ನಾನು ಎನ್ನುವುದು...

ನಾನು ಎನ್ನುವುದು...

ಕವನ

ನಾನು ಎನ್ನುವುದು

ಹೀಗೆಯೇ ಎಂದಿಗೂ

ಎನ್ನಲಾಗದು !

ನಾನು ನಾನಾಗಿಯೇ

ಇರುವೆ

ಅನ್ನುವುದೂ ಹೀಗೆಯೇ

ಎಂದಿಗೂ

ಎನ್ನಲಾಗದು !!

 

ಬದಲಾವಣೆ ಬುದ್ದಿವಂತ

ಇರುವಲ್ಲಿ ಆಗುವುದಿಲ್ಲ

ನಿಜ !

ಅತೀ ಬುದ್ದಿವಂತ ಇರುವಲ್ಲಿ

ಬದಲಾಗದೆ

ಇರುವುದೂ ಇಲ್ಲ ; ಇಲ್ಲದಂತೆ

ಸಾಮಾನ್ಯ ಜನ

ಬದುಕುವರೂ ಎಲ್ಲ , ಜಗತ್ತೆ

ಸಂಭ್ರಮಿಸಿದಂತೆ!!

 

ನ್ಯಾಯ ಹೇಳುವವರ

ಬಾಯಿಗಿಂದು

ಬೀಗ ಬಿದ್ದಿದೆ ನೋಡಿ ?

ನಾನೇ ಇರುವೆನಲ್ಲ....?!

ಎಲ್ಲವನ್ನೂ ಕಳೆದುಕೊಂಡು

ಮೂಲೆ ಕಂಬವ ಹಿಡಿದು

ಕುಳಿತಿಲ್ಲವೆ ???!

ಪ್ರಜಾಪ್ರಭುತ್ವದ ಯಾವೊಬ್ಬನೂ 

ನಮ್ಮ ಗಮನಿಸಲೇ ಇಲ್ಲ; 

ಸಹಾಯದ

ಮಾತಂತೂ ದೂರವೇ

ಉಳಿಯಿತು , ಹಕ್ಕಿಯಂತೆ

ಆಗಸಕ್ಕೆ ಹಾರಿ ಹೋಯಿತು !!

 

ನೋವುಗಳು ಮಡುಗಟ್ಟಿದ

ಸಮಯ ಯಾರೂ ಯಾರನ್ನೂ

ನೋಯಿಸದಿರಿ

ಬಿಟ್ಟು ಬಿಡಿ ಅವರಷ್ಟಕ್ಕೆ

ಅವರಿರಲಿ !

ಏನೋ ಒಂದು ಧ್ಯಾನವೋ

ಚಿಂತೆಯೋ, ಚಿಂತನೆಯೋ

ಮಾಡಿಕೊಂಡಿರಲಿ ಬಿಡಿ

ಹಾಗೆಯೇ ಇರಲಿ

ಬಿಡಿ ಬಿಡಿ ; ಅಂತವರ ಬಗ್ಗೆ

ಯೋಚಿಸುವುದನ್ನೇ ಬಿಡಿ!

ಯಾಕೆಂದರೆ ? 

ಬದುಕೆಂದರೆ ,ಅದು

ಮೂರು ದಿನದ ಸಂತೆ

ಗೌಜಿ ಗದ್ದಲದ ನಡುವೆ

ಪಯಣ

ಮುಂದೆ ಇದ್ದೇ ಇದೆ

ಮಸಣ ಸೇರಿದರೆ

ಗೋರಿ !!

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್