ನಾನು ಮತ್ತು ಬರಹ
ಕವನ
ನಾನು
ಮತ್ತು
ನನ್ನ
ಬರಹಗ
ಳೇ
ಹೀಗೆ
ಹೇಗೆಂದರೆ ?
ಕೆಟ್ಟವರಿಗೆ
ಹರಾಮ್ !
ಒಳ್ಳೆಯವರಿಗೆ
ಹರೇ
ರಾಮ !!
***
ಬದ್ಧತೆ
ರಾತ್ರೆ
ಕಳೆದು
ಹಗಲಾದಂತೆ
ಉಟ್ಟ
ಬಟ್ಟೆಯಲ್ಲೇ
ಹೊರ
ಹೊರಟಿದ್ದೆ
ಜಗ
ಸುತ್ತಲು
ಬುದ್ಧನಾಗಲು !
***
ಗಝಲ್
ಹುಟ್ಟಿದ್ದು ಕಣ್ಣಿಗೆ ಕಂಡಿದ್ದು ಈ ನೆಲದಿ ನಿನ್ನ ತಪ್ಪೇ ಅಲ್ಲ
ಬೆಳೆದದ್ದು ಬಾಳಿ ಬದುಕಿದ್ದು ಈ ಕುಲದಿ ನಿನ್ನ ತಪ್ಪೇ ಅಲ್ಲ
ಒಪ್ಪಗಳ ಬರುವಿಕೆಗೆ ಕಾಯುತ್ತಾ ಕುಳಿತದ್ದಾದರು ಏಕೆ
ಹಲವರ ಕಣ್ಣುಗಳು ತುಂಬಾ ಹಳದಿ ನಿನ್ನ ತಪ್ಪೇ ಅಲ್ಲ
ತಲೆತಗ್ಗಿಸಿ ನಡೆಯುವ ಧರ್ಮವದು ನಿನ್ನದಲ್ಲ ತಿಳಿಯು
ಕೀಳು ಹೇಳುವವರ ನಾಲಿಗೆಯ ಮೆಟ್ಟಿದಿ ನಿನ್ನ ತಪ್ಪೇ ಅಲ್ಲ
ಕೈಹಿಡಿಯುವರ ಜೊತೆಗೆ ಸಾಗು ಸುತ್ತಲೂ ಬೆಳಕಿದೆ
ಆಡುವ ಮಂದಿಯ ಕೂಡ ಸಾಗಿದಿ ನಿನ್ನ ತಪ್ಪೇ ಅಲ್ಲ
ಪೂರ್ಣತೆಗೆ ಅಡೆ ತಡೆಗಳ ಗೋಡೆಗಳು ಇದೆಯಾ ಈಶಾ
ಕಾದುವರ ಮೇಲೆ ಬ್ರಹ್ಮಾಸ್ತ್ರವ ಚುಚ್ಚಿದಿ ನಿನ್ನ ತಪ್ಪೇ ಅಲ್ಲ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್