ನಾನು ನಿನ್ನನ್ನ ತುಂಬಾ ಪ್ರೀತಿಸಿತ್ತೀನಿ..! ಐ ಲವ್ ಯು...?

ನಾನು ನಿನ್ನನ್ನ ತುಂಬಾ ಪ್ರೀತಿಸಿತ್ತೀನಿ..! ಐ ಲವ್ ಯು...?

ಸೂರ್ಯನ ಕಾಂತಿಯು ಶಾಂತಿಯಿಂದ ಕುಗ್ಗುತ್ತಿದ್ದಾಗ, ನೀಲಿಯ ಆಕಾಶದಲ್ಲಿ ತೇಲಾಡುವ ಬಿಳಿ ಮೋಡಗಳು ಮಿಂಚುತ್ತಿದ್ದಾಗ, ಮುಸ್ಸಂಜೆಯ ಹೊತ್ತುಗಾಗಿ ಕಾಲವನ್ನು ಒತ್ತೆಯಿಟ್ಟು ಎದುರುನೋಡುತ್ತಿದ್ದ ವಿಕ್ರಂ (ವಿಕ್ಕಿ), ನಗರದ ಹೊರವಲಯದ ಬೀದಿ ಅಂಚಿನಲ್ಲಿ ಮೂರನೇ ಮನೆಯ ಮೇಲೆ ವಿದ್ಯಾರ್ಥಿಗಳಿಗೆಂದೇ ನಿರ್ಮಿಸಿರುವ ರೂಮ್ನಲ್ಲಿ, ತನ್ನಲ್ಲಿ ತಾನೇ ಊಹಿಸಿಕೊಳ್ಳುತ್ತ ಕನ್ನಡಿಯ ಎದುರು ವಿವಿಧ ವಸ್ತ್ರಧಾರಿಯಾಗಿ ನೋಡುಕೊಳುತ್ತ, ಗುಂಗುರು ಕೂದಲಿನ ಹತ್ತಾರು ಕೇಶಾಲಂಕಾರ ಮಾಡಿಕೊಳ್ಳುತ್ತ, ಮಾತಾಡಿದ ಮಾತು ಮತ್ತೆ ಮತ್ತೆ ಮಾತಾಡಾತ, ಕನ್ನಡಿಯ ಪ್ರತಿಬಿಂಬದ ಛಾಯೆಯು ನಾಚುವಂತೆ ಪ್ರತಿನಿತ್ಯದ ಮುಖಛಾಯೆಯನ್ನು ಬದಲಿಸುತ್ತ, ನನಗಿಂತ ಇನ್ಯಾರು ಸೌಂದರ್ಯ ಪುರುಷನೆಂದು ಬೀಗುತ್ತಾ, ತನ್ನೊಂದಿಗಿನ ಸ್ನೇಹಿತನೊಬ್ಬನಿಗೆ.....

ಲೋ ಮೂರ್ತಿ, ಹೇಗೆ ಇದಿನೀ? ಚೆನ್ನಾಗಿ ಇದೀನಾ!....?

(ಕಣ್ಣುಬಿಟ್ಟುಕೊಂಡು ಮೂಲೆಯಲ್ಲಿ ಕುಳಿತ ಮೂರ್ತಿ ಬೆಚ್ಚರಗೊಂಡು, ಸಂಶಯದಿಂದ)

ಏನೋ ವಿಕ್ಕಿ, ನನ್ನನ್ನು ಏನಾದರು ಕೇಳಿದಿಯಾ…?  

ವಿಕ್ಕಿ: (ಏರುದ್ವನಿಯಲ್ಲಿ) ಹೌದೋ ಲೋ.. ಕೇಳಿಸಿಲ್ವ... (ಮೂರ್ತಿ ಹತ್ತಿರ ನಡೆದು ವಿನಯದಿಂದ) ನಾನು ಹೇಗೆ ಕಾಣತ್ತಿದ್ದೀನಿ? ಪ್ಯಾಂಟ್ ಗೆ ಶರ್ಟ್ ಮ್ಯಾಚ್ ಆಗ್ತಿದಿಯಾ? ಇನ್-ಶರ್ಟ್ ಮಾಡಬೇಕಾ? ಇಲ್ಲಾ… ಶರ್ಟ್ ಉದ್ದಕ್ಕೆ ಬಿಡಬೇಕಾ?

(ಎರಡು ಕೈಗಳು ಪ್ಯಾಂಟ್ ಜೇಬುನಲ್ಲಿ ಇಟ್ಟು ಮುಗಳ್ನಕ್ಕದ...)

ಮೂರ್ತಿ: ಯಾಕೆ ಇಂಗಾಡಿತ್ತಿದ್ದಿಯೋ ವಿಕ್ಕಿ, ನಿನಗೇನೋ… ಸೂಪರ್ ಆಗಿದಿಯಾ.... ರಾಜಕುಮಾರಾ!..

ವಿಕ್ಕಿ: (ಮುಖದಲ್ಲಿ ತುಸುನಗು) ನಾಚುತ್ತಾ ಹೌದೇನೋ?... ಹಾಗಾದರೆ Body Spray ನೂ ಮಾಡ್ತೀನಿ (ಕನ್ನಡಿಯ ಕಡೆಗೆ ನಡೆದು, ತನ್ನಲ್ಲಿನ ವಿವಿಧ ಬಗೆಯ ನಗುವನ್ನು ಕನ್ನಡಿಗೆ ಪರಿಚಯಿಸುತ್ತಾ, ಅಲ್ಲೇ ಇದ್ದ Adidas Body Spray ತಗೊಂಡು.... ಪುಸ್ಸ್.... ಪುಸ್ಸ್  ಅಂತ ಧರಿಸಿದ ಅಂಗಿಯ ಒಳಗೆ ಮತ್ತು ಹೊರಗೆ ಸಿಂಪಡಿಸಿ...) ಲೋ ಮೂರ್ತಿ ಸೆಂಟ್ ವಾಸನೆ ಬರುತ್ತಿದ್ದೀಯೊನೋ?  ಅಂತ ಮತ್ತೆ ಕೇಳಿದ.

ಮೂರ್ತಿ: (ಬೇಸರಗೊಂಡು) ಏಕೋ ವಿಕ್ಕಿ, ಚಿತ್ರ ವಿಚಿತ್ರವಾಗಿ ಆಡುತ್ತಿದ್ದೀಯಾ.... ಸೆಂಟ್ ಹಾಕಿದರೆ ಸೆಂಟ್ ವಾಸನೆ ಬರದಿರಾ! ಮತ್ತೇನಾದರೂ ಬರುತ್ತಾ...?

(ಅದ್ಯಾವ ಮಾತುಗಳು ತಲೆಗೆ ಹಾಕಿಕೊಳ್ಳದ ವಿಕ್ಕಿ, ತನ್ನದೇ ಲೋಕದಲ್ಲಿ ತೇಲಾಡುತ್ತಾ, ತುಂಬಾ ಚೆನ್ನಾಗಿ ಸುಂದರನಾಗಿ ಕಾಣಿಸಿಕೊಳ್ಳಲು ಗೊತ್ತಿರುವ ಎಲ್ಲಾ ಪ್ರಯತ್ನಗಳು ಮಾಡುತ್ತಿದ್ದ)

ವಿಕ್ಕಿಯನ್ನೇ ನೋಡಿ ಕುಳಿತಿದ್ದ ಮೂರ್ತಿ, ತಲೆ ಪರುಚುತ್ತಾ ಅಲೋಚನೆ ಮಾಡತೊಡಗಿದ. ಏನಾಗಿದೆ ಇವನಿಗೆ.....? ಯಾಕೆ ಇಂಗಾಡಿತ್ತಿದ್ದಾನೆ? ಏನಾಗಿರಬಹುದು?.. ಅಂತ ಹಲವಾರು ಪ್ರಶ್ನೆಗಳಿಗೆ ಉತ್ತರ ಕಾಣದೆ, ಅಲ್ಲೇ ಇದ್ದ ಇನ್ನೊಬ್ಬ ಸ್ನೇಹಿತನಿಗೆ ಕುತೂಹಲದಿಂದ ಕೇಳಿದ

ವಿನೋದ್, ನಿನಗೇನಾದರು ಗೋತ್ತೆನೋ? ಇವನು ಏಕೆ ಇಂಗಾಡಿತ್ತಿದ್ದಾನಾ ಅಂತ.

ವಿಷಯಗಳೆಲ್ಲ ತಿಳಿದಿದ್ದ ವಿನಯ್ ಯಾವುದೇ ಆಶ್ಚರ್ಯವಿಲ್ಲದೆ...

ಲೋ ಮೂರ್ತಿ, ಯಾವ ಲೋಕದಲ್ಲಿ ಇದ್ದಿಯೋ, ಯಾಕೋ..ನಿನಗೇನೂ ಗೊತ್ತಿಲ್ಲವಾ..!

ಮೂರ್ತಿ: (ಸಪ್ಪೆಯ ಮುಖ) ಪ್ಚ್..... ಇಲ್ಲ ಕಣೋ...!!!

ವಿನಯ್: ಈ ದಿನ ವ್ಯಾಲೆಂಟೆನ್ಸ್ ಡೇ…. ಅಂದರೆ ಪ್ರೇಮಿಗಳ ದಿನಾಚರಣೆ...

ಮೂರ್ತಿ: (ಉಸಿರುಬಿಟ್ಟು) ಹೋ ಅಷ್ಟೇನಾ! ಇದಕ್ಕೆ ಅಷ್ಟು ಆಡಿತ್ತಿದ್ದಾನೆ ಇವನು! ಪ್ರೇಮಿಗಳ ದಿನ ಆದರೆ ಇಗೆಲ್ಲಾ make -up ಮಾಡೊಕೋ ಬೇಕಾ.... ಯಾರು ಹೇಳಿದರು ಇವನಿಗೆ? ಹೊಸದಾಗಿ ಎಲ್ಲಾದರೂ ಓದಿ ಬಿಟ್ನ..... ಅಂತ !!

ವಿನೋದ್: ಇಲ್ಲಾ ಕಣೋ ತಿಮ್ಮ.... ವಿಕ್ಕಿ ಯಾವಾಗಲೂ ಮೊಬೈಲ್ ಲ್ಲಿ ಮಾತಾಡ್ತಾ ಇರುತ್ತಾನಲ್ಲ..... ಅವಳು......

