ನಾನೆಂಬ ಸ್ವಾರ್ಥ

ನಾನೆಂಬ ಸ್ವಾರ್ಥ

ಕವನ

ನಾನು , ನನ್ನದು , ಎಲ್ಲವೂ ನನ್ನದೇ

ಸರಿ ದಾರಿಯ ಅರಿಯದವನಿಗೆ,

ಯಾರದೋ ಹಾದಿಯಲಿ ಓಡುವ ಕಾರು ನನ್ನದು 

ಪಬ್ಲಿಕ್' ಪಾಥ್ ನಲ್ಲಿ ನಡೆಯುವ ಕಾಲೂ ನನ್ನದು 

ಮಿಕ್ಕಿದವರದಲ್ಲ.... ಬಡವರದಲ್ಲ....!

 

ಬದುಕಿಗೆ ತಪ್ಪು ದಾರಿ "ನಾನೆಂಬ ಸ್ವಾರ್ಥ",

ಕೊರೆದ ಮಾತ್ರಕ್ಕೆ ಭೂಮಿಯೊಳಗಿನ ನೀರು ನನ್ನದು.

ತಾನಾಗಿಯೇ ತುಂಬುವ ಅಂತರ್ಜಲಕೆ,

ತನ್ನ ನಾಮವು, ನನ್ನದೆಂಬ ಮಾತು ಹೀನರ್ಥ.

 

ಮುಂದುವರೆದಿತ್ತು " ನಾನೆಂಬ ಸ್ವಾರ್ಥ "

ಬಡವನೊಬ್ಬ ಉಪಕಾರವನಿತ್ತ ತನಕ.

"ನೀನೆಂದೂ ಯೋಚಿಸಬೇಡ, ಎಲ್ಲವೂ ತನ್ನದೆಂದು 

"ನೀನೆಂಬ ಸ್ವಾರ್ಥ" ಬತ್ತಿಹೋಗುವ ತನಕ.

 

-ಆಕಾಶ್ ಪೂಜಾರಿ ಗೇರುಕಟ್ಟೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್