ನಾನು-ಜಿಲೇಬಿ-ಓಯಾಸಿಸು-ಗಣಪ.

ನಾನು-ಜಿಲೇಬಿ-ಓಯಾಸಿಸು-ಗಣಪ.

ಕವನ

Jobಇಲ್ಲದ ಜೇಬಿನಲ್ಲಿ, ಜಿಲೇಬಿ ಇಟ್ಟ

Desertನಲ್ಲಿ ನನ್ನ ಬಿಟ್ಟ, ಗಣಪ  

                                                          

ನಾ ಕೊಟ್ಟಿದ್ದೆ ಮಾತು, ಶಪಥದ ಮಾತು

ಓಯಾಸಿಸ ಹುಡುಕುತ್ತೇನೆ, ಜಿಲೇಬಿ ಮುಕ್ಕುತ್ತೇನೆ.

ನೆತ್ತಿಮೇಲೆ ಸೂರ್ಯನ ಕತ್ತಿ

ಬಾಯಿ ನೀರೂರಿತ್ತು, ಜಿಲೇಬಿ ಕಣ್ಣು ಮಿಟಕಿಸಿತ್ತು, ಆಸೆ ಹುಟ್ಟಿಸಿತ್ತು,

ಮುಟ್ಟಲೇ ಬೆಕಿತ್ತು ಗುರಿ,ಉಳಿಸ ಬೇಕಿತ್ತು ಶಪಥ

ಮಾಡಿದ ತಪ್ಪುಗಳ ನೆನೆಯುತ್ತ, ನನ್ನ ಆಲಸ್ಯವ ಶಪಿಸುತ್ತ

ನಡೆದಿದ್ದೆ ನಿರಂತರ...

ಬಿಟ್ಟು ಹೊದವರ ನೆನೆಯುತ್ತ, ಬಿಡದವರ ಪ್ರೀತಿಸುತ್ತ

ನಾ ಹೊರಟಿದ್ದೆ, ಬದಲಾಗುತ್ತ.

ಓಯಾಸಿಸ ಮುಟ್ಟುವೆನೊ ಇಲ್ಲ ಮಧ್ಯ ಮಡಿವೆನೋ

ಹೆದರುತ್ತ, ಬೆದರುತ್ತ,ಸಾಗಿತ್ತು ಪಯಣ  ಧರ್ಯ ಪಡೆಯುತ್ತ.

ಬಂದಿದ್ದೆ ದೂರ, ಕಣ್ಣು ಮಂಜಾಗಿತ್ತು, ಕಾಲು ಸೋತಿತ್ತು

ದೂರದಲ್ಲಿ ಕಂಡಿತ್ತು, ಸ್ಫಟಿಕದ ಕಾಂತಿ

ಓಡಿದೆ, ಓಡಿದೆ, ಜೀವ ಬಿಟ್ಟು ಓಡಿದೆ

ನಾ ನಿಂತಿದ್ದೆ ಓಯಾಸಿಸ ಮುಂದೆ

ಗೆದ್ದಿದ್ದೆ, ಗೆದ್ದಿದ್ದೆ ನಾನು ಮೊದಲಸಲ!!

ಮಿಂದಿದ್ದೆ ಗೆಲುವಿನ ಸಂಭ್ರಮದಲ್ಲಿ

ಬದಲಾಗಿದ್ದೆ, ಬದುಕ ಪಾಠ ಕಲಿತಿದ್ದೆ

ಗಣಪ ನಕ್ಕಿದ್ದ, ನನ್ನ ಹರಸಿದ್ದ.