ಮೂರ್ತಿ: (ಮಾತು ಮದ್ಯದಲ್ಲಿ) ಹೋ ಅವಳು ಗೊತ್ತು.....ನೀತು!! ನಮ್ಮೂರಿನ ರಾಜಕುಮಾರಿ, ನಮಗಿಂತ ಒಂದು ವರ್ಷ ಚಿಕ್ಕವಳು, ಸಂಶಯಗಳ ಹುತ್ತ, ದಿನಾ ಇವರಿಬ್ಬರು ಫೋನ್ನಲ್ಲಿ, ಕಾಲೇಜ್ನಲ್ಲಿ ಡೌಟ್ಸ್ clarify ಮಾಡಿಕೊಳ್ಳುತ್ತಿರುತ್ತಾರೆ......ಏನು ಈಗ?

ಸುಮ್ಮನಾಗಿದ್ದ ವಿನೋದ್: ಆಯ್ತು ಏನೋ ನೀನು ಹೇಳಿದ್ದು, ಮುಂದಕ್ಕೆ ನಾನು ಹೇಳಲಾ? ಇಲ್ಲ ನಿನಗೆಲ್ಲಾ ಗೊತ್ತಾ?

ಮೂರ್ತಿ: (ಕುತೂಹಲದಿಂದ) Sorry ಕಣೋ ಮುಂದಕ್ಕೆ ಹೇಳು.

ವಿನೋದ್: (ಮುಂದುವರಿಸುತ್ತಾ) ಈ ದಿನ ಬೆಳಗ್ಗೆ ಫೋನ್ ಮಾಡಿ ವಿಕ್ಕಿನ್ನು ಪಾರ್ಕ್ ಗೆ ಬರಬೇಕೆಂದು ಕೇಳಿದಳಂತೆ, ಅದಲ್ಲದೇ ಏನೋ ಮಾತಾಡಬೇಕಂತೆ!

(ಇವರಿಬ್ಬರ ಮಾತುಗಳು ಕೇಳಿಸಿಕೊಂಡ ವಿಕ್ಕಿಯ ಮುಖದಲ್ಲಿ ನಾಚಿಕೆಯಿಂದ ಮುಂದುವರೆದ ತುಸುನಗು)

ಮೂರ್ತಿ: ಹೋ ಅದಕ್ಕೆ! ಇಷ್ಟೆಲ್ಲಾ make-up ಆಗಬೇಕಾ!! ಅಲ್ಲಿಯೂ ಯಾವುದೋ ಕೆಲವು study-doubts ಇರುತ್ತೇ!!! ಇಷ್ಟು ದಿವಸ ಫೋನ್ನಲ್ಲಿ, ಕಾಲೇಜ್ ನಲ್ಲಿ clarify ಮಾಡಿದ್ದು ಸಾಕಾಗಿಲ್ಲವೇನೋ... ಹೋಗಲಿ ಬಿಡು.. ಆ ಸಂಶಯಗಳಿಂದಲೇ ಇವನು 3 ನೇ ಸೆಮಿಸ್ಟರ್ ನ ಹಿಂದೆ ಉಳಿದ subjects ಎಲ್ಲಾ ಪಾಸು ಮಾಡುಬಿಟ್ಟ, ಇನ್ನೊಂದು ಎರಡು subjects ಉಳಿದಿದೆಲ್ಲಾ 4 ನೇ ಸೆಮಿಸ್ಟರ್ ಲ್ಲಿ ಅದನ್ನೂ ಪಾಸು ಮಾಡು ಬಿಡ್ತಾನೆ.... ನನಗಿಂತ ಮುಂಚೆನೇ BE ಮುಗಿಸ್ತಾನೆ.

ವಿನೋದ್: (ನಿಧಾನವಾಗಿ) ಏನೋ ಮೂರ್ತಿ, ನಿನಗೆ ಗೊತ್ತಿರುವುದು ವಟವಟ ಅಂತ ಕಪ್ಪೆತರ ಬಡ್ಕೋತಿಯಾ, ಮುಂದಕ್ಕೆ ಏನು ಅಂತ ಹೇಳಲಾ? ಇಲ್ಲ ಸುಮ್ಮನಾಗಲಾ.

ಮೂರ್ತಿ: Sorry ಕಣೋ...... ಹೇಳೋ ಪ್ಲೀಸ್...

ವಿನೋದ್: ಲೋ ಮಂಗ, ಪಾರ್ಕ್ ಗೇ ಬರಕ್ಕೆ ಹೇಳಿರುವುದು ಡೌಟ್ಸ್ ಕೆಳಕ್ಕೆ ಹಾಗಿರಲ್ಲ ಕಣೋ.

ಮೂರ್ತಿ: (ಬಾಯಿ ತೆರೆದುಕೊಂಡು) ಮತ್ತೇ!.....ಇನ್ನು ಏನಕ್ಕಂತೆ....?

ವಿನೋದ್: ಅವರಿಬ್ಬರ ಪ್ರೇಮ ವಿಚಾರ ಹೇಳಿಕೊಳ್ಳಕ್ಕೆ ಏನೋ..?

ಮೂರ್ತಿ: (ಸಂಶಯವಿಲ್ಲದೆ) ಅವರೇನಕ್ಕೆ ಹೇಳಿಕೊಳ್ತಾರೆ ಪ್ರೇಮ ವಿಚಾರ... ಅವರೇನು ಪ್ರೇಮಿಗಳಾ!!

ವಿನೋದ್: ಹೋ.....ಹೋಗೋ.... ನಿನಗೇನೂ ಗೊತ್ತಿಲ್ಲ.... ಹೇಳಿದರೂ ಅರ್ಥ ಆಗಲ್ಲ (ಬೇಸರಗೊಂಡು ಪುಸ್ತಕ ಕೈಯಲ್ಲಿ ಹಿಡಿದು ಓದಲು ಯತ್ನಿಸಿದ)

ಮೂರ್ತಿ: (ಆಶ್ಚರ್ಯದಿಂದ) ಹಾಗಾದರೆ... ವಿಕ್ಕಿ ಮತ್ತು ನೀತು ಪ್ರೇಮಿಗಳಾ? ...

ವಿನೋದ್: (ಕೋಪದಿಂದ) ಗೊತ್ತಿಲ್ಲ ಕಣೋ... ಅವನನ್ನೇ ಕೇಳು.

ಮೂರ್ತಿ: (ಎದ್ದು ನಿಂತು, ಬಾಯಿಬಿಟ್ಟುಕೊಂಡು ಸಂಶಯದಿಂದ) ಏನೋ ವಿಕ್ಕಿ, ನೀನು ನೀತುನ್ನು ಪ್ರೀತಿಸಿತ್ತಿದ್ದಿಯಾ?

ವಿಕ್ಕಿ: ಕೈ ಕಟ್ಟಿರುವ ಗಡಿಯಾರದಲ್ಲಿ ಸಮಯ ನೋಡಿಕೊಳ್ಳುತ್ತಾ, ಟೈಮ್ ಆಯ್ತು ಕಣೋ... ನಾನು ಹೊರಡಬೇಕು..

ಮೂರ್ತಿ:(ಕೋಪದಿಂದ, ವಿಕ್ಕಿ ಹತ್ತಿರ ನಡೆದು) ನೀನು ನೀತುನ್ನ ಪ್ರೀತಿಸಿತ್ತಿದ್ದಿಯಾ? ಇಲ್ಲವಾ?...ಹೇಳು..

ವಿಕ್ಕಿ: (ನಾಚುಕೊಳ್ಳುತ್ತಾ) ನನಗೂ ಗೊತ್ತಿಲ್ಲ ಕಣೋ... ಪ್ರೀತಿ ಮಾಡ್ತಾ ಇದ್ದೀನಿ ಅನಿಸುತ್ತೇ!.. ನನಗೂ ಈಗೀಗ ಅರ್ಥವಾಗುತ್ತಿದೆ, ಪ್ರೀತಿ ಅಂದರೆ ಹೀಗೇ ಇರುತ್ತಾ ಅಂತ!!....

ಮೂರ್ತಿ: (ತಲೆ ಪರುಚುತ್ತಾ) ಈಗ ನೀನು... ಪ್ರೀತಿ ಮಾಡಿತ್ತಿದ್ದೀನಿ ಅಂತ ಹೇಳಿದಿಯಾ? ಇಲ್ಲ, ಮಾಡಿತಿಲ್ಲ ಅಂತ ಹೇಳಿದಿಯಾ?

ವಿನೋದ್: (ನಗುತ್ತಾ) ಲೋ ಮೂರ್ತಿ, ನಿನಗೇ ಗೊತ್ತಾಗಲ್ಲ ಸುಮ್ಮನಿರು. ಅವನು ಈಗ ಹೊರಡಲಿ.

ಮೂರ್ತಿ: (ಕೋಪದಿಂದ) ಯಾಕೋ.. ನನಗೆ ಗೊತ್ತಾಗಲ್ಲ, ನಾನು ನಿಮ್ಮತರ 4 ನೇ ವರ್ಷದ BE ಓದುತ್ತಿಲ್ಲವಾ..!!

ವಿಕ್ಕಿ: (ಮದ್ಯ ಪ್ರವೇಶಿಸಿ) ಹೌದು ಮೂರ್ತಿ, ನಾನು ನೀತುನ್ನ ಪ್ರೀತಿ ಮಾಡ್ತಾ ಇದ್ದೀನಿ, ಈ ವಿಷಯವನ್ನು ಅವಳಿಗೆ ಫಸ್ಟ್ ಹೇಳೋಣ ಅಂತ ಇದ್ದೆ ಆದರೇನು ನೀವು ನನ್ನ ಪ್ರಾಣ ಸ್ನೇಹಿತರಲ್ವ ನಿಮ್ಮೊಂದಿಗೆ ಅಂಚಿಕೊಂಡಿದ್ದಕ್ಕೆ ನನ್ನ ಮನಸ್ಸು ನೀರಾಳವಾಯಿತು . ಈ ವಿಷಯವನ್ನು ಅವಳ ಹತ್ತಿರ ಅಂಚಿಕೊಂಡರೆ ಮತ್ತಷ್ಟು ನೀರಾಳನಾಗುತ್ತೇನೆ.

