ನಾನು ನೀನು ಸೇರಿ
ಕವನ
ನಾನು ನೀನು ಸೇರಿ
ಬದುಕಬಂಡಿ ಗಾಲಿಗಳಾಗಿ ಜೀವನರಥವ ಎಳೆಯೋಣ||
ನಾನ ನೀನು ಸೇರಿ ನದಿಯ ದಡಗಳಾಗಿ
ಪ್ರೇಮ ಜೀವನದಿಯ ಸಾಗರ ತೀರದೊರೆಗೂ ಬೆಳೆಸೋಣ||
ನಾನು ನೀನು ಸೇರಿ ಹಾಯಿದೋಣಿಯ
ಎಡಬಲದ ಹುಟ್ಟುಗಳಾಗಿ ದುಡಿದು ಸುಖ ಸಂಸಾರಸಾಗರ
ಸೆರೋಣ||
ನಾನು ನೀನು ವೈಮನಸು ಬೇಸರದಿ ದೂರ ಸರಿದು
ಸಾಗರದ ಆ ತೀರ ಈ ತೀರ ಆಗದಿರೋಣ||
ನಾನ ನೀನು ಹಠ ಹಮ್ಮಿನಿಂದ ಕವಲೊಡೆದ
ನದಿಗಳಾಗಿ ಒಣಗಿ ಸೊರಗಿ ಹಿಂಗದಿರೋಣ||
ನಾನು ನೀನು ಹಾಲುಜೇನಾಗಿ ಆನಂದದಿ ಬಾಳೋಣ
ನಾನು ನೀನು ನೀನು ನಾನಾಗದೆ ನಾವಾಗಿಯೇ ಇರೋಣ||