ನಾನಾದೆನಾ ಏಕಾಂಗಿ ???!!!!!!

ನಾನಾದೆನಾ ಏಕಾಂಗಿ ???!!!!!!

ಕವನ

 ದೂರಾಗಿಹಳು ನನ್ನಾಕೆ 

         ಮನದಿ ಪ್ರೇಮ ಸೌಧವ ಕಟ್ಟಿ..

ನಾನಾದೆನೀಗ ಏಕಾಂಗಿ

         ಕನಸಿನ ಸೌಧದ ಬಾಗಿಲನು ಮುಚ್ಹಿ.....!!!

 

ಒಬ್ಬಂಟಿ ನಾನಾದರೂ ಅವಳದೇ  ಗುಂಗು..

        ನೆನಪಿನಂಗಳದಿ ಅವಳಾಡಿದ ಪ್ರೀತಿಯ ರಂಗು

ಕಾಡಿಹುದು ಕಂಣ್ಮುಂದೆ ಮಿಂಚಿನಾ ನಗು

       ಪ್ರತಿನಿಮಿಷ ಹೃದಯದಲಿ ಅವಳಹೆಸರಿನ  ಕೂಗು..!!!!

 

ಬಾರಿಬಾರಿ ಅವಳನ್ನೇ ಕಾಡಿದ್ದೆ  ಅಂದು

       ಒದ್ದಾಡುತ್ತಿರುವೆ ಅವಳ ನೆನಪಲಿ ಇಂದು

ಪ್ರೀತಿಯ ಮಾಯೆಗೆ ನಾನೀಗ ನೊಂದು

      ಎಷ್ಟೇ ತಡೆದರೂ ನಿಲ್ಲದಾ ಕಣ್ಣೀರ ಬಿಂದು

 

ಮರಳುವಳೇ ನನ್ನಾಕೆ ನನ್ನ ಬಳಿ ?

      ಅವಳಿಲ್ಲದೇ ಶೂನ್ಯ ನನ್ನೀ ಬಾಳು 

ದೇವರೇ ದಯಮಾಡಿ ಅವಳಿಗೆ ತಿಳಿಹೇಳು

     ಬಾಳಿಸುವೆ ಅವಳನ್ನೇ , ನೀಡದೆ  ಅರೆಕ್ಷಣವೂ ಗೋಳು....!!! 

Comments