದಗಳು ಸರ್
ಉ: ನಾಚಿಕೆ ಇಲ್ಲದ ಸಾಲುಗಳು - 7
ನಿಮ್ಮ ಎಲ್ಲ ಸಾಲುಗಳೂ ಚೆನ್ನಾಗಿವೆ. ಯಾರಿಗಾದ್ರೂ ಹಾಗೆಯೇ ಒಂದು ವಸ್ತುವನ್ನು ಕಳೆದುಕೊಂಡಾಗಲೇ ಅದರ ಪ್ರಾಮುಖ್ಯತೆ ತಿಳಿಯುವುದು.
In reply to ಉ: ನಾಚಿಕೆ ಇಲ್ಲದ ಸಾಲುಗಳು - 7 by ravindra n angadi
ಉ: ನಾಚಿಕೆ ಇಲ್ಲದ ಸಾಲುಗಳು - 7
ಪ್ರತಿಕಿಯೆಗೆ ಧನ್ಯವಾದಗಳು ಸರ್
ಉ: ನಾಚಿಕೆ ಇಲ್ಲದ ಸಾಲುಗಳು - 7
ಶೀರ್ಷಿಕೆಗೆ ತಕ್ಕ ಸಾಲುಗಳು!
In reply to ಉ: ನಾಚಿಕೆ ಇಲ್ಲದ ಸಾಲುಗಳು - 7 by kavinagaraj
ಉ: ನಾಚಿಕೆ ಇಲ್ಲದ ಸಾಲುಗಳು - 7
ಧನ್ಯವಾದಗಳು ಕವಿಗಳೇ