ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

Comments

ಬರಹ

ನಮ್ಮ ನಾಡ ಭಾಷೆಯ ಮೇಲೆ ಅಭಿಮಾನ ಖಂಡಿತ ನಮಗಿರಬೇಕು ಒಪ್ಪುತ್ತೇನೆ, ಆದರೆ ಕೆಲಮಟ್ಟಿಗೆ practical ಆಗಿಯೂ ಇರುವುದು ತುಂಬಾ practical ((ಕ್ಷಮಿಸಿ, practicalನ ಕನ್ನಡ ಪದವೇನು?).

ಉದಾಹರಣೆಗೆ ನಡೆದ ಕತೆಯೊಂದನ್ನು ಹೇಳುತ್ತೇನೆ.

ನಮ್ಮ ಮನೆಮಾತು ಕನ್ನಡವಲ್ಲ, ಹಿಂದಿಜಾತಿಯ ಒಂದು ಉಪಭಾಷೆ.

RSS ನಲ್ಲಿ ಒಂದು ಕಾಲದಲ್ಲಿದ್ದ ನನ್ನ ಸೋದರಮಾವ ಕಟ್ಟಾ ಕನ್ನಡ ಹಾಗೂ ಹಿಂದಿ ಅಭಿಮಾನಿ. ತಮ್ಮ ದಸ್ಕತ್ತನ್ನು ಕೂಡಾ ಹಿಂದಿಯಲ್ಲಿ ಮಾಡುವವರು. ತಮ್ಮ ನಾಲ್ಕೂ ಮಕ್ಕಳನ್ನು ಹಟ ಹಿಡಿದು ಕನ್ನಡಶಾಲೆಗೇ ಕಳಿಸಿ, ಅವರ ಭವಿಷ್ಯದ ಜೊತೆ ಆಟ ಆಡಿದವರು.

ನಮ್ಮ ಮನೆಮಾತಿನಲ್ಲಿ English, ಕನ್ನಡದ ಅನೇಕ ಶಬ್ದಗಳನ್ನು ಉಪಯೋಗಿಸುತ್ತೇವೆ, ನಮ್ಮದೇ ಭಾಷೆಯ ಶಬ್ದಗಳಿದ್ದರೂ ಕೂಡಾ. ಉದಾ: ಎಡ, ಬಲ ಅಥವಾ left, right ಎನ್ನುವುದೇ ರೂಢಿ ಹೊರತು ನಮ್ಮ ಮನೆಮಾತಿನ ಶಬ್ದಗಳಲ್ಲ.

ಒಮ್ಮೆ ಅವರನ್ನೆಲ್ಲೋ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿರಲು ಅವರು backseat driving ಮಾಡುತ್ತ directions ಕೊಡಲು ಶುರು ಮಾಡಿದರು. ನನಗೆ ದಾರಿ ಸರಿಯಾಗಿ ಗೊತ್ತಿರಲಿಲ್ಲ.

ಪುಣ್ಯಾತ್ಮರು ಎಡ ಬಲ ವೆಂದು ಕನ್ನಡದಲ್ಲಾಗಲಿ, left, right ಎಂದು ಇಂಗ್ಲೀಷಲ್ಲಾಗಲಿ ಹೇಳದೇ, दांये, बांये ಎಂದು ನಮ್ಮ ಮನೆಮಾತಿನಲ್ಲಿ ಹೇಳಿ ನನಗೆ ಗೊಂದಲವಾಗಿ ತಪ್ಪು ತಪ್ಪು ತಿರುಗಿ ಎಲ್ಲೋ ಗುದ್ದಿಬಿಟ್ಟೆ.

