ನಾಟಕ ಅಕಾಡೆಮಿ ಪ್ರಶಸ್ತಿಗಳು

ನಾಟಕ ಅಕಾಡೆಮಿ ಪ್ರಶಸ್ತಿಗಳು

ಬರಹ

ಬೆಂಗಳೂರು (ಏಜೆನ್ಸಿ), ಸೋಮವಾರ, 9 ಜುಲೈ 2007 ( 16:59 IST )

ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗಳು ಪ್ರಕಟಗೊಂಡಿವೆ. ಸುವರ್ಣ ಕರ್ನಾಟಕದ ಅಂಗವಾಗಿ, ಅಮೇರಿಕಾದ ಶ್ರೀ ವಲ್ಲೀಶ ಶಾಸ್ತ್ರಿ ಮತ್ತು ಪ್ರೊ.ಶ್ರೀಕಂಠಯ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೊರನಾಡ ಕನ್ನಡಿಗರಲ್ಲಿ ಹೈದರಾಬಾದ್‌ನ, ಶ್ರೀ. ಪವನ್ ಕುಮಾರ ಮಾನ್ವಿ, ಕೋಲ್ಕತ್ತಾದ ಶ್ರೀ. ಕೆ.ಜಿ.ಕುಮಾರ್, ಮುಂಬಯಿಯ ಮೈಸೂರು ಅಸೋಸಿಯೇಶನ್ ನ, ಶ್ರೀ. ಕೆ. ಮಂಜುನಾಥಯ್ಯ, ಕರ್ನಾಟಕ ಸಂಘದ ಪದಾಧಿಕಾರಿ, ಶ್ರೀ. ಓಂದಾಸ್ ಕಣ್ಣಂಗಾರ್, ದೆಹಲಿಯ, ಶ್ರೀ. ಕೃಷ್ಣ ಭಟ್, ಅಸ್ಸಾಂನ, ಶ್ರೀಮತಿ. ಭಾಗೀರಥೀ ಬಾಯಿ, ಕಾಸರಗೋಡಿನ ಶ್ರೀ. ಕೃಷ್ಣಮೂರ್ತಿ ಭಾಗವತರ್ ಪ್ರಶಸ್ತಿ ಪಡೆದಿದ್ದಾರೆ. ಶ್ರೀ. ಕೆ. ಮಂಜುನಾಥಯ್ಯನವರು, ಉತ್ತಮ ನಟರು, ರಂಗನಾಟಕದ ದಿಗ್ದರ್ಶಕರು, ಒಳ್ಳೆಯ ವಾಗ್ಮಿಗಳು, ಮತ್ತು ಸಂಘಟಕರು. ಮೈಸೂರು ಅಸೋಸಿಯೇಷನ್ ನ ಕಟ್ಟಡದ ವಿಸ್ತಾರಕ್ಕಾಗಿ ನಡೆಸಿದ" ಬೆನಿಫಿಟ್ ಶೋ," ಕಾರ್ಯಕ್ರಮವನ್ನು ಏರ್ಪಡಿಸಿ, ಹಣಸಂಗ್ರಹಣೆಯಲ್ಲಿ ಪ್ರಮುಖಮುಂದಾಳತ್ವವನ್ನು ವಹಿಸಿದ್ದರು. ನೆಹರೂ ಸೆಂಟರ್ ನಲ್ಲಿ ಪಂ. ಜಸ್ರಾಜ್ ರವರ ಹಾಡುಗಾರಿಕೆಯನ್ನು ಕೆಲವು ತಿಂಗಳ ಹಿಂದೆ, ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಅವರೂ ಮತ್ತು ಅವರ ಸಂಗಡಿಗರಾದ, ಡಾ. ಮಂಜುನಾಥ್, ಶ್ರೀ. ದೊರೈಸ್ವಾಮಿಗಳೂ ಸೇರಿದಂತೆ ಎಲ್ಲ, ಮೈಸೂರ್ ಅಸೋಸಿಯೇಷನ್ ನ ಪದಾಧಿಕಾರಿಗಳೂ ಮತ್ತು ಸದಸ್ಯರು, ಮುಕ್ತ-ಮನಸ್ಸಿನಿಂದ ಹಣದ ಸಹಾಯಮಾಡಿದ್ದರು.

ಈ ಬಾರಿಯ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ಮಂಗಳೂರಿನ ಹೆಸರಾಂತ ಹನಿಗವಿ, ಶ್ರೀ. ದುಂಡಿರಾಜ್ ಅವರಿಗೆ ಲಭಿಸಿದೆ. ಕೆ.ಹಿರಣ್ಣಯ್ಯ ಪುರಸ್ಕಾರವನ್ನು ಬೆಂಗಳೂರಿನ ಪ್ರಭಾತ್ ಕಲಾವಿದರು ಪಡೆದಿದ್ದಾರೆ.

2006-07ನೇ ಸಾಲಿನ ಸಿಜಿಕೆ ಯುವರಂಗ ಪುರಸ್ಕಾರವನ್ನು ಬೆಂಗಳೂರಿನ, ಶ್ರೀ. ರಾಮಕೃಷ್ಣ ಬೆಳ್ತೂರ್, ಮೈಸೂರಿನ, ಶ್ರೀ. ರಾಜೇಶ ತಲಕಾಡು ಪಡೆದಿದ್ದಾರೆ. ಒಟ್ಟಾರೆ ಈ ಬಾರಿ 101 ಮಂದಿ ಪ್ರಶಸ್ತಿ ಪಡೆದಿದ್ದಾರೆ.

ವೆಬ್ ದುನಿಯ ಕೃಪೆ :

(ಮೂಲ - ವೆಬ್‌ದುನಿಯಾ