ನಾನೇಕೆ ಬಡವನಾಗಿ ಹುಟ್ಟಿದೆ?
ದಿನನಿತ್ಯ ನನ್ನ ಮನಸ್ಸಿನಲ್ಲಿ ಕಾಡುವ ಬಹುಮುಖ್ಯವಾಗಿ ಕಾಡುವ ಪ್ರಶ್ನೆ ಅಂದರೆ ನಾನೇಕೆ ಬಡವನಾಗಿ ಹುಟ್ಟಿದೆ ಈ ಭೂಮಿಯ ಮೇಲೆ? ಈ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವುದು ಕಷ್ಟಸಾಧ್ಯ ಏಕೆಂದರೆ ಹುಟ್ಟು ಅನ್ನೋದು ಬಡವ ಶ್ರೀಮಂತ ಅಂತ ಜಲ್ಮತಾಳುವುದಿಲ್ಲ. ಹುಟ್ಟಿದ ಮೇಲೆ ಮಗು ಬೆಳೆಯುತ್ತ ಬಂದಂತೆಲ್ಲ ಅವನಿಗೆ ಕಷ್ಟಗಳು ಬಂದಾಗ ಅವನಿಗೆ ಅನಿಸುತ್ತದೆ. ಕಷ್ಟಗಳೇ ಇಲ್ಲವೆಂದರೆ ಅವನಿಗೆ ಏನು ಅನಿಸುವುದಿಲ್ಲ. ಕಷ್ಟ ಅಂದರೆ ಸಮಸ್ಯೆಗಳು ಅದು ಯಾವುದೇ ಸಮಸ್ಯೆ ಇರಬಹುದು. "ಸಮಸ್ಯೆಗಳಿಲ್ಲದ ವ್ಯಕ್ತಿಗಳಿಲ್ಲ" ಬಡವನಿರಬಹುದು ಬಲ್ಲಿಗನಿಬಹುದು. ಆದರೆ ಹಣವಿರುವರು ಕೆಲವು ಸಮಸ್ಯೆಗಳಿಂದ ದೂರವಿರಬಹುದು ಅಷ್ಡೆ, ಬಡವನಾದವನು ಸಮಸ್ಯೆಗಳಿಂದ ದೂರ ಸರಿಯಲು ಸಾಧ್ಯವಾಗುವುದಿಲ್ಲ. ಜೀವನ ನೆಡಸುವುದು ಇಂದು ದುಸ್ಥರವಾಗಿದೆ. ಬೆಲೆ ಏರಿಕೆಯಿಂದ ಬದುಕು ನಿರ್ವಹಣೆ ಕಷ್ಟಸಾಧ್ಯ. ಮಾಡುವ ಕೆಲಸದಲ್ಲಿ ಕೈತುಂಬಾ ಸಂಬಳವಿಲ್ಲ ಜೀವನ ನಡಸಲಿಕ್ಕೆ ಬೇಕಾಗುವ ಹಣ ಸಾಕಾಗುತ್ತಿಲ್ಲ ಮನೆಯ ಸಂಸಾರ ನಡೆಸಲು ಮತ್ತು ಮಕ್ಕಳ ಶಿಕ್ಷಣ ಕೊಡಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಅನ್ನುವ ಎಷ್ಟೋ ಕುಟುಂಬಗಳು ಇಂದು ನಮ್ಮ ಕಣ್ಣ ಮುಂದೆ ಕಾಣುತ್ತಿವೆ.
