ನಾನು, ನೀನು ಹಾಗೂ ಮೇಧಾವಿಗಳು ಮರಣದಂಡನೆಯ ನೋವಿನ ಕನಸು ಕಾಣಬಾರದು: ಗಾದೆಗೊಂದು ಗುದ್ದು--ಭಾಗ ೩
ಬರಹ
(೧೧) ಒಬ್ಬನಿಗೆ ಮರಣದಂಡನೆ ವಿಧಿಸುವುದೆಂದರೆ ನಾಲಾಯಕ್ ಆದವನೊಬ್ಬನನ್ನು ಹುತಾತ್ಮನಾಗಿಸಿದಂತೆ.
(೧೨) ಸಾಯುವುದೆಂದರೆ ಬದುಕುವ ನೋವನ್ನು ಖುಷಿಯಾಗಿ ಕೊನೆಗಾಣಿಸಿದಂತೆ. ಬದುಕಿರುವವರ ಅಭಿಪ್ರಾಯವಿದು. ಏಕೆಂದರೆ, ಇವರ ಪ್ರಕಾರ ಸತ್ತಿರುವವರಿಗೆ ತಮ್ಮದೇ ಆದ ಒಂದು ನಿಲುವೆಂಬುದಿರುವುದಿಲ್ಲವಲ್ಲ!
(೧೩) ನಾನು ನೀನಲ್ಲದಿದ್ದರೂ, ನಿನ್ನೊಳಗೊಬ್ಬ ನಾನು ಇದ್ದಾಗ್ಯೂ ವ್ಯಾಕರಣಬದ್ಧವಾಗಿ ನನ್ನೊಳಗೆ ನೀನಿಲ್ಲವಲ್ಲ!
(೧೪) ನೀನು ಮೇಧಾವಿ ಎನಿಸಿಕೊಳ್ಳುವುದು ಬಹಳ ಸುಲಭ. ನಿನ್ನ ಸುತ್ತಲೂ ಸಾಕಷ್ಟು ಮೂರ್ಖರನ್ನು ಗುಡ್ಡೆಹಾಕಿಕೊಂಡರಾಯಿತು!
(೧೫) ಕನಸು ಮತ್ತು ಹಗಲುಗನಸುಗಳ ಮುಖಾಮುಖಿಯೇ ಕಲೆ. ಕನಸು ಕಲೆಯಾಗಲಾರದು, ಹಗಲುಗನಸು ಕಲೆಯನ್ನು ಸಾಧ್ಯವಾಗಿಸಲಾರದು!