ಮೂರ್ತಿ: (ಅಮಾಯಕತೆಯಿಂದ) ನೀನ್ಯಾಕೆ ನಮ್ಮೂರಿನ ನೀತುನ್ನೇ ಪ್ರೀತಿಸಿದಿಯಾ? ಅವಳಂದ್ರೆ ನೀನಗೆ ಅಷ್ಟು ಪ್ರೀತಿನಾ?

ವಿಕ್ಕಿ: ನನಗೆ ಗೊತ್ತಿಲ್ಲ ಕಣೋ.. ನೀತುನ್ನ ಮಾತಾಡ್ತಾ ಇದ್ದರೇ, ನೋಡ್ತಾ ಇದ್ದರೇ.. ಎಷ್ಟೇ ಜನ್ಮಗಳಾದರೂ ಸಾಕಾಗಲ್ಲ ಅನಿಸುತ್ತೆ. ನಾವು 2 ನೇ ವರ್ಷದ BE ಯಲ್ಲಿ ಇದ್ದಾಗ, ನೀತು ಮೊದಲನೇ ವರ್ಷದ ದಾಖಲಾತಿಗೆ ಬಂದಾಗಲೇ ನಾನು ಅವಳನ್ನು ಮೊದಲನೇ ಸಲ ನೋಡಿದ್ದು.....

ಮೂರ್ತಿ: (ಮದ್ಯದಲ್ಲಿ) ಹೌದು.... ಹೌದು... ಅವಳ ತಂದೆ ನಮ್ಮೂರಿನ ದೊಡ್ಡ ಗೌಡ್ರುಲ್ಲವಾ, ಅದಕ್ಕೆ ನಮ್ಮ ತರ ಕನ್ನಡ ಮಾಧ್ಯಮದಲ್ಲಿ ಬ್ಯಾಡ ಅಂತ ಬೆಂಗಳೂರುಲ್ಲೇ ಓದಿಸಿದರು, english medium ಲ್ಲಿ.....!!!

ವಿನೋದ್: ಲೋ ಮೂರ್ತಿ.... ಕೇಳೋ ಅವನು ಅಷ್ಟು ಫೀಲಾಗಿ ಹೇಳಿತ್ತಿದ್ದಾನೆ.

ಮೂರ್ತಿ: (ಸುಮ್ಮನಾದ)

ವಿಕ್ಕಿ: ನೀತುಗೇ ನಮ್ಮೂರಿನ ಪ್ರಕೃತಿ, ಆಚಾರ-ವಿಚಾರ ಅಂದರೆ ತುಂಬಾ ಇಷ್ಟ. ಅದರಲ್ಲೂ ನಮ್ಮೂರಿನ ಜನ ಅಂದರೆ ಇನ್ನೂ ಇಷ್ಟ... ಯಾರೇ ಆಗಲಿ, ನಮ್ಮೂರಿನವರು ಅಂದರೆ ಸಾಕು....ಹೆಸರು ಗೊತ್ತಿಲ್ಲ ಅಂದರೂ... ಚೆನ್ನಾಗಿದ್ದಿರಾ? ಅಪ್ಪ ಅಮ್ಮ ಚೆನ್ನಾಗಿದ್ದರಾ? ಊರಿಗೆ ಮಳೆ ಬಂತಾ? ಊರಿನ ಜನ ಹೇಗೆ? ಅಂತ ಹಲವಾರು ವಿಷಯಗಳು ಓತ್ತಡಕೊಟ್ಟಿಯಾದರೂ ತಿಳಿದುಕೊಳ್ಳುತ್ತಾಳೆ.

ಮೂರ್ತಿ ಮತ್ತು ವಿನೋದ್: ಹೌದು....ಹೌದು.....ನಿಜ.

ವಿಕ್ಕಿ:(ಮುಂದುವರೆಸಿದ) ಹಾಗೇ ನಾನು ಅವಳಿಗೆ ಆ ದಾಖಲಾತಿಯ ದಿನ ಸಿಕ್ಕಿಬಿಟ್ಟೆ..

ಮೂರ್ತಿ: (ಗರ್ವದಿಂದ) ಹಲೋ....ನಾನೇ ನಿನಗೇ ನೀತುನ್ನು ಪರಿಚಯ ಮಾಡಿಸಿದ್ದು...

 ವಿಕ್ಕಿ: ಹೌದು ಮೂರ್ತಿ.... ನೀನೇ ಅವಳನ್ನು ಪರಿಚಯಿಸಿದ್ದು.. ನಿನಗೇ ನಾನೆಂದೂ ಚಿರರುಣಿಯಾಗಿರುತ್ತೇನೆ.

ವಿನೋದ್: (ಮದ್ಯ ಪ್ರವೇಶಿಸಿ) ಅಷ್ಟೆಲ್ಲಾ ಬ್ಯಾಡಬಿಡೋ... ಇವನು ಪರಿಚಯ ಮಾಡಿಲ್ಲ ಅಂದರೂ ನಮ್ಮೂರಿನವರು ಯಾರ್ಯಾರು ಕಾಲೇಜ್ ಲ್ಲಿ ಇದ್ದಾರೆ ಎಂದು attender ಹತ್ತಿರ ವಿಷಯ ತಿಳಿಕ್ಕೊಂಡು, ನಿನ್ನ ತಲೆ ತಿಂದಿದ್ದಳು.

ಮೂರ್ತಿ: ಹೌದು.... ಹೌದು.... ನಿಜ... ಅವಳಷ್ಟು chewing gum ಇನ್ಯಾರು ಇಲ್ಲ..!

ವಿಕ್ಕಿ: (ನಗುತ್ತಾ ಮುಂದುವರೆಸಿದ) ಆ chewing ಗಮ್ ನನ್ನ ಹೃದಯಕ್ಕೆ ಅಂಟುಕೊಳ್ಳುತ್ತೆ ಅಂತ ನಾನು ತಿಳಿದಿರಲಿಲ್ಲ

ವಿನೋದ್: (ಆಸಕ್ತಿಯಿಂದ) ಪ್ರೀತಿ ಅಂದ್ರೆ ಹಾಗೆನೇನೋ?

ವಿಕ್ಕಿ: ಕಾಲೇಜ್ ಲ್ಲಿ ಎಲ್ಲರೂ ಇಂಗ್ಲಿಷ್ ಮಾತಾಡಾತ್ತಿದ್ದರೆ, ನೀತು ಮಾತ್ರ ಅಚ್ಚ ಕನ್ನಡದಲ್ಲಿ ನಮ್ಮೂರಿನ ಭಾಷೆ ಮಾತಾಡ್ದಾಗ, ನನಗೆ ನಮ್ಮೂರಿನಲ್ಲಿ ನಮ್ಮ ಜನಗಳ ಮದ್ಯ ಓದಂಗೆ ಅನಿಸುತ್ತಿತ್ತು. ಅವಳ ಪರಿಚಯ ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿತು. ನಾನು BE ಪದವಿ ಮಾಡಕ್ಕಾಗಲ್ಲ, ಊರಿಗೆ ಹೋಗಿ ವ್ಯವಸಾಯ ಮಾಡಿಕೊಳ್ಳೋಣ ಅನ್ನುವಾಗ ನನ್ನ ಜೀವನದಲ್ಲಿ ಉತ್ತೇಜನ ದ್ವೀಪದಂತೆ ನನ್ನಲ್ಲಿ ಪ್ರವೇಶಿಸಿದಳು... ಅದೇ ವರ್ಷದಲ್ಲಿ ಮೊದಲನೇ BE ಪದವಿಗೆ ನಮ್ಮ ಕಾಲೇಜ್ ಲ್ಲಿ ನೋಂದಣಿ ಪಡೆದಳು.

ವಿನೋದ್: (ಕುತೂಹಲದಿಂದ) ಹೌದಾ..... ಮತ್ತೇ...?

ವಿಕ್ಕಿ: ಅವಳು ಎಲ್ಲರನ್ನೂ ಮಾತಾಡಿಸುವ ರೀತಿ, ತಾರತಾಮ್ಯವಿಲ್ಲದೆ ನೋಡಿಕೊಳ್ಳುವ ನೀತಿ, ಮುಗಿಯದ ಮಾತು, ಹಾತ್ತಾರು ಸಂಶಯಗಳಿಂದ ನಮ್ಮಲ್ಲಿ ನಮಗೆ, ಚರ್ಚೆಗೆ ಉಂಟುಮಾಡುವ ವಿಷಯಗಳು...... ಹೀಗೇ ಎಲ್ಲವೂ ಹೊಸತು ಅನಿಸಿತು. ಅವಳೊಂದಿಗೆ ಸ್ನೇಹ ಮಾಡಬೇಕುನಿಸಿತು....ನನಗೆ ಗೊತ್ತಿಲ್ಲದೇ, ಎಷ್ಟೊ ವಿಷಯಗಳು ನನ್ನಲ್ಲಿ ಅಡಿಗಿದೆ ಎಂದು ಗೊತ್ತಾಗಿದ್ದು ಅವಳೊಂದಿಗೆ ಮಾತಾನಾಡಿದ ಆಗಲೇ..

 ಮೂರ್ತಿ: ಹೋ....ಹೌದಾ.. ಪ್ರೀತಿ ಮಾಡಿದರೆ ಅಷ್ಟು ಉಪಯೋಗ ಇದೆಯಾ ?

ವಿನೋದ್: ಲೋ ಮೂರ್ತಿ, ಅವನು ಇನ್ನೂ ಹೇಳಲಿಲ್ಲ ಕಣೋ… ಪ್ರೀತಿ ಮಾಡಿತ್ತಿದ್ದೀನಿ ಅಂತ... ಮುಂದೇ ಕೇಳೋ...

