ನಾಡಗುಡಿ

ನಾಡಗುಡಿ

ಬರಹ

ನಾಡಗುಡಿ

ನಾಡಸೇವೆ ಮಾಡುವವರೆ,
ನಾಡಿಗಾಗಿ ಮಡಿಯುವವರೆ,
ಬೇಡರಿಂದ ಕಾಡನುಳಿಸಿ,
ಬೆವರಸುರಿಸಿ ಗಿಡವ ಬೆಳೆಸಿ,
ಕೇಡಿಗಳಿಗೆ ಬೇಡಿ ತೊಡಿಸಿ,
ಕಾಡಿಬೇಡೊ ರೌಡಿಗಳನು
ಸೆದೆಬಡಿದು ನೀರಕುಡಿಸಿ,
ಹೇಡಿತನವ ಹೊಡೆದೋಡಿಸಿ,
ನಾಡಿಗಾಗಿ ದುಡಿಯಬೇಕು.
ನಾಡನುಡಿಯ ಹಾಡುಮಾಡಿ,
ನಾಡಗೀತೆ ಹಾಡಬೇಕು.
ನಾಡಗುಡಿಯ ಭಕ್ತರಾಗಿ,
ನಡಿಗಾಗಿ ನಾಡಿನಲ್ಲೆ
ಮಡಿಯಬೇಕು.

ಅಹೋರಾತ್ರ.