ನಾನು ನಿಮ್ಮನ್ನು ಪ್ರೀತಿಸುವೆ..!

ನಾನು ನಿಮ್ಮನ್ನು ಪ್ರೀತಿಸುವೆ..!

ಕವನ

ಭಾರತ ಮಾತೆಯ ವೀರ ಪುತ್ರರು ನೀವು

ಸದಾ ಅಡಿಗಡಿಗೆ ಗಡಿಯನ್ನು ಕಾದಿರುವ

ರಣಹೇಡಿಗಳ ಸಂಚಿಗೆ ಬಲಿಯಾಗಿರುವ

ಎಂದಿಗೂ ನಾನು ನಿಮ್ಮನ್ನು ಪ್ರೀತಿಸುವೆ..! ||೧||

 

14 ರ ಪುಲ್ವಾಮಾದ ಸುಳಿಗಾಳಿ ದಾಳಿಗೆ

ಇಂಚೂ ಕದಲದೆ ನೆಲ ರಕ್ಷಿಸಿದ ದೇಹವು

ಇಂಚಿಂಚು ಹರಿ! ಹರಿದು ಛಿದ್ರವಾದರೂ

ಮತ್ತದೇ ಗತ್ತಿರುವ ನಿಮ್ಮನ್ನೇ ಪ್ರೀತಿಸುವೆ! ||೨||

 

ಉರಿದುರಿದು ಉರಿಯ ದಾಳಿಯ ಪಡೆದು

ವೈರಿಗಳ ನೆಲಹೊಕ್ಕು ಎದೆಯ ಸೀಳಿರುವ

ಹುತಾತ್ಮರಿಗೆ ಗೌರವ ಸಲ್ಲಿಸಿದ ಸಿಂಹಗಳು

ಎಂದೆಂದಿಗೂ ನಾನು ನಿಮ್ಮನ್ನು ಪ್ರೀತಿಸುವೆ! ||೩||

 

ಸ್ವಾಭಿಮಾನದ ಸಂಕೇತದ ಅಭಿಮಾನವು

ತೋರಿ ಬಿಡಿರಿ ಎಲ್ಲರೂ ತಪ್ಪದೆ ಗೌರವನು

ದೇಶ ವಿದೇಶ ಯಾವುದಕ್ಕಿದೆ ನಿಮ್ಮ ಬೆಲೆ.?

ನಾನೆಂದೂ ಪ್ರೀತಿಸುವೆ ನಮ್ಮ ಸೈನಿಕರನ್ನು! ||೪||

-ದ್ಯಾವಪ್ಪ. ಎಂ (ಮುಗುಳ್ನಗೆಯ ಮೌನಿ), ಕಾರವಾರ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್