ವಿಕ್ಕಿ:(ಅದೇ ಫೀಲ್ ಇಂದ ಮುಂದೆವರೆಸಿದ) ನನ್ನ ಮಾತುಗಳು, ಚರ್ಚೆಯ ಅಂಶಗಳು ಅವಳಿಗೆ ಇಷ್ಟವಾಗಿರಬಹುದು. ಅದಕ್ಕೆ ನನ್ನೊಂದಿಗಿನ ಸ್ನೇಹ ಮುಂದೆವರಿಸಿದಳು. ನಮ್ಮಿಬ್ಬರ ಮೊಬೈಲ್ ನಂಬರ್ಸ್ ಹಂಚಿಕೊಂಡೆವು, ಸಮಯ ಸಿಕ್ಕಾಗ ಫೋನ್ ಲ್ಲಿ ಭೇಟಿಯಾದಾಗ ಕಾಲೇಜ್ ನಲ್ಲಿ, ಒಬ್ಬರಿಗೊಬ್ಬರು ಪಠ್ಯಕಾಂಶ ಚರ್ಚೆ ಮತ್ತು ಇಷ್ಟ ಕಷ್ಟಗಳ ಬಗ್ಗೆ ಮಾತಾಡಿಕೊಳ್ಳುತ್ತಿದ್ದೆವು.

ವಿನೋದ್: ನಮಗೆ ಗೊತ್ತು ಕಣೋ... ಅವಳು ಕೇಳುವ ಸಂಶಯಗಳಿಗೆ ಹೇಗಾದರೂ ಹುಡಿಕಿ, ಓದಿ ಅವಳಿಗೆ ಉತ್ತರ ಕೊಟ್ಟು ಕೊಟ್ಟು ನೀನೂ ಸಹ ತುಂಬಾ ಚೆನ್ನಾಗಿ ಓದುತ್ತಿದ್ದಿಯಾ, ಹಿಂದೆ ಉಳಿದ ಎಲ್ಲಾ subjects  ಪಾಸು ಮಾಡುತ್ತಿದ್ದೀಯಾ.....ಒಳ್ಳೇದು ಕಣೋ...

ವಿಕ್ಕಿ: ಅದೆಲ್ಲಾ ಪಾಸು ಮಾಡಕ್ಕೆ ನೀತು ತುಂಬಾ ಸಹಾಯ ಮಾಡಿದಳು, ಯಾವ ಬುಕ್ ಓದಬೇಕು... ಎಷ್ಟು ಓದಬೇಕು, ನೋಟ್ಸ್ ಹೇಗೆ ಮಾಡಬೇಕು....

ಮೂರ್ತಿ: ಮತ್ತೇ ನೀನೂ ಯಾವತ್ತು ನನಗೆ ಹೇಳಲಿಲ್ಲ, ಹೇಗೆ ಪಾಸು ಮಾಡುವುದು ಅಂತಾ? ಅದಕ್ಕೆ ನನ್ನದು ಇನ್ನೂ ಸುಮಾರು subjects ಹಾಗೇ ಹಿಂದೆ ಉಳಿದುಹೋಗಿದೆ.

ವಿನೋದ್: (ನಗುತ್ತಾ) ನೀನೂ ಸಹ ಯಾವುದೋ ಒಂದು ಹುಡಿಗಿಗೆ ಪ್ರೀತಿ ಮಾಡು.....ಆಗ ಪಾಸು ಮಾಡಿತ್ತಿಯಾ!!

ಮೂರ್ತಿ: ಅಷ್ಟೆ....ನಮ್ಮ ಅಪ್ಪ ಖರ್ಚಿಗೆ ದುಡ್ದುಕೊಡಲ್ಲ....ನನಗೆ ಬ್ಯಾಡಾಪ್ಪ, ಈ ಲವ್....ಈ ಪ್ರೀತಿ...

ವಿನೋದ್: (ವಿಕ್ಕಿ ಕಡೆ ನೋಡುತ್ತಾ) ನಿನೇನೋ ಅವಳನ್ನು ಪ್ರೀತಿ ಮಾಡಿತ್ತಿದ್ದೀಯಾ..... ಮತ್ತೇ ಅವಳು?

ವಿಕ್ಕಿ: ಗೊತ್ತಿಲ್ಲ ಕಣೋ, ನನ್ನೊಂದಿಗಿನ ಸ್ನೇಹ, ಅವಳು ಮಾತಾಡುವ ರೀತಿ, ನನ್ನೊಂದಿಗಿನ ಸನಿಹ ಎಲ್ಲವೂ ಅನಿಸುತ್ತೇ ಅವಳು ಸಹ ನನ್ನನ್ನ ಪ್ರೀತಿ ಮಾಡಿತ್ತಿದ್ದಾಳೆ ಅಂತ. ಅದಲ್ಲದೇ ಬೆಳಗ್ಗೆ ಕರೆ ಮಾಡಿ ನಾವಿಬ್ಬರು ಪಾರ್ಕಲ್ಲಿ ಭೇಟಿಯಾಗೋಣ, ನಿನ್ನನ್ನು ವೈಯುಕ್ತಿಕವಾಗಿ ಮಾತಾಡಬೇಕು ಅಂದಳು. ಅದೂ ಈ ದಿನ ಪ್ರೇಮಿಗಳ ದಿನ!.... ಅದು ಬಿಟ್ಟು ಬೇರೆ ಯಾವ ವಿಷಯವನ್ನು ಮಾತಾಡಕ್ಕೆ ಅವಕಾಶ ಇಲ್ಲ.

ವಿನೋದ್: ಹಾಗಾದರೆ ಈ ದಿನ ನಿನ್ನ ಪ್ರೀತಿ ಫಲಿತಾಂಶ ತಿಳಿಯಳಿದೆ.

ವಿಕ್ಕಿ:(ಆತಂಕದೊಂದಿಗೆ ನಗು) ಹೌದು...... ನೋಡೋಣ..

ಸಂಪೂರ್ಣ ತಯಾರಿಯೊಂದಿಗೆ ಹೊರಡಲು ಆರಂಭಿಸಿದ ವಿಕ್ಕಿ, ಮೂರ್ತಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ ಅನಿಸಿತು.

ವಿಕ್ಕಿ:(ಗಾಂಭಿರ್ಯದಿಂದ) ಮೂರ್ತಿ, ನೀನು ಕೇಳಿದ ಪ್ರಶ್ನೆಗಳು ನನಗೂ ಸಹ ಹುಟ್ಟುಕೊಂಡಿತ್ತು ಅದಕ್ಕೆ ನನ್ನ ಮನಸ್ಸು ನೀಡಿದ ಉತ್ತರ ಏನು ಗೊತ್ತಾ..

ಮೂರ್ತಿ: (ನೆನಪಿಲ್ಲದೇ ಗಾಬರಿಯಿಂದ) ನಾನೇನು ಕೇಳಿದೆ?

ವಿಕ್ಕಿ: ನಾನು ನೀತುನ್ನೇ ಏನಕ್ಕೆ ಪ್ರೀತಿ ಮಾಡಿದೆ ಗೊತ್ತಾ? ನನ್ನ ಜೀವನದಲ್ಲಿ ಉತ್ತೇಜನ ದ್ವೀಪವಾಗಿ ಬಂದಳು. ನನ್ನ ಬಾಳಿನ ಉದ್ದಕ್ಕೂ ಇದ್ದು ವಿಜಯ ಜ್ವಾಲೆಯಾಗಿ ಹರಿದರೆ... ಈ ನನ್ನ ಜನ್ಮ ಸಾರ್ಥಕವಾಗುತ್ತೇ, ಅವಳಿಗೋಸ್ಕರ ಬದುಕಬೇಕುನಿಸುತ್ತೇ, ಅವಳಿಗೋಸ್ಕರ ಏನಾದರು ಸಾಧಿಸಬೇಕುನಿಸುತ್ತೇ, ಅವಳೊಂದಿಗೆ ಕೊನೆ ಉಸಿರು ಅನಿಸುತ್ತೆ.

ಮೂರ್ತಿ: ನೀನು ಇಷ್ಟು ಪ್ರೀತಿ ಮಾಡಿತ್ತೀಯೋನೋ!!.....

ವಿನೋದ್: ಲೋ ಮೂರ್ತಿ, ಅವನ್ನ ಬಿಡೋ ಹೊರಡಲಿ.....  ತಡವಾಗುತ್ತೇ...

ವಿಕ್ಕಿ: (ಸಮಯ ನೋಡಿಕ್ಕೊಂಡು ಗಾಬರಿಯಾಗಿ) ಮೂರ್ತಿ, ತಡವಾಯ್ತು ನನ್ನನ್ನು M G ಪಾರ್ಕ್ ಹತ್ತಿರ ಡ್ರಾಪ್ ಮಾಡೋ..

ಮೂರ್ತಿ:(ಖುಷಿಯಿಂದ) No problem .... I will drop you.

ವಿನೋದ್: (ನಗುತ್ತಾ) ಹೋ, ಇಂಗ್ಲಿಷಾ....ವಿಂಗ್ಲಿಷಾ....

ವಿಕ್ಕಿ ಮೊಬೈಲ್ ಗೆ ಮೆಸೇಜ್ (SMS) ಡ್ರೌ.....ಡ್ರೌ....ಡ್ರೌ ಶಬ್ದ. ಅದು ನೀತುವಿನ ಮೆಸೇಜ್, ಎಲ್ಲಿದ್ದೀಯಾ ಅಂತ?

ವಿಕ್ಕಿ: (ಮತ್ತಷ್ಟು ಗಾಬರಿಯಿಂದ) ಲೋ ಮೂರ್ತಿ, ಬೇಗ ಬಾರೋ… ಪ್ಲೀಸ್. ಅವಳು ಮೆಸೇಜ್ ಬೇರೇ ಮಾಡಿಬಿಟ್ಟಳು.

ವಿನೋದ್: ಯಾಕೋ ವಿಕ್ಕಿ ಎದುರುತ್ತೀಯಾ, ಪ್ರೀತಿ ಮಾಡುವವರು ಎದರಬಾರದು ಧೈರ್ಯವಾಗಿರು, ಧೈರ್ಯವಾಗಿ ನಿನ್ನ ಪ್ರೀತಿಯನ್ನು ತಿಳಿಸು.... wish you all success ..

ವಿಕ್ಕಿ: ಆತುರದಿಂದ ಮೊಬೈಲ್ ನಲ್ಲಿ ಮೆಸೇಜ್ ಟೈಪ್ ಮಾಡ್ತಾ..... thank you ವಿನೋದ್ ಅಂತ ಹೇಳಿ on d way ಎಂದು ನೀತುಗೆ ಮೆಸೇಜ್ ಮಾಡಿದ.