ಉತ್ತಮ ಜೀವನ ನಡೆಸಲು ನನ್ನಿಂದ ಸಾಧ್ಯವಾಗುತ್ತಿಲ್ಲ ಅನ್ನುವ ಎಷ್ಟೋಂದು ಮನಸ್ಸುಗಳು ತಮ್ಮ ಆತ್ಮ ಸ್ಥೈರ್ಯ ಕಳೆದುಕೊಂಡಿವೆ. ತಮ್ಮ ಕುಟುಂಬ ನಿರ್ವಹಣೆಯಲ್ಲಿ ವಿಫಲರಾಗಿ ಮನನೊಂದು ಹೇಳುವ ಮಾತೇ ನಾನೇಕೆ ಬಡವನಾಗಿ ಹುಟ್ಟಿದೆ ಈ ಭೂಮಿಯ ಮೇಲೆ? ಈ ಪ್ರಶ್ನೆ ಕೆಲವರ ಬದುಕಿನಲ್ಲಿ ಪ್ರಶ್ನೆಯಾಗಿ ಉಳಿದಿದೆ. ಇನ್ನು ಕೆಲವರ ಬದುಕಿನಲ್ಲಿ ಪ್ರಶ್ನೆಪ್ರಶ್ನೆಯಾಗಿರದೆ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದಾರೆ. ಅದು ಅವರವರ ಜೀವನ ಶೈಲಿಯನ್ನು ಅವಲಂಬಿಸಿರುತ್ತದೆ. ನಾನು ಅಂದುಕೊಂಡಂತೆ ನನ್ನ ಜೀವನ ನಡೆಯುವುದಿಲ್ಲ ಕಾಲ ಮಾನದಲ್ಲಿ ಏರುಪೇರುಗಳು ಬರುತ್ತವೆ. ಈ ಏರುಪೇರುಗಳನ್ನು ನಾವು ನಮ್ಮ ಜೀವನದಲ್ಲಿ ನಿರ್ಭಯವಾಗಿ ಎದುರಿಸಬೇಕಾಗುತ್ತದೆ. ಇಲ್ಲವಾದರೆ ನಮ್ಮ ಬದುಕು ಒಂದು ಪ್ರಶ್ನೆಯಾಗಿ ಉಳಿಯುತ್ತದೆ. ಅದರಲ್ಲೂ ಬಡವನಾಗಿ ಹುಟ್ಟಿದ ವ್ಯಕ್ತಿಯು ಸಮಸ್ಯೆಯ ಸುಳಿಯಿಂದ ಹೊರಗೆ ಬರಲಾಗದೆ ಆಡುವ ಮಾತೆ ನಾನೇಕೆ ಬಡವನಾಗಿ ಹುಟ್ಟಿದೆ ಈ ಭೂಮಿಯ ಮೇಲೆ? ಹುಟ್ಟಿದರೆ ಶ್ರೀಮಂತನಾಗಿ ಹುಟ್ಟಬೇಕು ಎನ್ನುವ ಮಾತು ಅವನದಾಗಿರುತ್ತದೆ. ಅದು ಏನೆ ಇರಲಿ ಮನುಷ್ಯನಾದವನು ಕಷ್ಟ ಸುಖಗಳನ್ನು ಸಮನ್ವಯವಾಗಿ ಸ್ವೀಕರಿಸಿದಾಗ ಬದುಕಿಗೊಂದು ಅರ್ಥ ಬರುತ್ತದೆ. ಈ ಭೂಮಿಯ ಮೇಲೆ ಹುಟ್ಟಿದ ಮೇಲೆ ಪ್ರತಿಯೊಬ್ಬ ಮನುಷ್ಯನು ಬದುಕನ್ನು ಪ್ರೀತಿಯಿಂದ ಪ್ರೀತಿಸಿದಾಗ ಮಾತ್ರ ಅವರವರ ಬದುಕು ಸುಂದರವಾಗಿ ರೂಪಗೊಳ್ಳುತ್ತದೆ.
ಹೆಚ್ ವಿರುಪಾಕ್ಷಪ್ಪ ತಾವರಗೊಂದಿ
Comments
ಉ: ನಾನೇಕೆ ಬಡವನಾಗಿ ಹುಟ್ಟಿದೆ?
In reply to ಉ: ನಾನೇಕೆ ಬಡವನಾಗಿ ಹುಟ್ಟಿದೆ? by mnsrao
ಉ: ನಾನೇಕೆ ಬಡವನಾಗಿ ಹುಟ್ಟಿದೆ?