ನಾಟ್ಯ ಶಾಮಲೆ

ನಾಟ್ಯ ಶಾಮಲೆ

ಕವನ

ಕಲಾ ದೇಗುಲ ಚೆಂದದ ಶೈಲಿಯ

ಕಲೆಯು ಅರಳಿದ ಹೂಬನ

ಶಿಲಾ ಬಾಲಿಕೆ ರೂಪ ಛಾಪವು

ನಯನ ಸೆಳೆದಿದೆ ನರ್ತನ||

 

ಬೆಳ್ಳಿ ನೂಪುರ ಬಿಗಿದು ಪಾದದಿ

ನವಿಲ ಹಾಗೆಯೆ ಕುಣಿದಳು

ಮಳ್ಳಿ ಮನಸನು ಚಣದಿ ಕದ್ದಳು

ಹೃದಯ ವೀಣೆಯ ಮಿಡಿದಳು||

 

ಕಂಠಾಭರಣ ಟೊಂಕಾಭರಣ

ಕಟ್ಟಿ ಹರುಷದಿ ನಲಿದಿಹಳು

ನೃತ್ಯ ಭಂಗಿಯು ನಾಟ್ಯ ಆಡಿದೆ

ಮೋಹ ಗೊಳಿಸಿದೆ ಕಂಗಳಲಿ||

 

ನೀಲಿ ವಸ್ತ್ರವ ಧರಿಸಿ ಶಾಮಲೆ

ಗೆಜ್ಜೆ ಸದ್ದನು ಮಾಡಿದಳು

ಗಿಳಿಯು ಕೋಗಿಲೆ ಮಧುರ ದನಿಯಲಿ

ಹರ್ಷದಿಂದಲಿ ಹಾಡಿದವು||

 

ನಾಟ್ಯ ಪ್ರವೀಣೆ ನಾಟ್ಯ ಶಾಂತಲೆ

ನಲಿದು ಕುಣಿದಿಹ ಸವಿನೆನಪು.

ಭಾವ ಗೂಡಲಿ ಭಾವ ಸಾಗರ

ಅಲೆಯು ತಂದವು ಸವಿನೆನಪು ||

 

ಕೆಂಪು ವರ್ಣದ ಚಿತ್ರ ಬಳಿದಿಹ

ಪಾದ ಕೋಮಲ ಸ್ಪರ್ಶದಲಿ.

ಕಲಾ ದೇಗುಲ ತಾಣ ಆಯಿತು

ಅಮರ ಚರಿತೆಯ ಪುಟದಲ್ಲಿ.||

 

-*ಶ್ರೀ ಈರಪ್ಪ ಬಿಜಲಿ* 

 

ಚಿತ್ರ್