(ವಿಕ್ಕಿಯು ಮನೆಯ ಕೆಳಗಡೆ ನಿಲ್ಲಿಸಿದ ಮೋಟಾರ್ ಬೈಕ್ ಹತ್ತಿರ ಹೋಗಿ ನಿಂತ. ಅವನ ಹಿಂದೆಯೇ ಮೂರ್ತಿ ಓಡಿ ಬಂದು ಬೈಕ್ start ಮಾಡಿ MG ಪಾರ್ಕ್ ಕಡೆಗೆ ಹೊರಟರು)

ಮೊಬೈಲ್ ನ್ನು ಕೈಯಲ್ಲಿ ಹಿಡಿದು ಹಿಂದೆ ಕುಳಿತ ವಿಕ್ಕಿಯ ಮುಖದಲ್ಲಿ ಆತಂಕ... ಹೇಗೆ ತಿಳಿಸಲಿ ನನ್ನ  ಪ್ರೀತಿನಾ?ಅವಳ ಪ್ರತಿಕ್ರಿಯೆ ಹೇಗೆ ಇರುತ್ತದೆ? ಅವಳು ಪ್ರೀತಿಸಲ್ಲ ಅಂದ್ರೆ ನಾನೇನು ಮಾಡಲಿ? ಏನಾಗಲಿ?......ಮುಂದೇನು ಅಂತ ಹಲವಾರು ಮನಸ್ಸಿನ ಪ್ರಶ್ನೆಗಳಿಗೆ ಮುಖದಲ್ಲಿ ಶಕೆ, ಕೈಕಾಲುಗಳ ನಡುಕ. ಇದನ್ನು ಗಮನಿಸಿದ ಮೂರ್ತಿ ಮಾತಾಡಲು ಪ್ರಾರಂಭಿಸಿದ.

ಮೂರ್ತಿ: ನಿನ್ನನ್ನ 100 % ಒಪ್ಪಿಕೊಳ್ಳುತ್ತಾಳೆ ನಿನ್ನ ಪ್ರೀತಿಯನ್ನು ಸ್ವಾಗತಿಸುತ್ತಾಳೆ, ನನಗೆ ಗೊತ್ತು ಕಣೋ.. ಇಲ್ಲ ಅಂದರೆ ಅವಳು ಏನಕ್ಕೆ ಈ ದಿನನೇ ಪಾರ್ಕ್ ಗೆ ಕರೆದಳು. ನೀನೇನು ಭಯ ಬೀಳಬ್ಯಾಡ, ನಾವೆಲ್ಲಾ ಇದ್ದೀವಿ... ಯಾವುದಕ್ಕೂ ಹೆದರಬೇಡ. ಏನೇ ಕಷ್ಟ ಬಂದರೂ ನಾವೆಲ್ಲಾ ನಿನ್ನೊಂದಿಗೆ ಇರುತ್ತೇವೆ.

ಮೂರ್ತಿಯ ಮಾತುಗಳು ವಿಕ್ಕಿಯ ತಲೆಗೆ ಸೇರದಿದ್ದರೂ ಅವನಿಗೆ ಗೊತ್ತಿಲ್ಲದೇ ಸ್ವಲ್ಪ ಧೈರ್ಯ ಬಂತುನಿಸಿತು. ಅಷ್ಟರಲ್ಲಿ MG ಪಾರ್ಕ್ ನ ಮುಖ ದ್ವಾರ ಬಂದು ಬಿಡ್ತು.

ವಿಕ್ಕಿ: (ಬೈಕ್ ನಿಂದ ಇಳಿದು) thank u ಮೂರ್ತಿ

ಮೂರ್ತಿ: All the best ಕಣೋ.. ಧೈರ್ಯವಾಗಿರು... ನಾವೆಲ್ಲಾ  ಇದ್ದೀವಿ (ಅಲ್ಲಿಂದ ಹೊರಟ)

ವಿಕ್ಕಿ: (ಮೊಬೈಲ್ ನಿಂದ ನೀತುಗೆ ಕರೆ ಮಾಡಿ) ನೀತು ನಾನು MG ಪಾರ್ಕ್ ಹತ್ತಿರ ಬಂದಿದ್ದೀನಿ 

ನೀತು: ಹೌದಾ! ನಾನು ಬಂದು 15 ನಿಮಿಷ ಆಗಿದೆ

ವಿಕ್ಕಿ: ಹೋ.....ಒಳಗಿದ್ದೀಯಾ..

ನೀತು: ಹೌದು.... ಮುಖದ್ವಾರದಿಂದ ಎಡಗಡೆ ಬಾ... ಅಲ್ಲೊಂದು ಚಿಕ್ಕದಾದ ಗಣಪತಿ ದೇವಸ್ಥಾನ ಇದೆ, ಅಲ್ಲಿ ಕುಳಿತ್ತಿದ್ದೀನಿ.

ವಿಕ್ಕಿ: ಸರಿ ಹಾಗಾದರೆ....

(ಕರೆ ಕಡಿತಗೊಳಿಸಿ ದೇವಸ್ಥಾನದ ಕಡೆಗೆ ನಡೆಯುತ್ತಾ, ಮುಖವನ್ನು ಕರವಸ್ತ್ರದಿಂದ ಹೊರಸಿಕೊಳ್ಳುತ್ತಾ, In -shirt ಸರಿಮಾಡಿಕೊಳ್ಳುತ್ತಾ, ನಗುವನ್ನು ಅಭ್ಯಾಸ ಮಾಡುತ್ತಾ, ಮುನ್ನೆಡೆದ ನೀತು ಹತ್ತಿರ)

ವಿಕ್ಕಿ: ಹಾಯ್.... ಏನು ಸಮಾಚಾರ, ದೇವರಿಗೆ ಏನೋ ಅರ್ಜಿ ಹಾಕಿತಿದಿರಾ ಅನಿಸುತ್ತೇ.

ನೀತು: (ಕೋಪದಿಂದ) ಹೇಗೇ ಬಂದೇ, ಬಸ್ ಲ್ಲಾ? ಏಕೆ ತಡವಾಯಿತು?

ವಿಕ್ಕಿ: ಮೂರ್ತಿ ಡ್ರಾಪ್ ಮಾಡಿದ… ರೂಮಲ್ಲಿ ಮಾತುಕಥೆ ಜಾಸ್ತಿ ಆಗಿತ್ತು, ಅದಕ್ಕೆ ಸ್ವಲ್ಪ ತಡವಾಯಿತು.

ನೀತು: ಹೋ...ಹೌದಾ.... ನೀನು ಬರುವುದು ತಡವಾಯಿತು ಅಲ್ವ ಅದಕ್ಕೆ ಇಲ್ಲಿಗೆ ಬಂದೆ.

(ದೇವಸ್ಥಾನದಲ್ಲಿ, ನೀತು ಎದುರುಗಡೆ ವಿಕ್ಕಿ ಕುಳಿತಿಕೊಂಡ)

ನೀತು: ನಾವು ಅಲ್ಲಿ ಹೋಗಿ ಕುಳಿತುಕೊಳ್ಳೋಣ (ಸ್ವಲ್ಪ ದೂರದಲ್ಲಿರುವ ಆಲದಮರದ ಕೆಳಗಡೆ ಇರುವ ಬೆಂಚು ಕಡೆ ಕೈ ತೋರಿಸಿ ಹೇಳಿದಳು)

ವಿಕ್ಕಿ: ಸರಿ...... no problem 

ವಿಕ್ಕಿ ಮತ್ತು ನೀತು ದೇವರಿಗೆ ವಂದನೆ ಮಾಡಿ ಅಲ್ಲಿಂದ ನಡೆದರು. ಒಬ್ಬರಿಗೊಬ್ಬರು ಅಲ್ಪ ದೂರದಲ್ಲಿ ನಡೆಯುತ್ತಾ, ಮಾತಾಡಿಕೊಳ್ಳುತ್ತಾ, ಮರದ ಕೆಳಗೆ ಹಸಿರು ಸಸಿಗಳಿರುವ ಬೆಂಚಿನ ಮಧ್ಯಭಾಗದಲ್ಲಿ ಅಂತರದೊಂದಿಗೆ ಇಬ್ಬರು ಕುಳಿತರು.

ತಣ್ಣನೆಯ ಗಾಳಿ, ತಂಪಾದ ನೆರಳು, ಹಕ್ಕಿಗಳ ಚಿಲಿಪಿಲಿ, ಮಕ್ಕಳ ಆಟಪಾಟ. ಆಳಿಲುನ ಓಡಾಟದೊಂದಿಗೆ ಇಬ್ಬರು ತಮ್ಮ ಎರಡು ಕಣ್ಣುಗಳನ್ನು ಮುಚ್ಚಿ ಪ್ರಕೃತಿಯ ಸೊಬಗನ್ನು,ಇಂಪಾದ ಶಬ್ದಗಳನ್ನು ಆಸ್ವಾದಿಸುತ್ತಾ, ಮೌನಕ್ಕೆ ಶರಣಾಗಿದ್ದರು.

ವಿಕ್ಕಿ: ಮೆಲ್ಲಗೆ ಕಣ್ಣು ತೆರೆದು ನೀತುನ್ನು ನೋಡುತ್ತಾ..... thank you

ನೀತು: ವಿಕ್ಕಿಯ ಧ್ವನಿ ಮತ್ತು ಮಾತಲ್ಲೇ ಕಾರಣ ತಿಳಿಕೊಂಡು... ನಗೆ ಬೀರಿದಳು.

ವಿಕ್ಕಿ: ಏನು ಇದ್ದಕ್ಕೆ ಇದ್ದಂಗೆ, ಪಾರ್ಕ್ ಗೆ ಬರಕ್ಕೆ ಹೇಳಿದಿಯಾ...

ನೀತು: ಸುಮ್ಮನೇ...

ವಿಕ್ಕಿ: ಪ್ರಕೃತಿಯ ಸೊಬಗಿಗೆ ಮಾತು ಮಾಯವಾಯಿತೇ? ಒಂದೇ ಪದದಲ್ಲಿ ಉತ್ತರಿಸಿದ್ದೀಯಾ....

