ನಾನ್ಯಾರು?

ನಾನ್ಯಾರು?

ಕವನ

ಇಂದು ತಿಳಿಯಬಯಸುವೇ ನಾನ್ಯಾರೆಂದು 

ಇಂದು ತಿಳಿಯಬಯಸುವೇ ನೀವ್ಯಾರೆಂದು

 

ದಯಮಾಡಿ ತಿಳಿಸಿ ನಿಮಗೆ ನಾನ್ಯಾರೆಂದು

ಕೃಪೆ ತೋರಿ ತಿಳಿಸಿ ನನಗೆ ನೀವ್ಯಾರೆಂದು

ನಮ್ಮ ನಿಮ್ಮ ಬಂಧವನ್ನು ತಿಳಿಸಿ

ನಿಮ್ಮ ನಮ್ಮ ಅನುಬಂಧವನ್ನು ಬೆಳೆಸಿ

!!ಇಂದು ತಿಳಿಯಬಯಸುವೇ ನಾನ್ಯಾರೆಂದು!!

 

ನೀವು ಸ್ನೇಹ ಬಂಧುವೇ 

ಇಲ್ಲ ಮೋಹ ಬಂಧುವೇ

ನೀವು ಪ್ರೇಮ ಬಂಧುವೇ 

ಇಲ್ಲ ನಿಷ್ಕಾಮ ಬಂಧುವೇ

!!ಇಂದು ತಿಳಿಯಬಯಸುವೇ ನಾನ್ಯಾರೆಂದು!!

 

ನಮ್ಮ ಬಂಧ ಸಹೋದರತ್ವವೇ

ಇಲ್ಲ ಪ್ರೀತಿ ಪಾತ್ರವೇ

ನೀವು ರಕ್ಷೆಗಾಗಿ ಬಂದ ಬಂಧುವೇ

ಇಲ್ಲ ಶಿಕ್ಷೆಗಾಗಿ ಬಂದ ಬಂಧುವೇ

!!ಇಂದು ತಿಳಿಯಬಯಸುವೇ ನಾನ್ಯಾರೆಂದು!!

 

ನೀವು ಗುರಿಯನ್ನು ತೋರಲು ಬಂದ ಬಂಧುವೇ

ಇಲ್ಲ ನಮ್ಮ ಗೋರಿಯನ್ನು ತೋಡಲು ಬಂದ ಬಂಧುವೇ

ನಮಗೆ ನೀವು ಗುರುಗಳೇ 

ಇಲ್ಲ ನಿಮಗೆ ನಾವು ಗುರುಗಳೇ

!!ಇಂದು ತಿಳಿಯಬಯಸುವೇ ನಾನ್ಯಾರೆಂದು!!

 

ಬಂಧವಿದೆ ಅನೇಕ ರೀತಿ 

ಸಂಬಂಧದಲ್ಲಿದೆ ಬಹಳ ಪ್ರೀತಿ

ಅನುಬಂಧವನ್ನು ಅರಿತುಕೊಳ್ಳಬೇಕು

ಸ್ವಾಭಿಮಾನಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು

!!ಇಂದು ತಿಳಿಯಬಯಸುವೇ ನಾನ್ಯಾರೆಂದು!!

-ತುಂಬೇನಹಳ್ಳಿ ಕಿರಣ್ ರಾಜು ಎನ್

ಚಿತ್ರ: ಇಂಟರ್ನೆಟ್ ತಾಣ

 

ಚಿತ್ರ್