ನಾಡು ಬೆಳಗಲಿ...

ನಾಡು ಬೆಳಗಲಿ...

ಕವನ

ನಾಡ ಜನರೊಳು ಪ್ರಜ್ಞೆ ಹುಟ್ಟಲು

ಯೋಧ ರೀತಿಯೆ ಮುಂದೆ ಸಾಗಲು

ಮತವ ಹಾಕುವೆನೆನುತ ನಡೆಯಲು

ಪ್ರಜಾಪ್ರಭುತ್ವವನು ಉಳಿಸಲು

 

ಜನರ ಕನಸನು ನನಸು ಮಾಡುವ

ಕೆಲಸ ಮಾಡುವ ದಣಿಯ ನೋಡುವ

ಮನದಿ ಮಾತನು ಕೇಳಿ ಬೆರೆಯುವ

ಛಲದ ನಾಯಕನನ್ನು ಗೆಲಿಸುವ

 

ನೆಲವ ಸಲಹುವ ಧೀರ ಬರಲವ

ನಾಡ ತೊಳೆವರ ಮನೆಗೆ ಕಳಿಸುವ

ಒಳಿತು ಸಿಗುತಲೆ ಮನೆಯ ಸೇರುವ

ಸೇವೆ ಗೈಯುತ ನಾಡ ಬೆಳಗುವ

***

ಗಝಲ್

ಮಣ್ಣನ್ನು ಹೊರುವ ಹೊತ್ತು ನಮ್ಮ ಸಲಹುವವಳೂ ಅಮ್ಮಾ

ಒಡಲೊಳಗೆ ಸವಿಯ ಪ್ರೀತಿಯನು ಕೊಡುವವಳೂ ಅಮ್ಮಾ

 

ಮತ್ತದುವೆ ತುಂಟತನಾದರೆ ಕರೆಸಿ ತಿದ್ದುವವಳೂ ಅಮ್ಮಾ

ಮಡಿಲಲ್ಲಿ ಕಾಪಿಡುತ ತುತ್ತನ್ನು ಉಣಿಸುವವಳೂ ಅಮ್ಮಾ

 

ನಡೆ ನುಡಿಯ ಗುಣವಿರಲು ಕರೆದು ಮುದ್ದಿಸುವವಳೂ ಅಮ್ಮಾ

ನಮ್ಮೊಳಗೆ ಹೊಂಗನಸಿನ ಬೀಜವನು ಬಿತ್ತುವವಳೂ ಅಮ್ಮಾ

 

ಕ್ಷಾತ್ರ ನಡೆಯನು ಕಲಿಸುತ್ತಾ ತಲೆಯೆತ್ತಿ ನಡೆಸುವವಳೂ ಅಮ್ಮಾ

ಬದುಕಿನೊಳಗಿನ ಸುವಿಚಾರ ಸಂಪತ್ತು ತಿಳಿಸುವವಳೂ ಅಮ್ಮಾ

 

ಸತೀಶನ ಜೀವನದೊಡಲಿನ ಕರೆಗೋಡಿ ಬರುವವಳೂ ಅಮ್ಮಾ

ಮಕ್ಕಳ ಏಳಿಗೆಯ ಒಲುಮೆಗೆ ಸಂತೋಷಿಸುವವಳೂ ಅಮ್ಮಾ

 

ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್