ನೀತು: (ವಿಕ್ಕಿಯನ್ನೇ ನೋಡುತ್ತಾ) ನಗೆ ಬೀರಿದಳು

ವಿಕ್ಕಿ: ಸರಿ ಹಾಗಾದರೆ, ಈ ದಿನ ನಾನು ಜಾಸ್ತಿ ಮಾತಾಡಿತ್ತೀನಿ... ಅಂದರೆ ನಿನ್ನತರ ಪ್ರಶ್ನೆ ಕೇಳುವ ಸರದಿ ನನ್ನದು... ಏನಂತೀಯಾ?

ನೀತು: (ಸಣ್ಣನೇಯ ನಗು) ನಾನು ಅದನ್ನೇ ಬಯಸಿದ್ದೇ....

ವಿಕ್ಕಿ: ನೀನು ಹುಟ್ಟಿ ಬೆಳೆದಿದ್ದು ಬೆಂಗಳೂರುಲ್ಲೇ ಅಲ್ವ?

ನೀತು: ಇಲ್ಲ, ನಾನು ಹುಟ್ಟಿದ್ದು ನಮ್ಮೂರು ಕಬ್ಬಾಳಿನಲ್ಲಿ, ಬೆಳೆದಿದ್ದು ಮಾತ್ರ ಬೆಂಗಳೂರುಲ್ಲಿ

ವಿಕ್ಕಿ: ಹೋ....ನಿನಗೇಕೆ, ನಮ್ಮ ಹಳ್ಳಿ ಅಂದ್ರೆ ಅಷ್ಟು ಇಷ್ಟ?

ನೀತು: ನಮ್ಮೂರು ಮಾತ್ರವಲ್ಲ!... ನಮ್ಮೂರಿನ ಪರಿಸರ, ಪ್ರಾಣಿಗಳು, ಜನರು.........ಎಲ್ಲವೂ ಇಷ್ಟ.

ವಿಕ್ಕಿ: ಅದೇ ಯಾಕೆ?

ನೀತು: ನಮ್ಮ ಹಳ್ಳಿಯ ಜನರು ಈಗಲೂ ಒಗಟ್ಟಿನಿಂದ, ಪ್ರೀತಿಯಿಂದ, ಒಬ್ಬರಿಗೊಬ್ಬರು ನಂಬಿಕೆಯಿಂದ ಬಾಳುತ್ತಿದ್ದಾರೆ. ದೊಡ್ಡವರೆಂದರೆ ಗೌರವ, ಕಿರಿಯರಿಗೆ ಇರುವ ಸ್ವಾತಂತ್ರ್ಯ, ಕಷ್ಟಪಡುವ ಮನಸ್ಸು, ಸ್ತ್ರೀ ಗೌರವ, ಪ್ರೀತಿ, ವಿಶ್ವಾಸ ತ್ಯಾಗಗಳಿಂದ ತುಂಬಿದ ಬಾಳು....ಹೀಗೆ ಹತ್ತು ಹಾಲಾವರು ನನ್ನನ್ನು ಬೆಂಗಳೂರಿನ ಯಾಂತ್ರಿಕ ಜೀವನಕ್ಕಿಂತ ನಮ್ಮೂರು ಇಷ್ಟ.... ಇಷ್ಟೇ ಅಲ್ಲಾ ನಮ್ಮೂರಿನ ಪರಿಸರ, ಹೊಲಗದ್ದೆಗಳು, ಊರು ಹೊರಗಿನ ಕೆರೆ, ಗುಡ್ಡಬೆಟ್ಟಗಳು... ಆ ಗಾಳಿ, ಆ ವಾಸನೆ......... ನೆನೆಸಿಕೊಂಡರೆ ನಮ್ಮೂರಿಗೆ ಹೋಗೋಣ ಅನಿಸುತ್ತೆ.

ವಿಕ್ಕಿ: ಕಣ್ಣು ಮಿಟುಕಿಸಿದರ ನೀತುನ್ನೇ ನೋಡುತ್ತಾ, ಆನಂದದಿಂದ ನನ್ನ ಆಯ್ಕೆ, ನನ್ನ ನೀತು, ನನ್ನ ಪಾಲಿಗೆ ಆದ್ರುಷ್ಟ ವೆಂದು ಭಾವಿಸಿ ಭುಜ ಮೆಲ್ಲಗೆ ಮೇಲೆತ್ತಿ ಬೀಗತೊಡಗಿದಾ...

ವಿಕ್ಕಿ: (ಆಲೋಚನೆ ಮಾಡುತ್ತಾ ಕೈಯನ್ನು ಗಡ್ಡಕ್ಕೆ ಇಟ್ಟು ತಲೆ ಎತ್ತಿ, ನೀತುಗೆ ಮುಖಮಾಡಿ) ಮತ್ತೇನು ಕೇಳಬೇಕಿದೆ....?

ನೀತು: (ಮೃದು ದ್ವನಿಯಲ್ಲಿ) ಇಷ್ಟೇನಾ? (ನಾಚುತ್ತಾ) ಮತ್ತೇನೋ...ಕೇಳಿತ್ತಿಯಾ ಅಂದುಕೊಂಡೆ....!!

ವಿಕ್ಕಿ: ಮತ್ತೇನು ಕೇಳಬೇಕಿತ್ತು? ಹಾಗಾದರೆ, ಅದೇನೋ ನೀನೇ ಹೇಳು....!!

ನೀತು: (ಮನಸ್ಸಿನಲ್ಲಿ ಮಾತಾಡಿಕೊಳ್ಳುತ್ತಾ) ನಾನು ಹುಡುಗಿ ಕಣೋ, ನಾನು ನಿನ್ನನ್ನು ಪ್ರೀತಿಸುತ್ತಿದ್ದೀನಿ ಅಂತ ಹೇಗೋ ಹೇಳಲಿ.... ನೀನೇ ಹೇಗೋ ಧೈರ್ಯ ಮಾಡಿ ಹೇಳೋ ಪ್ಲೀಸ್....

ವೀಕಿ: ಏನೋ ಆಲೋಚನೆ ಮಾಡ್ತಾ ಇದಿಯಾ?

ನೀತು: ಹೌದು !.... ಅದೇನೋ ಹೇಳು ಮತ್ತೇ...!

ವಿಕ್ಕಿ: (ತಮಾಷೆಗಾಗಿ) ಅದು ನನ್ನ ಬಗ್ಗೇನೇ ಆಲ್ವಾ...

ನೀತು: ಹೌದು.... ಹಾಗಾದರೆ ಅದು ಏನು ಹೇಳು ?

ವಿಕ್ಕಿ: ಏನು ಇರುತ್ತೇ!!... ಊರಿಗೆ ಯಾವಾಗ ಹೊಗಿತಿಯಾ, ಹೋದಾಗ ಹೇಳು....ನಾನು ಬರುತ್ತೇನೆ ಅಂತ.... ಅಷ್ಟೇ  ತಾನೇ...

ನೀತು: (ಕೋಪದಿಂದ) ನಿನಗೆ ಗೊತ್ತಾಗಲ್ಲ ಕಣೋ......ನನ್ನ ಭಾವನೆಗಳು...

ವಿಕ್ಕಿ: ನೀತುವಿನ ಮುಖ ಬದಲಾವಣೆ ನೋಡಿ, ಶಬ್ದಗಳ ಧ್ವನಿ ಗಾತ್ರದಿಂದ ಅರಿವಾಯಿತು, ಅದೇನೆಂದರೆ ಆವಳೂ ಸಹ ನನ್ನನ್ನ ಪ್ರೀತಿಸಿತ್ತಿದ್ದಾಳೆ....!!!

ವಿಕ್ಕಿಯು ಕುಳಿತಲ್ಲೆ ಹಿಂದೆ ಜರುಗಿ ಬೆಂಚುಗೆ ಶರಣಾದ. ಮಾತಿಗೆ ನಡುಕ, ಹೃದಯದಲ್ಲಿ ಗಾಬರಿ, ಹೇಗೇ ಪ್ರೀತಿ ತಿಳಿಸಲಿ ಅನ್ನುವ ಆತುರ, ಏನು ಹೇಳುತ್ತಾಳೆ ಅನ್ನುವ ಕುತೂಹಲ, ಮೈಯಲ್ಲಾ ಬೆವರು....ಹಲವು ಕ್ಷಣ ನಿಶಬ್ದ.

ನೀತು ಸಹ, ಪ್ರೀತಿಯ ಜ್ವರ ಬಿಟ್ಟಂಗೆ ಮೈಯೆಲ್ಲಾ ಬೆವರು, ಕೈಯೆಲ್ಲಾ ನಡುಕ....ಮಾತು ಮೌನ.... ಹಲವು ಕ್ಷಣ ನಿಶಬ್ದ.

ಪರಿಸರ: ಪ್ರೇಮಿಗಳು ಪ್ರೀತಿ ತಿಳಿಸಿಕೊಳ್ಳುವ ರೀತಿ, ಅವರ ಭಾವನೆಗಳನ್ನು ನೋಡಿ, ಮರದ ಎಲೆಯು ಕದಲದಿರ, ಹಕ್ಕಿಗಳು ಕೂಗು ನಿಲ್ಲಿಸಿ, ಅಳಿಲು ತನ್ನ ಓಡಾಟ ಮರೆತು, ತಂಪಾದ ಗಾಳಿ ನಿಂತು ಎದುರು ನೋಡುತ್ತಿತ್ತು.... ಅವರು ಹೇಳಿಕೊಳ್ಳುವ I Love You ಅನ್ನುವ ಶಬ್ದಗಳಿಗಾಗಿ...

ವಿಕ್ಕಿ: ಧೈರ್ಯಮಾಡಿ, ಮೌನ ಮುರಿದು ತದಲು ಭಾಷೆಯಲ್ಲಿ.....ನೀತು .... ನಾನು ನಿನಗೆ ಒಂದು ವಿಷಯ ಹೇಳಬೇಕು....

ನೀತು: (ಕಾತುರದಿಂದ ಎದುರು ನೋಡುತ್ತಾ)..... ಹು ... ಹು ...ಹೇಳು...

ವಿಕ್ಕಿ: ನಾನು.......... ನಿನ್ನನ್ನು......