ನೀತಿ: ಅಭಿಮಾನ ಇರಬೇಕು, ಆದರೆ ದುರಭಿಮಾನ ಇದ್ದರೆ ಅದು ಅಪಘಾತ, ಅನ್ - ಅರ್ಥ, ಅಪಾರ್ಥಗಳಿಗೆ ಕಾರಣವಾಗುತ್ತದೆ.

communication skills ನ ಮೊದಲ ಪಾಠವೆಂದರೆ: ಕೇಳುಗರಿಗೆ ಸಂದೇಶವನ್ನು (message) ಅವರಿಗೆ ಅರ್ಥವಾಗುವ ಹಾಗೆ ಬಳಕೆಯಲ್ಲಿರುವ ಶಬ್ದಗಳನ್ನೇ ಉಪಯೋಗಿಸಿ ಹೇಳುವುದು. ನಾವು ಹೇಳಿದ್ದು ನಮ್ಮ target audience ಗೆ ಅರ್ಥವಾಗದಿದ್ದರೆ ನಾವು ಹೇಳಿದ್ದೆಲ್ಲ ವ್ಯರ್ಥ. ಏನೂ ಪ್ರಯೋಜನವಿಲ್ಲ.

ಆಂಡಯ್ಯನ ಅಚ್ಹ ಕನ್ನಡದ "ಕಬ್ಬಿಗರ ಕಾವ" "ಸುದ್ದ" ಕನ್ನಡದ ಮೊದಲನೇಯ ಹಾಗೂ ಕೊನೆಯ (?) ಬರಹ.

ಅದನ್ನು ಎಷ್ಟು ಮಂದಿ ಕನ್ನಡಪ್ರೇಮಿಗಳು ಅರ್ಥ ಮಾಡಿಕೊಳ್ಳಬಲ್ಲರು?

ಎಷ್ಟು ಮಂದಿ ನಿಜವಾಗಿಯೂ ಓದಿ ಖುಷಿ ಪಟ್ಟಿದ್ದಾರೆ?

ನಮ್ಮ ರಾಷ್ಟ್ರಕವಿಗಳ ಬರಹಗಳಲ್ಲಿ ಬರುವ ಪದಗಳನ್ನೆಲ್ಲ ಎಣಿಸಿದರೆ, ಅವುಗಳಲ್ಲಿ ಅಚ್ಚಕನ್ನಡಪದಗಳೆಷ್ಟು, ಸಂಸ್ಕ್ರತಪದಗಳೆಷ್ಟು?
ರಾಷ್ಟ್ರಕವಿ ಎಂದೇ ಏಕನ್ನಬೇಕು, ನಾಡಕಬ್ಬಿಗ ಎಂದು ಏಕನ್ನುತ್ತಿಲ್ಲ?

ಮಾನ್ಯ GC (ಗಿರೀಶ ಚಂದ್ರ?) ರು ಈ ಪುಟಗಳಲ್ಲಿ ಇಂದು ಹೇಳಿದ ಹಾಗೆ ಭಾಷೆಯೊಂದು ಸಮೃದ್ಧವಾಗಿ ಬೆಳೆಯುವುದು ಅದು ಬೇರೆ ಭಾಷೆಗಳಿಂದ ಶಬ್ದಗಳನ್ನು ಎಗ್ಗಿಲ್ಲದೇ ಎತ್ತಿಕೊಳ್ಳುವುದರಿಂದ ಹಾಗೂ ಆ ಭಾಷೆಯನ್ನಾಡುವವರ ಅಪಾರವಾದ ಚಟುವಟಿಕೆ, ಅನುಭವ (wealth of different activities) ಗಳಿಂದ. ಉದಾಹರಣೆಗಾಗಿ: ಒಂದು ಪ್ರದೇಶದ ಜನರೆಲ್ಲರ ಉದ್ಯೋಗ, leisure ಗಳೆಲ್ಲವೂ ಯಾವುದಾದರೂ ಒಂದೇ ಚಟುವಟಿಕೆ (ಉದಾ: ಕೃಷಿ ಎಂದುಕೊಳ್ಳೋಣ) ಗೆ ಸೀಮಿತವಾಗಿದ್ದರೆ, ಅವರ ಭಾಷೆಯಲ್ಲಿ ಕೃಷಿಸಂಬಂಧ ಬಿಟ್ಟು ಬೇರೆ ಪದಗಳು ಸಿಗುವುದು ಕಷ್ಟ. GCಯವರೆಂದಂತೆ Englishನ ಅದ್ಭುತ ಬೆಳವಣಿಗೆ ಇದಕ್ಕೆ ಒಳ್ಳೆಯ ಉದಾಹರಣೆ.
<>

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet