ನಾನೆನ್ನದೆ
ಕವನ
ಹೆಸರು ಹೀಗೆಯೆ ಹಬ್ಬಿ ನಿಂತಿರೆ
ಹಸಿರು ತುಂಬಿದ ಬನದ ಸುತ್ತಲು
ಹಸಿವ ನೀಗುವ ಮನದಲಿ
ಮಸಿಯ ಭಾವನೆ ದೂರ ಹೋಗಲು
ಮುಸಿಯ ನಗುವದು ನಲುಗಿ ಕೂರಲು
ಖುಷಿಯು ಬಂದಿತು ತನುವಲಿ
ಹಣದ ರೋಗದಿ ಹಲರು ತಿರುಗುತ
ಹೆಣದ ರೀತಿಯೆ ಬಾಯ ತೆರೆಯುತ
ಗುಣವ ಮರೆಯುತ ಮೆರೆಯುತ
ಬಣವ ಕಟ್ಟುತ ರೋಷ ಹುಟ್ಟಲು
ಕುಣಿವ ಜನರಲಿ ಭಾಷೆ ಸತ್ತಿತು
ದಣಿವು ಬಾರದೆ ಹೋಯಿತು
ಬಾನು ಮಳೆಯನು ಸುರಿಸಿ ನಗುತಿರೆ
ಕಾನ ಮರಗಳು ಚಿಗುರಿ ನಲಿಯಲು
ಸೀನು ಬರುವುದೆ ನಮ್ಮಲಿ
ಯಾನ ಮಾಡುತ ಜೀವ ಸವೆಸಲು
ನಾನು ಹೇಳದೆ ಕೈಯ ಹಿಡಿಯುತ
ದಾನ ಮಾಡುವ ಬದುಕಲಿ
ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್