(ಪೂರ್ತಿ ಹೇಳುವಷ್ಟರಲ್ಲಿ ನೀತುವಿನ ಮೊಬೈಲ್ ಗೆ ಅನಾಮಿಕ ಕರೆಯೊಂದು ಬಂದು ರಿಂಗ್ ಆಗತೊಡಗಿತು. ಕರೆಯನ್ನು ತಿರಸ್ಕರಿಸಿ ವಿಕ್ಕಿಯ ಮಾತುಗಳನ್ನು ಕುತೂಹಲದಿಂದ ಕೇಳತೊಡಗಿದಳು)

ವಿಕ್ಕಿ:(ಮುಂದುವರೆಸಿ) ನೀನು ಅಂದರೆ ನನಗೆ......

(ಮಾತು ಮಧ್ಯ, ನೀತು  ಮೊಬೈಲ್ ಗೆ ಮತ್ತೆ ಕರೆ ಬಂದು ಶಬ್ದ ಮಾಡಿತು).

ನೀತು: (ಕರೆ ಸ್ವೀಕರಿಸಿ ಬೇಸರದಿಂದ) ಹಲೋ.....ಯಾರು?

ಕರೆ ಮಾಡಿದವರು: (ಗತ್ತಿನಿಂದ) ನೀತು...ನಾನು ನಿನ್ನ ಬಾವ ಭಾನುಪ್ರಕಾಶ್..... ಎಲ್ಲಿದ್ದಿಯಾ? (ಮುಂದೆವರೆಸಿ) ಈ ದಿನ ಪ್ರತ್ಯೇಕತೆ ಏನು ಗೊತ್ತಾ? ವ್ಯಾಲೆಂಟೆನ್ಸ್ ಡೇ...... ಪ್ರೇಮಿಗಳ ದಿನಾಚರಣೆ.....I Love You 

ನೀತು: ಕುತೂಹಲದ ಮುಖದಲ್ಲಿ ಹಾಲಹಾಲದ ಗಾಬರಿ.... ಪ್ರೀತಿಗಾಗಿ ಬಡಿಕ್ಕೊತ್ತಿದ್ದ ಹೃದಯ ಕರೆಯ ಆತಂಕದೊಂದಿಗೆ ಓಡತೊಡಗಿತು .... ಏನುಮಾತಾಡಬೇಕೋ ತಿಳಿಯದೇ ಭಯದಿಂದ... ಹಲೋ.... ಹಲೋ... ಬಾವ, ಅತ್ತೆ ಮಾವ ಚೆನ್ನಾಗಿದ್ದರಾ.....?

ಭಾನುಪ್ರಕಾಶ್: (ದರ್ಪದಿಂದ) ಹು, ಹೌದು...... ನಾನು ಹೇಳಿದ್ದು ಕೇಳಿಸಿತಲ್ವ.... ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ.... I Love You ... ಊರಿಗೆ ಬಾ ಮಾತಾಡೋಣ, ಇಲ್ಲ ಅಂದ್ರೆ ನಾನೇ ಬರುತ್ತೇನೆ....bye ... (ಕರೆ ಮುಕ್ತಾಯವಾಯಿತು)

(ಮೊಬೈಲ್ ನಲ್ಲಿ ಕರೆಗೆ ಹೆಚ್ಚು ಧ್ವನಿ ಇದ್ದುದರಿಂದ ಭಾನುಪ್ರಕಾಶ್ ಹೇಳಿದ ಎಲ್ಲಾ ಮಾತುಗಳು ಸ್ಪಷ್ಟವಾಗಿ ಪರಿಸರಕ್ಕಲ್ಲದೆ, ವಿಕ್ಕಿಯ  ಕಿವಿಗಳಿಗೂ ಮುಟ್ಟಿತು)

ಕರೆ ಮುಕ್ತಗೊಳಿಸಿದ ನೀತು, ವಿಕ್ಕಿಯ ಮುಖ ನೋಡದೇ ದಿಗ್ಬ್ರಂತಿಯಾಗಿ ಆಲೋಚನೆ ಮಾಡತೊಡಗಿದಳು. I Love You ಅನ್ನುವ ಪದಗಳು ವಿಕ್ಕಿಯ ಮಾತುಗಳಲ್ಲಿ ಕೇಳಲು ಬಯಸಿ, ಇನ್ನೊಬ್ಬರ ಮಾತಲ್ಲಿ ಕೇಳಿದ್ದಕ್ಕೆ, ಪ್ರೀತಿಯ ಮೇಲೆ ದ್ವೇಷ ಏರತೊಡಗಿತು. I Love You ಅನ್ನುವ ಶಬ್ದಗಳು ನಂಬಿಕೆಹೀನವಾದೆವು.

ಭಾನುಪ್ರಕಾಶ್ ಮಾತುಗಳು, ಬೆಂಚುನ ಮಧ್ಯ ಉಂಟಾಗಿರುವ ನಿಶ್ಯಬ್ದತೆಯಿಂದ, ಪರಿಸರದಲ್ಲಿನ ತಂಪಾದ ಗಾಳಿಯು ಬಿರುಗಾಳಿಯಾಗಿ ಮರದ ಎಲೆಗಳು ಕೆಳಗೆ ಬೀಳತೊಡಗಿತು, ಹಕ್ಕಿಗಳು ಕೊಂಬೆರೆಂಬೆಗಳಿಂದ  ದೂರವಾಯಿತು, ಅಳಿಲು ತಬ್ಬಿಬ್ಬಾಗಿ ಓಡಾಡತೊಡಗಿತು.

ನೀತುವಿನ ಮುಖದ ಭಾವ, ಪರಿಸರದಲ್ಲಿನ ಮಾರ್ಪಾಡುಗಳನ್ನು ಗಮನಿಸಿದ ವಿಕ್ಕಿಯ ಶ್ವಾಸವು ಏರುಪೇರುಯಾಯಿತು, ಉಸಿರಿನ ಬೇಗೇ ಮೈಯೆಲ್ಲಾ ಹರಡತೊಡಗಿತು, ಪ್ರೀತಿಯ ಹೃದಯ ಅಗ್ನಿ ಜ್ವಾಲೆಯಂತೆ ಹೊತ್ತಿ ಉರಿಯಿತು, ಆಲೋಚನಾಹೀನನಾಗಿ, ಜೀವನದ ಅತ್ಯುನ್ನತ ಸೋಲೆಂದು ಭಾವಿಸಿ, ಬದುಕು ವ್ಯರ್ಥವೆಂದು, ಅವಳಿಲ್ಲದ ಬಾಳು ಬರಡು ಎಂದು, ಜಿಗುಪ್ಸೆಗೊಂಡು.....

ವಿಕ್ಕಿ: (ಉಸಿರುಬಿಡುತ್ತಾ) ನೀತು..... ನಾವು ಹೊರಡೋಣವಾ....

ನೀತು: (ಕೋಪದಿಂದ ಏರುದ್ವನಿಯಲ್ಲಿ) ಏಲ್ಲಿಗೆ....? ನೀನು ಏನೋ ಹೇಳಿತ್ತಿದ್ದಿಯಾ...!!!

ವಿಕ್ಕಿ: (ಅಳುವ ಮುಖದಲ್ಲಿ) ಏನು ಹೇಳಲಿ? ನನಗೆ ಈಗ ಹೇಳಕ್ಕೆ ಏನು ಇಲ್ಲ..... ನಾವು ಹೊರಡೋಣ, ನನ್ನ ಮನಸ್ಸು ಯಾಕೋ ಸರಿಯಿಲ್ಲ...

ನೀತು: (ಬೇಸರದಿಂದ) ಆಯಿತು! ಹೊರಡೋಣ.....ಐದು ನಿಮಿಷ...

ವಿಕ್ಕಿ: ಮೌನವಾಗಿ ಬೆಂಚಲ್ಲೆ ಕುಳಿತ

ನೀತು: ನನಗೆ ಕರೆ ಮಾಡಿದ್ದು ಯಾರು? ಏನು ಮಾತಾಡಿದರು ಅಂತ ಕೇಳಬೇಕನಿಸಿಲ್ಲವಾ?

ವಿಕ್ಕಿ: ಯಾವುದೇ ಪ್ರತಿಕ್ರಿಯೆವಿಲ್ಲದೆ ಮೌನವಾಗಿದ್ದ.

ನೀತು: ಕರೆ ಮಾಡಿದ್ದು, ನಮ್ಮ ಬಾವ ಭಾನುಪ್ರಕಾಶ್..! ನನ್ನನ್ನು ಪ್ರೀತಿಸುತ್ತಿದ್ದಾನೆ ಅಂತೆ...!!

ವಿಕ್ಕಿ:(ಕೋಪದಿಂದ) ಮತ್ತೇ ನೀನು?

ನೀತು: ಹು..... ನನ್ನ ಭಾವನೆಗಳು ನಿನಗಿನ್ನೂ ಅರ್ಥವಾಗಿಲ್ವ? ನನ್ನ ಮನಸ್ಸು ಏನೆಂದು ಗೊತ್ತಿಲ್ಲವಾ? ನಾನು ಯಾರನ್ನ ಪ್ರೀತಿ ಮಾಡಿತ್ತಿದ್ದೀನಿ ತಿಳಿದಿಲ್ಲವಾ?

ವಿಕ್ಕಿ: (ಮೆಲ್ಲಗೆ ಉಸಿರಿಬಿಟ್ಟು ಸಂಶಯದಿಂದ) ಗೊತ್ತು....ಆದರೆ ನಿನ್ನ ಮಾತಲ್ಲಿ ಕೇಳಿದರೆ.....(ಅಪೂರ್ಣ)

ನೀತು: ನಾನು ಹೆಣ್ಣು ಕಣೋ, ಭಾರತೀಯ ನಾರಿ, ನಿಮ್ಮೂರಿನ ಹುಡಿಗಿ.....ಪ್ರೀತಿಯ ಭಾವನೆಗಳು ವ್ಯಕ್ತಪಡಿಸಬಲ್ಲೆ ಆದರೆ ಪ್ರೀತಿಯನ್ನಲ್ಲ.....!!!

ವಿಕ್ಕಿ: (ಮುಖದಲ್ಲಿ ನಗುವಿನ ಚಿಲುಮೆ) ನನ್ನನ್ನೇ ಪ್ರೀತಿಮಾಡತ್ತಿದ್ದಾಳೆ ಅನ್ನುವ ನಂಬಿಕೆ, ಧೈರ್ಯಮಾಡಿ ತಿಳಿಸಿಬಿಡೋಣ ಅನ್ನುವ ಆತುರ ಆದರೆ ಪ್ರೀತಿ ಮಾಡಿತ್ತೀದ್ದಿನಿ ಅಂತ ಹೇಳುವುದುಕ್ಕಿಂತ ಪ್ರೀತಿಯಿಂದ ಮಾತಾಡಬೇಕಿನಿಸಿತು. ನೀತುವಿನ ಮುಖ ನೋಡುತ್ತಾ, ಪ್ರೀತಿಯ ನಗೆ ಬೀರುತ್ತಾ...

ವಿಕ್ಕಿ: ನೀತು ಎಂದಿಗೂ ಹೀಗೆ ಇರುತ್ತೀಯಾ ಅಲ್ಲಾ?

ನೀತು: (ನಗೆಬೀರುತ್ತಾ) ಇರಬೇಕಿನಿಸುತ್ತಿದೆ.

ವಿಕ್ಕಿ: ನಿನಗೋಸ್ಕರ ಏನುಬೇಕಾದರೂ ಮಾಡಬಲ್ಲೇ...!!

ನೀತು: ಹೌದಾ, ಹಾಗಾದರೆ ಅದೇನೋ ಹೇಳಬೇಕು ಅಂದ್ಯಲ್ಲಾ.... ಅದೇನೋ ಹೇಳು ...(ನಾಚಿಕೆಯೊಂದಿಗೆ)

ವಿಕ್ಕಿ: (ಪ್ರೀತಿಯ ನಗುವಿನಿಂದ) ನೀತುವಿನ ಕಣ್ಣಲ್ಲಿ ಕಣ್ಣಿಟ್ಟು, ಕೈಯಲ್ಲಿ ಕೈ ಹಿಡಿದು, ಮೃದು ಧ್ವನಿಯಲ್ಲಿ, ಹೃದಯದಿಂದ, " ನೀತು ನಾನು ನಿನ್ನನ್ನ ತುಂಬಾ ಪ್ರೀತಿಸಿತ್ತಿದ್ದೀನಿ...... ಐ ಲವ್ ಯು" ನೀರಾಳ ಮನಸ್ಸಿನಿಂದ ನೀತುವಿನ ಪ್ರತಿಕ್ರಿಯೆಗೆ  ಎದುರುನೋಡುತ್ತಾ ಕೂತ...

ನೀತು: ಮುಖದಲ್ಲಿ ಸಂತೋಷ, ಪ್ರೀತಿ ಒಪ್ಪಿಗೆ ಕೊಡುವ ಸಂತಸ (ನಾಚುತ್ತಾ) ಹೌದಾ, ಮತ್ತೇ ನಾನು.......

ವಿಕ್ಕಿ: ನೀನು........ಹೇಳು....

ನೀತು: (ನಾಚುತ್ತಾ) ಗೊತ್ತಿಲ್ಲ....

ವಿಕ್ಕಿ: ಆದ್ರೂ...ನನಗೆ ಗೊತ್ತು....!!

ನೀತು: ನೀನು ಪ್ರತ್ಯೇಕವಾಗಿ ನನ್ನನ್ನು ಪ್ರೀತಿಸಿತ್ತಿದ್ದೀನಿ ಅಂತ ಹೇಳಬಹುದು ಆದರೆ ನಮ್ಮಿಬ್ಬರ ಮನಸ್ಸುಗಳು ಯವುತ್ತೋ ಪ್ರೀತಿಯನ್ನ ತಿಳಿಸಿಕೊಂಡಿವೆ, ಪ್ರೀತಿಗಾಗಿ ಪರಿತಪಿಸುತ್ತಿವೆ. ಪ್ರೀತಿ ಅನ್ನುವುದು ನೋಡಿದ ಕ್ಷಣ, ಇಲ್ಲ ನಿಮಷದಲ್ಲಿ ಹುಟ್ಟುವುದಲ್ಲ...ಹಾಗಿಯೇ ಪ್ರೀತಿ ಅನ್ನುವುದು ಜನ್ಮಜನ್ಮಗಳು ಕಳೆದರೂ ಸಾಯುವುದಲ್ಲ. ಪ್ರೀತಿಯು ಇಬ್ಬರಲ್ಲೂ ಸಮಾನಾಂತರವಾಗಿ ಬೆಳೆದು, ಒಬ್ಬರಿಗೊಬ್ಬರು ಅರ್ಥೈಸಿಕೊಂಡು, ಹಿರಿಯರನ್ನು ಸೇವೆಯಿಂದ ಸಂತೈಸಿ, ಸುಖ ಶಾಂತಿ ಸಮ್ರುದ್ದಿ, ಸಂತೋಷಗಳಿಂದ, ಒಂದೇ ಉಸಿರಲ್ಲಿ ಇಬ್ಬರು ಒಟ್ಟಿಗೆ ಲೋಕವನ್ನು ತ್ಯಜಿಸಿವುದೇ ನಿಜಾವಾದ ಪ್ರೀತಿ.

ವಿಕ್ಕಿ: (ಗರ್ವದಿಂದ) ಹೌದು...ನಿಜ, ನನ್ನಲ್ಲಿನ ಮಾತುಗಳು ಹೇಳಿದ್ದಿಯಾ... ಆಲೋಚನೆಯಲ್ಲೂ ನಾವಿಬ್ಬರೂ ಒಂದೇ... ನಂಗೆ ಎಷ್ಟೆ ಕಷ್ಟ ಬಂದರೂ ನಿನ್ನನ್ನು ಮತ್ತು ನನ್ನ ಪ್ರೀತಿಯನ್ನು ಬಿಡಲ್ಲ. ನಾನು ಚನ್ನಾಗಿ ಓದಿ , ಒಳ್ಳೆಯ ವೃತ್ತಿಯಲ್ಲಿ ತೊಡಗಿ, ನಿಮ್ಮ ಮನೆಯಲ್ಲಿ ಒಪ್ಪಿಸಿ ಮದುವೆಯಾಗುತ್ತೇನೆ. ಈ ದಿನದಿಂದ ನನ್ನ ಜವಾಬ್ದಾರಿ ಹಿಮ್ಮಡಿಯಾಯಿತು. ನಿನ್ನ ಪ್ರೀತಿ ಆನೆಯಷ್ಟು ಬಲ ತಂದುಕೊಡ್ತು, ನಾನು ಎಲ್ಲವನ್ನು ಹಿಮ್ಮೆಟ್ಟಿ ಸಾಧಿಸುತ್ತೇನೆ.

ನೀತು: (ಸಂತೋಷದ ಮುಖದಿಂದ, ವಿಕ್ಕಿಯನ್ನು ನೋಡುತ್ತಾ, ಕೈ ಹಿಡಿದು ಪ್ರೀತಿಯ ಧ್ವನಿಯಲ್ಲಿ) "ನಾನು ನಿನ್ನನ್ನು ತುಂಬಾ ಪ್ರೀತಿ ಮಾಡಿತ್ತೀನೀ ಕಣೋ" ನನ್ನ ಕೈ ಎಂದಿಗೂ ಬಿಡಬೇಡ.

ವಿಕ್ಕಿ ಮತ್ತು ನೀತು: ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾ.....ಪ್ರೀತಿ ನಗೆ ಬೀರುತ್ತಾ....ಸುರ್ಯಾನ ಬೆಳಕನ್ನು ಆವರಿಸುತ್ತಿದ್ದ ಕತ್ತಲನ್ನು ನೋಡುತ್ತಾ ಹಲವು ಕ್ಷಣ ಮೌನವಾಗಿದ್ದರು.

ವಿಕ್ಕಿ: (ತುಸು ನಗುವಿನಿಂದ) ಹೊರಡೋಣ  ವಾ....

ನೀತು: ಹೌದು....... ಹೊರಡೋಣ...!

ವಿಕ್ಕಿ ಮತ್ತು ನೀತು: ಬೆಂಚುನಿಂದ  ಎದ್ದು, ಅಲ್ಲೀನ ಪರಿಸರಕ್ಕೆ ವಿಧೇಯ ಹೇಳುತ್ತಾ, MG ಪಾರ್ಕ್ ನ ಹೊರಗೆ ನಡೆದರು..

ವಿಕ್ಕಿ ಮತ್ತು ನೀತು ಅವರ ಮಾತುಗಳನ್ನ ಕೇಳಿದ ತಂಪಾದ ಗಾಳಿ, ಚಿಲಿಪಿಲಿ ಹಕ್ಕಿಗಳು, ಮರದ ಕೊಂಬೆರೆಂಬೆಗಳು, ಅಳಿಲು, ನಿರ್ಜೀವಿಯಾದ ಬೆಂಚು ಮತ್ತು ಅಲ್ಲಿನ ಪರಿಸರವು ಅವರಿಗೆ ಶುಭವಾಗಲೆಂದು  ಆಶೀರ್ವಾದ ಮಾಡುತ್ತಾ, ಈಗಿನ ಯುವಕರು ಪ್ರೀತಿಯೆಂದರೆ ಆಕರ್ಷಣೆ, ವ್ಯಾಮೋಹ, ಕಾಮಗಳೆಂದು ತಿಳಿದು ಅನರ್ಥಗೊಳಿಸಿದ್ದಾರೆ. ಆದರೆ ನೈಜ ಪ್ರೀತಿಯು, ವಿಶ್ವಾಸ ನಂಬಿಕೆಗಳಿಂದ ಒಬ್ಬರಿಗೆ ಒಬ್ಬರು ಬಾಳುವುದೇ ಎಂದು ಅರಿದವರ ಬಾಳು ಸುಖಮಯ. ನಾವು ನೋಡಿದ ಈ ಜೋಡಿಯ ಬಾಳು ಸುಖಮಯವಾಗಲಿದ್ದೀಯೇ? ಎಂದು ಗೊಣಗಿಕೊಳ್ಳುತ್ತಾ ಕತ್ತಲಲ್ಲಿ ಕಣ್ಮರೆಯಾದೆವು.

ಕಥೆಯ ಮೊದಲಿನ ಭಾಗ ಮುಕ್ತಾಯ....

ವೀಕ್ಷಿಸಿ ಹಲವು ಭಾಗಗಳಿಗಾಗಿ......

---------ಇ. ಪಿ. ಮಂಜುನಾಥ